ಸಲ್ಮಾನ್ ‘ಸಿಕಂದರ್’ಗೆ ಮುಗಿಯಿತು ಸೆನ್ಸಾರ್ ಪ್ರಕ್ರಿಯೆ; ಚಿತ್ರದ ಅವಧಿ ಎಷ್ಟು?

ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಚಿತ್ರ ಮಾರ್ಚ್ 30ರಂದು ತೆರೆಕಾಣುತ್ತಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರೆತಿದ್ದು, ಯಾವುದೇ ಕಟ್ ಇಲ್ಲದೆ ಬಿಡುಗಡೆಯಾಗುತ್ತಿದೆ. ಚಿತ್ರದ ಅವಧಿ 2 ಗಂಟೆ 30 ನಿಮಿಷಗಳಾಗಿದ್ದು, ಟ್ರೇಲರ್ 3 ನಿಮಿಷ 38 ಸೆಕೆಂಡ್ ಗಳಷ್ಟಿದೆ.

ಸಲ್ಮಾನ್ ‘ಸಿಕಂದರ್’ಗೆ ಮುಗಿಯಿತು ಸೆನ್ಸಾರ್ ಪ್ರಕ್ರಿಯೆ; ಚಿತ್ರದ ಅವಧಿ ಎಷ್ಟು?
ರಶ್ಮಿಕಾ-ಸಲ್ಮಾನ್
Edited By:

Updated on: Mar 31, 2025 | 7:58 AM

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ ಸಿನಿಮಾ ಮಾರ್ಚ್ 30ಕ್ಕೆ ಗ್ರ್ಯಾಂಡ್ ರಿಲೀಸ್ ಆಗಲಿದೆ. ಸಾಮಾನ್ಯವಾಗಿ ಸಿನಿಮಾಗಳು ಗುರುವಾರ ಅಥವಾ ಶುಕ್ರವಾರ ತೆರೆಗೆ ಬರುತ್ತವೆ. ಆದರೆ, ಸಲ್ಮಾನ್ ಖಾನ್ ನಟನೆಯ ಈ ಚಿತ್ರವು ಭಾನುವಾರ ತೆರೆಗೆ ಬರಲಿದೆ ಎಂಬುದು ವಿಶೇಷ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈಗ ಸಿನಿಮಾ ರಿಲೀಸ್​ಗೂ ಮೊದಲು ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ನಡೆದಿದೆ. ಯಾವುದೇ ಕಟ್ ಇಲ್ಲದೆ ಸಿನಿಮಾ ತೆರೆಗೆ ಬರುತ್ತಿದೆ.

ಶುಕ್ರವಾರ (ಮಾರ್ಚ್ 21) ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಥಿಯೇಟರ್​ನಲ್ಲಿ ರಿಲೀಸ್ ಆಗಲಿರುವ ಟ್ರೇಲರ್ 3 ನಿಮಿಷ 38 ಸೆಕೆಂಡ್ ಇದೆ. ಇದನ್ನು ಕೇಳಿದ ಬಳಿಕ ಇಡೀ ಸಿನಿಮಾದ ಸತ್ವವನ್ನು ಟ್ರೇಲರ್​ನಲ್ಲಿ ತೋರಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಇನ್ನು ಸಿನಿಮಾದ ಅವಧಿ 150.8 ನಿಮಿಷ ಇದೆ. ಅಂದರೆ, ಸಿನಿಮಾ 2 ಗಂಟೆ 30 ನಿಮಿಷ ಇರಲಿದೆ. ಚಿತ್ರಕ್ಕೆ ಯುಎ ಪ್ರಮಾಣ ಪತ್ರ ಸಿಕ್ಕಿದ್ದು, 13 ವರ್ಷ ಮೇಲ್ಪಟ್ಟವರು ಚಿತ್ರವನ್ನು ವೀಕ್ಷಿಸಬಹುದು.

ಸಲ್ಮಾನ್ ಖಾನ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಕಂಡೇ ಇಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲಿ ಎಂದು ಎಲ್ಲರೂ ಹಾರೈಸುತ್ತಾ ಇದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಅವರು ಮತ್ತೆ ಟ್ರ್ಯಾಕ್​ಗೆ ಮರಳಲಿ ಎಂದು ಕೋರುತ್ತಿದ್ದಾರೆ.

ಇದನ್ನೂ ಓದಿ
ರಾಜಮೌಳಿ ಸಿನಿಮಾ ಲೀಕ್ ವಿಡಿಯೋ ನೋಡುವವರಿಗೆ ಎಚ್ಚರಿಕೆ ಕೊಟ್ಟ ಪೃಥ್ವಿರಾಜ್
ಬಂದ್ ವೇಳೆ ಥಿಯೇಟರ್​ನಲ್ಲಿ ಸಿನಿಮಾ ನೋಡೋ ಪ್ಲ್ಯಾನ್ ಬೇಡ; ಪ್ರದರ್ಶನ ಸಮಯ?
ಚಿರಂಜೀವಿ ಭೇಟಿ ಮಾಡಿಸೋ ನೆಪದಲ್ಲಿ ಹಣ ಪೀಕಿದ ಖದೀಮರು; ಚಿರಂಜೀವಿ ಎಚ್ಚರಿಕೆ
4 ವರ್ಷಗಳ ದಾಂಪತ್ಯ ಅಂತ್ಯ; ಧನಶ್ರೀಗೆ ಒಂದು ದಿನಕ್ಕೆ ಸಿಕ್ಕ ಹಣ ಇಷ್ಟೊಂದಾ?

‘ಸಿಕಂದರ್’ ರಶ್ಮಿಕಾ ಪಾಲಿಗೆ ಮತ್ತೊಂದು ವಿಶೇಷ ಸಿನಿಮಾ. ಈಗಾಗಲೇ ಅವರ ನಟನೆಯ ಮೂರು ಸಿನಿಮಾಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈಗ ಈ ಚಿತ್ರವೂ ಹಿಟ್ ಆಗಿ ಈ ಕ್ಲಬ್ ಸೇರಿದರೆ ಅವರ ಪಾಲಿಗೆ 500 ಕೋಟಿ ರೂಪಾಯಿ ಕ್ಲಬ್ ಸೇರಿದ ನಾಲ್ಕನೇ ಸಿನಿಮಾ ಇದಾಗಲಿದೆ. ಎಆರ್ ಮುರುಗದಾಸ್ ಅವರು ಈ ಮೊದಲು ‘ಘಜಿನಿ’ ಸಿನಿಮಾ ಮಾಡಿದ್ದರು. ಇದು ಹಿಟ್ ಆಯಿತು. ಈ ಕಾರಣದಿಂದಲೂ ಈ ಚಿತ್ರದ ಮೇಲೆ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಸಿಕಂದರ್’ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಇಷ್ಟೊಂದಾ?

ಮುರುಗದಾಸ್  ಅವರು ಶೀಘ್ರವೇ ‘ಘಜಿನಿ 2’ ಸಿನಿಮ ಮಾಡಲಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:33 am, Sat, 22 March 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us