Salman Khan: ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ಅಕ್ಷಯ್​, ಸಲ್ಲು: ಇದಕ್ಕಾಗಿ ಪಡೆದ ಹಣ ಎಷ್ಟು?

Salman Khan Akshay Kumar Viral Video: ದೆಹಲಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬಂದ ಅಕ್ಷಯ್​ ಕುಮಾರ್​ ಮತ್ತು ಸಲ್ಮಾನ್​ ಖಾನ್​ ಅವರು 90ರ ದಶಕದ ಬಾಲಿವುಡ್​ ಗೀತೆಗಳಿಗೆ ಡ್ಯಾನ್ಸ್​ ಮಾಡಿದ್ದಾರೆ. ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ನೋಡಿ ಅತಿಥಿಗಳಿಗೆ ಖುಷಿ ಆಗಿದೆ.

Salman Khan: ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ಅಕ್ಷಯ್​, ಸಲ್ಲು: ಇದಕ್ಕಾಗಿ ಪಡೆದ ಹಣ ಎಷ್ಟು?
ಅಕ್ಷಯ್ ಕುಮಾರ್, ಸಲ್ಮಾನ್ ಖಾನ್

Updated on: Feb 20, 2023 | 10:18 PM

ಸೆಲೆಬ್ರಿಟಿಗಳು ಹಣ ಗಳಿಸಲು ಹಲವು ದಾರಿ ಕಂಡುಕೊಂಡಿರುತ್ತಾರೆ. ಸಿನಿಮಾಗಳಲ್ಲಿ ನಟಿಸುವ ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತದೆ. ಜಾಹೀರಾತುಗಳಲ್ಲಿ ಕಾಣಿಸಿಕೊಂಡರೂ ಸಂಬಳ ನೀಡಲಾಗುತ್ತದೆ. ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಹೋದರೂ ಹಣ ಪಡೆಯುತ್ತಾರೆ. ಅಷ್ಟೇ ಅಲ್ಲ, ಶ್ರೀಮಂತರ ಮದುವೆಗಳಲ್ಲಿ ಡ್ಯಾನ್ಸ್​ ಮಾಡಿಯೂ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಾರೆ. ಇದೀಗ ಅಕ್ಷಯ್​ ಕುಮಾರ್ (Akshay Kumar)​ ಮತ್ತು ಸಲ್ಮಾನ್​ ಖಾನ್​ (Salman Khan) ಅವರು ಅದೇ ಕಾರಣಕ್ಕಾಗಿ ಸುದ್ದಿ ಆಗಿದ್ದಾರೆ. ಬಾಲಿವುಡ್​ನ (Bollywood) ಈ ಸ್ಟಾರ್​ ನಟರು ದೆಹಲಿಯ ಒಂದು ಮದುವೆಗೆ ಹಾಜರಿ ಹಾಕಿದ್ದಾರೆ. ಅಲ್ಲಿ ನೆರೆದಿದ್ದ ಅತಿಥಿಗಳ ಎದುರಿಗೆ ಇವರಿಬ್ಬರು ಡ್ಯಾನ್ಸ್​ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಕ್ಕಿದೆ.

ಮೂಲಗಳ ಪ್ರಕಾರ ಸಲ್ಮಾನ್​ ಖಾನ್​ ಅವರು ಈ ರೀತಿ ಮದುವೆಯಲ್ಲಿ ಡ್ಯಾನ್ಸ್​ ಮಾಡಲು 2 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಾರೆ. ಅಕ್ಷಯ್​ ಕುಮಾರ್​ ಕೂಡ ಕಮ್ಮಿ ಏನಿಲ್ಲ. ಅವರು ಬರೋಬ್ಬರಿ 2.5 ಕೋಟಿ ರೂಪಾಯಿ ಕೇಳುತ್ತಾರೆ. ಕೆಲವೇ ನಿಮಿಷಗಳ ಕಾಲ ವೇದಿಕೆ ಮೇಲೆ ಡ್ಯಾನ್ಸ್​ ಮಾಡಿದ್ದಕ್ಕೆ ಅವರಿಗೆ ಇಷ್ಟೊಂದು ಹಣ ಸಿಗುತ್ತದೆ. ಕೆಲವೇ ಕೆಲವು ಶ್ರೀಮಂತರು ಮಾತ್ರ ಈ ರೀತಿ ದುಬಾರಿ ಮದುವೆ ಮಾಡಲು ಸಾಧ್ಯ.

ಇದನ್ನೂ ಓದಿ
Akshay Kumar: ಸತತ ಸೋಲು ಕಂಡರೂ ಅಕ್ಷಯ್​ ಕುಮಾರ್​ ನಂ.1; ಇದು ಯಾವ ಲೆಕ್ಕಾಚಾರ?
Cuttputlli: ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಗೆಲುವು; ಪೂರ್ತಿ ಬದಲಾಗುತ್ತಾ ಸ್ಟಾರ್​ ನಟನ ಭವಿಷ್ಯದ ಪ್ಲ್ಯಾನ್​?
Akshay Kumar: ವರದಕ್ಷಿಣೆ ಪಿಡುಗಿಗೆ ಅಕ್ಷಯ್​ ಕುಮಾರ್ ಪ್ರೋತ್ಸಾಹ? ಸರ್ಕಾರಿ ಜಾಹೀರಾತಿನಲ್ಲಿ ದೊಡ್ಡ ಎಡವಟ್ಟು
Cuttputlli: ತಪ್ಪು ತಿದ್ದಿಕೊಂಡ ಅಕ್ಷಯ್​ ಕುಮಾರ್​; ಒಂದು ನಿರ್ಧಾರದಿಂದ ಆಯ್ತು ನೂರಾರು ಕೋಟಿ ರೂ. ಲಾಭ

ಇದನ್ನೂ ಓದಿ: Ram Charan: ಅಕ್ಷಯ್​ ಕುಮಾರ್​ ಸಿನಿಮಾದ ಹಾಡಿಗೆ ರಾಮ್​ ಚರಣ್​ ಬಿಂದಾಸ್​ ಡ್ಯಾನ್ಸ್​; ವಿಡಿಯೋ ವೈರಲ್​

ದೆಹಲಿಯಲ್ಲಿ ನಡೆದ ಮದುವೆ ಸಮಾರಂಭಕ್ಕೆ ಬಂದ ಅಕ್ಷಯ್​ ಕುಮಾರ್​ ಮತ್ತು ಸಲ್ಮಾನ್​ ಖಾನ್​ ಅವರು 90ರ ದಶಕದ ಬಾಲಿವುಡ್​ ಗೀತೆಗಳಿಗೆ ಡ್ಯಾನ್ಸ್​ ಮಾಡಿದ್ದಾರೆ. ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ನೋಡಿ ಎಲ್ಲರಿಗೂ ಖುಷಿ ಆಗಿದೆ. ಅಕ್ಷಯ್​ ಕುಮಾರ್​ ನಟನೆಯ ‘ಸೆಲ್ಫೀ’ ಸಿನಿಮಾ ಫೆಬ್ರವರಿ 24ರಂದು ತೆರೆಕಾಣಲಿದೆ. ಈ ಚಿತ್ರದ ‘ಮೈ ಕಿಲಾಡಿ ತು ಅನಾಡಿ..’ ಹಾಡು ವೈರಲ್​ ಆಗಿದೆ. ಈ ಗೀತೆಗೂ ಅಕ್ಷಯ್​ ಕುಮಾರ್​ ಹೆಜ್ಜೆ ಹಾಕಿದ್ದಾರೆ. ಆ ಮೂಲಕ ಮದುವೆ ಮನೆಯಲ್ಲೂ ತಮ್ಮ ಚಿತ್ರದ ಪ್ರಚಾರ ಮಾಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಅಭಿಮಾನಿಗಳು ಇದನ್ನು ನೋಡಿ ಖುಷಿಪಟ್ಟಿದ್ದಾರೆ. ಆದರೆ ಕೆಲವರು ಟ್ರೋಲ್​ ಮಾಡಿದ್ದಾರೆ. ‘ಹಣಕ್ಕಾಗಿ ಈ ರೀತಿ ಮದುವೆಯಲ್ಲಿ ಕುಣಿಯುವುದು ಸರಿಯಲ್ಲ’ ಎಂದು ನೆಟ್ಟಿಗರು ಖಾರವಾಗಿ ಕಮೆಂಟ್​ ಮಾಡಿದ್ದಾರೆ. ಸಲ್ಮಾನ್​ ಖಾನ್​, ಅಕ್ಷಯ್​ ಕುಮಾರ್​ ಮಾತ್ರವಲ್ಲದೇ ಬಾಲಿವುಡ್​ನ ಇತರೆ ಸೆಲೆಬ್ರಿಟಿಗಳು ಕೂಡ ಈ ರೀತಿ ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿ ಹಣ ಗಳಿಸುತ್ತಾರೆ. ಶಾರುಖ್​ ಖಾನ್​ ಅವರು ಕೂಡ 2 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us