Alia Bhatt: ‘ರಣಬೀರ್​ ಕಪೂರ್​ ಬೇಡ, ನೀವು ಮಾತ್ರ ಪೋಸ್​ ನೀಡಿ’: ಪಾಪರಾಜಿ ಮನವಿಗೆ ಆಲಿಯಾ ಪ್ರತಿಕ್ರಿಯೆ ಏನು?

Ranbir Kapoor: ಆಲಿಯಾ ಭಟ್​ ಸಿಂಗಲ್​ ಆಗಿ ಪೋಸ್​ ನೀಡಲಿ ಎಂದು ಫೋಟೋಗ್ರಾಫರ್​ಗಳು ಮನವಿ ಮಾಡಿಕೊಂಡರು. ಈ ಮನವಿಗೆ ರಣಬೀರ್​ ಕಪೂರ್​ ಸ್ಪಂದಿಸಿದರು. ಆದರೆ ಆಲಿಯಾ?

Alia Bhatt: ‘ರಣಬೀರ್​ ಕಪೂರ್​ ಬೇಡ, ನೀವು ಮಾತ್ರ ಪೋಸ್​ ನೀಡಿ’: ಪಾಪರಾಜಿ ಮನವಿಗೆ ಆಲಿಯಾ ಪ್ರತಿಕ್ರಿಯೆ ಏನು?
ಆಲಿಯಾ ಭಟ್​, ರಣಬೀರ್​ ಕಪೂರ್​

Updated on: Jun 22, 2023 | 6:15 PM

ಬಾಲಿವುಡ್​ನ ಸ್ಟಾರ್​ ದಂಪತಿಗಳಾದ ರಣಬಿರ್​ ಕಪೂರ್​ (Ranbir Kapoor) ಮತ್ತು ಆಲಿಯಾ ಭಟ್​ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ತುಂಬ ಬ್ಯುಸಿ ಆಗಿದ್ದಾರೆ. ಶೂಟಿಂಗ್​, ಪ್ರಮೋಷನ್​ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಈಗ ಕೊಂಚ ಬಿಡುವು ಮಾಡಿಕೊಂಡು ಅವರು ವಿದೇಶಕ್ಕೆ ಹಾರಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಆಗ ಪಾಪರಾಜಿಗಳು (Paparazzi) ಒಂದು ಮನವಿ ಮಾಡಿದ್ದಾರೆ. ‘ರಣಬೀರ್​ ಕಪೂರ್​ ಬೇಡ.. ನೀವು ಮಾತ್ರ ಪೋಸ್​ ನೀಡಿ’ ಎಂದು ಆಲಿಯಾಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಆಲಿಯಾ ಭಟ್​ (Alia Bhatt) ಅವರು ಈ ಮನವಿಯನ್ನು ಒಪ್ಪಿಕೊಂಡಿಲ್ಲ. ಗಂಡನ ಜೊತೆಯಾಗಿಯೇ ಅವರು ಪೋಸ್​ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಜೊತೆಯಾಗಿ ಕಾಣಿಸಿಕೊಂಡಾಗ ಮೊದಲಿಗೆ ಇಬ್ಬರ ಫೋಟೋವನ್ನು ಜೊತೆಯಾಗಿ ಕ್ಲಿಕ್ಕಿಸಲಾಯಿತು. ಆದರೆ ಆಲಿಯಾ ಭಟ್​ ಅವರ ಸಿಂಗಲ್​ ಫೋಟೋ ಕೂಡ ಬೇಕು ಎಂದು ಪಾಪರಾಜಿಗಳಿಗೆ ಅನಿಸಿತು. ಹಾಗಾಗಿ ಅವರೊಬ್ಬರೇ ಪೋಸ್​ ನೀಡಲಿ ಎಂದು ಫೋಟೋಗ್ರಾಫರ್​ಗಳು ಮನವಿ ಮಾಡಿಕೊಂಡರು. ಈ ಮನವಿಗೆ ರಣಬೀರ್​ ಕಪೂರ್​ ಸ್ಪಂದಿಸಿದರು. ಅವರು ಕೊಂಚ ಪಕ್ಕಕ್ಕೆ ಸರಿದುಕೊಂಡರು. ಆದರೆ ಇದು ಆಲಿಯಾಗೆ ಸರಿ ಎನಿಸಲಿಲ್ಲ. ಕೂಡಲೇ ಅವರು ರಣಬೀರ್​ ಕಪೂರ್​ ಹತ್ತಿರಕ್ಕೆ ಬಂದು ಪುನಃ ಪೋಸ್​ ನೀಡಿ ಮುಂದೆ ಸಾಗಿದರು.

ಆಲಿಯಾ ಭಟ್​ ಅವರಿಗೆ ರಣಬೀರ್​ ಕಪೂರ್​ ಮೇಲೆ ಸಾಕಷ್ಟು ವರ್ಷಗಳಿಂದಲೂ ಕ್ರಶ್ ಇತ್ತು. ಆದರೆ ಅದನ್ನು ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇತ್ತ ರಣಬೀರ್​ ಕಪೂರ್​ ಅವರು ಹಲವು ನಟಿಯರ ಜೊತೆ ಪ್ರೇಮ ಸಲ್ಲಾಪ ನಡೆಸಿದ್ದರು. ಆದರೆ ಅಂತಿಮವಾಗಿ ಅವರು ಕೈ ಹಿಡಿದಿದ್ದು ಆಲಿಯಾ ಅವರನ್ನು. ಕಳೆದ ವರ್ಷ ಏಪ್ರಿಲ್​ 14ರಂದು ಈ ಜೋಡಿ ಹಸೆ ಮನೆ ಏರಿತು. ಈ ದಂಪತಿಗೆ ಕೆಲವೇ ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದ್ದು, ರಹಾ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ: Ranbir Kapoor: ‘ಅನಿಮಲ್​’ ಸಿನಿಮಾದಲ್ಲಿ ಹೇಗಿರತ್ತೆ ರಣಬೀರ್​ ಕಪೂರ್​ ಅಬ್ಬರ? ಇಲ್ಲಿದೆ ನೋಡಿ ಝಲಕ್​

ವಿದೇಶಿ ಪ್ರವಾಸಕ್ಕೆ ಹೋಗಿರುವ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಮಗಳನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಮಗಳ ಫೋಟೋವನ್ನು ಕ್ಲಿಕ್ಕಿಸಲು ಅವರು ಅನುಮತಿ ನೀಡಿಲ್ಲ. ಪಾಪರಾಜಿಗಳಿಂದ ಮತ್ತು ಮಾಧ್ಯಮದ ಕಣ್ಣಿಂದ ಮಗಳನ್ನು ಅವರು ದೂರ ಇಟ್ಟಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಆಲಿಯಾ ಭಟ್​ ನಟನೆಯ ‘ಹಾರ್ಟ್​ ಆಫ್​ ಸ್ಟೋನ್​​’ ಸಿನಿಮಾ ಆಗಸ್ಟ್​ 11ರಂದು ಒಟಿಟಿಯಲ್ಲಿ ಬಿಡುಗಡೆಗೆ ಆಗಲಿದೆ. ಅದೇ ದಿನ ರಣಬೀರ್​ ಕಪೂರ್​ ಅವರ ‘ಅನಿಮಲ್​’ ಸಿನಿಮಾವು ಚಿತ್ರಮಂದಿರದಲ್ಲಿ ತೆರೆಕಾಣಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us