ನಟ ಸಂಜಯ್ ದತ್ (Sanjay Dutt) ಅವರಿಗೆ ಇಂದು (ಜುಲೈ 29) ಬರ್ತ್ಡೇ ಸಂಭ್ರಮ. ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅವರು ಕನ್ನಡದ ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂಜಯ್ ದತ್ ಅವರ ಕುರಿತು ‘ಸಂಜು’ (Sanju Movie) ಹೆಸರಿನ ಬಯೋಪಿಕ್ ಕೂಡ ಬಂದಿತ್ತು. ಇದರಲ್ಲಿ ವಿವಾದಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರಲಿಲ್ಲ. ಸಂಜಯ್ ದತ್ಗೆ ಬೋಬ್ಬರಿ 308 ಗರ್ಲ್ಫ್ರೆಂಡ್ಸ್ ಇದ್ದರು! ಇದನ್ನು ಅವರೇ ಒಪ್ಪಿಕೊಂಡಿದ್ದರು. ಅವರು ಅನೇಕ ಬಾಲಿವುಡ್ ಹೀರೋಯಿನ್ಗಳ ಜೊತೆಯೂ ಸುತ್ತಾಡಿದ್ದರು.
ಸಂಜಯ್ ದತ್ ಮತ್ತು ಟೀನಾ ಮುನಿಮ್ ಡೇಟ್ ಮಾಡುತ್ತಿದ್ದರು. ಇವರು ಬಾಲ್ಯದಿಂದ ಫ್ರೆಂಡ್ಸ್ ಕೂಡ ಹೌದು. ‘ರಾಕಿ’ ಸಿನಿಮಾ ಸೆಟ್ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಸಂಜಯ್ ದತ್ ಅವರ ಕೆಟ್ಟ ಹವ್ಯಾಸ ಹಾಗೂ ಪೊಸೆಸಿವ್ ನಡವಳಿಕೆಯಿಂದ ಇವರ ಸಂಬಂಧ ಕೊನೆ ಆಯಿತು.
ಸಂಜಯ್ ದತ್ಗೆ ರಿಚಾ ಮೇಲೆ ಕ್ರಶ್ ಇತ್ತು. ಮ್ಯಾಗಜೀನ್ನಲ್ಲಿ ರಿಚಾ ಫೋಟೋ ನೋಡಿ ಸಂಜಯ್ ದತ್ ಫಿದಾ ಆಗಿದ್ದರು. ಅವರ ಮೊಬೈಲ್ ಸಂಖ್ಯೆ ಪಡೆದು, ಡೇಟ್ಗೆ ಆಹ್ವಾನಿಸಿದ್ದರು. 1987ರಲ್ಲಿ ರಿಚಾ-ಸಂಜಯ್ ಮದುವೆ ನಡೆಯಿತು. ರಿಚಾ ಬ್ರೇನ್ ಟ್ಯೂಮರ್ನಿಂದ 1996ರಲ್ಲಿ ಮೃತಪಟ್ಟರು.
1991ರಲ್ಲಿ ‘ಸಾಜನ್’ ಸಿನಿಮಾ ಶೂಟಿಂಗ್ ವೇಳೆ ಸಂಜಯ್ ಹಾಗೂ ಮಾಧುರಿ ಡೇಟ್ ಮಾಡಲು ಆರಂಭಿಸಿದರು. 1993ರ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಂಜಯ್ ಹೆಸರು ಕೇಳಿ ಬಂದಿದ್ದರಿಂದ ಇವರ ಸಂಬಂಧ ಕೊನೆ ಆಯಿತು.
ಮಾಧುರಿ ಬಳಿಕ ಸಂಜಯ್ ಅವರು ರಿಯಾ ಜೊತೆ ಡೇಟ್ ಮಾಡಿದರು. ಮಾಡೆಲ್ ಆಗಿದ್ದ ರಿಯಾನ 1998ರಲ್ಲಿ ಸಂಜಯ್ ದತ್ ಮದುವೆ ಆದರು. 2005ರಲ್ಲಿ ಇವರು ವಿಚ್ಛೇದನ ಪಡೆದರು.
ಇದನ್ನೂ ಓದಿ: Sanjay Dutt: ಕೆಡಿ ಸಿನಿಮಾ ಸೆಟ್ನಲ್ಲಿ ಸಂಜಯ್ ದತ್ಗೆ ಗಾಯ, ನಡೆದಿದ್ದೇನು?
ಇಷ್ಟೇ ಅಲ್ಲದೆ, ನಾಡಿಯಾ ದುರಾನಿ, ಲಿಸಾ ರೇ, ರೇಖಾ ಜೊತೆಗೂ ಸಂಜತ್ ದತ್ ರಿಲೇಶನ್ ಶಿಪ್ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇವುಗಳ ಪೈಕಿ ಕೆಲವು ಅಧಿಕೃತ ಆದರೆ ಇನ್ನೂ ಕೆಲವು ವದಂತಿಗಳಾಗಿ ಉಳಿದುಕೊಂಡಿವೆ. 2008ರಲ್ಲಿ ಸಂಜಯ್ ದತ್ ಮಾನ್ಯತಾ ದತ್ ಅವರನ್ನು ಮದುವೆ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ