Rashmika Mandanna: ‘ಅನಿಮಲ್​’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನೀಡಿದ್ದ 50 ದಿನದ ಕಾಲ್​ಶೀಟ್​ ಅಂತ್ಯ; ಮುಂದಿನ ಗುರಿ ‘ಪುಷ್ಪ 2’

Animal Movie: ‘ಅನಿಮಲ್​’ ಸಿನಿಮಾದ ಶೂಟಿಂಗ್​ ಮುಗಿದ ಬಳಿಕ ರಶ್ಮಿಕಾ ಮಂದಣ್ಣ ಅವರು ಕೊಂಚ ಎಮೋಷನಲ್​ ಆಗಿದ್ದಾರೆ. ಹಾಗಾಗಿ ಅವರು ತಮ್ಮ ಫೀಲಿಂಗ್ಸ್​ ಹಂಚಿಕೊಂಡಿದ್ದಾರೆ.

Rashmika Mandanna: ‘ಅನಿಮಲ್​’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನೀಡಿದ್ದ 50 ದಿನದ ಕಾಲ್​ಶೀಟ್​ ಅಂತ್ಯ; ಮುಂದಿನ ಗುರಿ ‘ಪುಷ್ಪ 2’
ರಶ್ಮಿಕಾ ಮಂದಣ್ಣ

Updated on: Jun 21, 2023 | 7:00 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಎಲ್ಲ ಭಾಷೆಯ ಸ್ಟಾರ್​ ನಟರ ಜೊತೆ ಅಭಿನಯಿಸುವ ಅವಕಾಶ ಅವರಿಗೆ ಸಿಗುತ್ತಿದೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಅವರ ಹವಾ ಜೋರಾಗಿದೆ. ರಣಬೀರ್​ ಕಪೂರ್​ (Ranbir Kapoor) ಜೊತೆ ಅವರು ನಟಿಸಿದ ‘ಅನಿಮಲ್​’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆಗಸ್ಟ್​ 11ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಈ ಸಿನಿಮಾ ಮೇಲೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂದಹಾಗೆ, ರಶ್ಮಿಕಾ ಅವರು ಈ ಚಿತ್ರಕ್ಕೆ ನೀಡಿದ್ದು ಬರೋಬ್ಬರಿ 50 ದಿನಗಳ ಕಾಲ್​ಶೀಟ್​. ಅದು ಈಗ ಮುಕ್ತಾಯವಾಗಿದೆ. ಜೂನ್​ 19ರ ರಾತ್ರಿ ಅವರು ‘ಅನಿಮಲ್​’ (Animal Movie) ಸಿನಿಮಾದಲ್ಲಿನ ತಮ್ಮ ಪಾತ್ರದ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ. ಇನ್ನೇನಿದ್ದರೂ ಅವರ ಗಮನವೆಲ್ಲ ‘ಪುಷ್ಪ 2’ ಸಿನಿಮಾದ ಮೇಲೆ ಇರಲಿದೆ.

‘ಅನಿಮಲ್​’ ಸಿನಿಮಾದ ಶೂಟಿಂಗ್​ ಮುಗಿದ ಬಳಿಕ ರಶ್ಮಿಕಾ ಮಂದಣ್ಣ ಅವರು ಕೊಂಚ ಎಮೋಷನಲ್​ ಆಗಿದ್ದಾರೆ. ಹಾಗಾಗಿ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ತಮ್ಮ ಫೀಲಿಂಗ್ಸ್​ ಹಂಚಿಕೊಂಡಿದ್ದಾರೆ. ಇಡೀ ಸಿನಿಮಾ ತಂಡವನ್ನು ಅವರು ಕೊಂಡಾಡಿದ್ದಾರೆ. ಅದರಲ್ಲೂ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ ಹಾಗೂ ನಾಯಕ ನಟ ರಣಬೀರ್​ ಕಪೂರ್​ ಬಗ್ಗೆ ಹೆಚ್ಚು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಅವರಿಗೆ ಈ ಸಿನಿಮಾ ಸಿಕ್ಕಿದ್ದು ಸಡನ್​ ಆಗಿ. ತುಂಬ ಖುಷಿಯಿಂದಲೇ ಅವರು ಈ ಪ್ರಾಜೆಕ್ಟ್​ ಒಪ್ಪಿಕೊಂಡಿದ್ದರು. ಈಗ ಶೂಟಿಂಗ್​ ಮುಗಿದಿದ್ದಕ್ಕೆ ಇಡೀ ತಂಡದ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ತನ್ನದೇ ಮ್ಯಾನೇಜರ್​ನಿಂದ ಮೋಸಕ್ಕೊಳಗಾದ ರಶ್ಮಿಕಾ ಮಂದಣ್ಣ? 80 ಲಕ್ಷ ರೂಪಾಯಿ ನಷ್ಟ

ಇತ್ತೀಚೆಗಷ್ಟೇ ‘ಅನಿಮಲ್​’ ಸಿನಿಮಾದ ಪ್ರೀ-ಟೀಸರ್​ ವಿಡಿಯೋ ಬಿಡುಗಡೆ ಆಗಿತ್ತು. ಅದರಲ್ಲಿ ರಣಬೀರ್​ ಕಪೂರ್ ಅವರ ಮುಖ ಸರಿಯಾಗಿ ಕಾಣಿಸಿಲ್ಲ. ಆದರೂ ಕೂಡ ಆ್ಯಕ್ಷನ್​ ಅಬ್ಬರ ಜೋರಾಗಿದೆ. ಅದನ್ನು ನೋಡಿದ ಬಳಿಕ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ ಅವರ ಪಾತ್ರ ಹೇಗಿರಲಿದೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ‘ಅರ್ಜುನ್​ ರೆಡ್ಡಿ’ ಮತ್ತು ‘ಕಬೀರ್​ ಸಿಂಗ್​’ ಸಿನಿಮಾದ ಬಳಿಕ ಸಂದೀಪ್​ ರೆಡ್ಡಿ ವಂಗ ಅವರು ‘ಅನಿಮಲ್​’ ಸಿನಿಮಾಗೆ ನಿರ್ದೇಶನ ಮಾಡಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Rashmika Mandanna: ಸಂತೋಷದ ಜೀವನಕ್ಕಾಗಿ ಅಭಿಮಾನಿಗಳಿಗೆ ಹೊಸ ಮಂತ್ರ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

‘ಅನಿಮಲ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಮಾತ್ರವಲ್ಲದೇ ಅನಿಲ್​ ಕಪೂರ್​, ಬಾಬಿ ಡಿಯೋಲ್​ ಮುಂತಾದ ಫೇಮಸ್​ ಕಲಾವಿದರು ಕೂಡ ನಟಿಸಿದ್ದಾರೆ. ಈ ಸಿನಿಮಾದ ಮೇಕಿಂಗ್​ ಗುಣಮಟ್ಟ ಗಮನ ಸೆಳೆಯುತ್ತಿದೆ. ಮೊದಲೇ ಹೇಳಿದಂತೆ, ಪ್ರೀ-ಟೀಸರ್​ ವಿಡಿಯೋದಲ್ಲಿ ರಣಬೀರ್​ ಕಪೂರ್​ ಅವರ ಮುಖ ಪೂರ್ತಿಯಾಗಿ ಕಾಣಿಸಿಲ್ಲ. ಟೀಸರ್​ನಲ್ಲಿ ಅವರನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. ಟೀಸರ್​ ರಿಲೀಸ್​ ಡೇಟ್​ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us