ಬಿಗ್‌ ಬಾಸ್‌ ವೇದಿಕೆಯಲ್ಲಿ ಶರ್ಟ್‌ ಬಿಚ್ಚಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಸಲ್ಮಾನ್‌ ಖಾನ್‌

ಸಲ್ಮಾನ್ ಖಾನ್ ಅವರ ಇತ್ತೀಚಿನ ಲುಕ್ ನೋಡಿ ಅಭಿಮಾನಿಗಳು ಗಾಬರಿ ಆಗಿದ್ದರು. ಅಲ್ಲದೇ, ಕೆಲವರು ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಅಂಥವರಿಗೆ ಸಲ್ಮಾನ್ ಖಾನ್ ಖಡಕ್ ತಿರುಗೇಟು ನೀಡಿದ್ದಾರೆ. ತಮ್ಮ ಆರೋಗ್ಯದ ಕುರಿತು ಹಬ್ಬಿದ್ದ ವದಂತಿಗೆ ತೆರೆ ಎಳೆದಿದ್ದಾರೆ. ಈ ಸ್ಪಷ್ಟನೆಯಿಂದಾಗಿ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಬಿಗ್‌ ಬಾಸ್‌ ವೇದಿಕೆಯಲ್ಲಿ ಶರ್ಟ್‌ ಬಿಚ್ಚಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಸಲ್ಮಾನ್‌ ಖಾನ್‌
Salman Khan
Image Credit source: colorstv

Updated on: Sep 20, 2026 | 8:13 AM

ಬಾಲಿವುಡ್‌ ಸೂಪರ್‌ಸ್ಟಾರ್‌ ಹಾಗೂ ಬಿಗ್‌ ಬಾಸ್‌ನ ಜನಪ್ರಿಯ ನಿರೂಪಕ ಸಲ್ಮಾನ್‌ ಖಾನ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಸ್ತುತ ಪ್ರಸಾರವಾಗುತ್ತಿರುವ ಬಿಗ್‌ ಬಾಸ್‌ ಸೀಸನ್‌ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ, ಸಲ್ಮಾನ್‌ ಖಾನ್‌ ಅವರು ಸ್ಪರ್ಧಿಗಳ ವರ್ತನೆಯನ್ನು ಖಂಡಿಸಿದ್ದಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಯಸ್ಸು, ತೂಕ ಮತ್ತು ಹೇರ್‌ಸ್ಟೈಲ್‌ ಬಗ್ಗೆ ಟ್ರೋಲ್‌ ಮಾಡುತ್ತಿದ್ದವರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ವೇದಿಕೆಯ ಮೇಲೆಯೇ ಹ್ಯಾಟ್‌, ಜಾಕೆಟ್‌ ಮತ್ತು ಶರ್ಟ್‌ ತೆರೆದು ತಮ್ಮ ಫಿಟ್ನೆಸ್‌ ಪ್ರದರ್ಶಿಸುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.

ಕಳೆದ ವಾರ ಗೇಮಿಂಗ್‌ ಕಮ್ಯುನಿಟಿ ಮೂಲಕ ಸಲ್ಮಾನ್ ವಿರುದ್ಧ ಕಾಮೆಂಟ್ ಮಾಡಿದ್ದ ಸ್ಪರ್ಧಿಗಳನ್ನು ನೇರವಾಗಿ ಪ್ರಶ್ನಿಸಿದ ಸಲ್ಮಾನ್, ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ನೆಗೆಟಿವಿಟಿ ಬಗ್ಗೆ ಆಕ್ರೋಶ ಹೊರಹಾಕಿದರು. ‘ಏಕೆ ಟ್ರೋಲ್ ಮಾಡಬೇಕು? ಇದರ ಹಿಂದೆ ಇರುವ ಮನಸ್ಥಿತಿ ಏನು? ನನ್ನ ಮೇಲೂ ಇದು ನಡೆದಿದೆ. ಭಾಯ್ ದಪ್ಪಗಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಾರೆ. ಸರಿ, ಈಗ ಟ್ರೋಲ್ ಮಾಡಿ ನೋಡೋಣ’ ಎನ್ನುತ್ತಲೇ ಸಲ್ಮಾನ್ ಖಾನ್ ಅವರು ಶರ್ಟ್ ತೆಗೆದರು.

ಶರ್ಟ್ ತೆಗೆದು ಕೋಪಗೊಂಡ ಸಲ್ಮಾನ್ ಖಾನ್:

ಸಲ್ಮಾನ್ ಖಾನ್ ಅವರು ತಮ್ಮ ಹ್ಯಾಟ್, ಜಾಕೆಟ್ ಮತ್ತು ಶರ್ಟ್ ತೆಗೆದು ಮೈಕಟ್ಟು ಪ್ರದರ್ಶಿಸಿದರು. ‘ಮೊದಲು ನಿಮ್ಮನ್ನು ನೀವು ನೋಡಿಕೊಳ್ಳಿ. ಇತರರ ಬಗ್ಗೆ ಕಾಮೆಂಟ್ ಮಾಡುವ ಮೊದಲು ನಿಮ್ಮ ಮತ್ತು ನಿಮ್ಮ ಪೋಷಕರ ಆರೋಗ್ಯದ ಕಡೆ ಗಮನ ಹರಿಸಿ’ ಎಂದು ಖಡಕ್ ಆಗಿ ಬುದ್ಧಿ ಹೇಳಿದರು. ಸಲ್ಮಾನ್ ಅವರ ಈ ದಿಟ್ಟತನಕ್ಕೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು.

ಎದೆನೋವು, ವೈರಲ್ ಪ್ರೋಮೋ ಮತ್ತು ಆರೋಗ್ಯದ ನಿಜಸ್ಥಿತಿ:

ಇತ್ತೀಚೆಗೆ ಬಿಡುಗಡೆಯಾದ ಬಿಗ್ ಬಾಸ್ ಪ್ರೋಮೋವೊಂದರಲ್ಲಿ ಸಲ್ಮಾನ್ ಖಾನ್ ವೇದಿಕೆಯ ಮೇಲೆ ಎದೆ ಹಿಡಿದುಕೊಂಡು ನೋವಿನಿಂದ ನರಳುತ್ತಿರುವಂತೆ ಮತ್ತು ವೈದ್ಯರನ್ನು ಕರೆಯುತ್ತಿರುವಂತೆ ತೋರಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಅಭಿಮಾನಿಗಳಲ್ಲಿ ತೀವ್ರ ಆತಂಕವನ್ನು ಉಂಟುಮಾಡಿತ್ತು.

ಇದನ್ನೂ ಓದಿ: ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ನಿಂದ ನಟ ಸಲ್ಮಾನ್​ ಖಾನ್​ಗೆ ಮತ್ತೆ ಕೊಲೆ ಬೆದರಿಕೆ

ಸಲ್ಮಾನ್ ಖಾನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬ ವದಂತಿಗಳು ಹರಡುತ್ತಿದ್ದಂತೆ, ಅವರು ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಬಂದ ವದಂತಿಗಳಿಗೆ ತೆರೆ ಎಳೆದ ಸಲ್ಮಾನ್, ‘ದೇವರ ದಯೆಯಿಂದ ನನ್ನ ಆರೋಗ್ಯ ಸಂಪೂರ್ಣವಾಗಿ ಚನ್ನಾಗಿದೆ. ಯಾವುದೇ ತೊಂದರೆಯಿಲ್ಲ’ ಎಂದು ಬರೆದುಕೊಂಡಿದ್ದಾರೆ. ಶೋನಲ್ಲಿ ನಡೆದ ಘಟನೆ ಅಥವಾ ದೃಶ್ಯವನ್ನು ವೀಕ್ಷಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:08 am, Sun, 20 September 26

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us