Shah Rukh Khan: ತಮ್ಮದೇ ನಿರ್ಮಾಣ ಸಂಸ್ಥೆಗೆ ದೊಡ್ಡ ಲಾಭ ಮಾಡಿಕೊಟ್ಟ ಶಾರುಖ್ ಖಾನ್; ‘ಡಂಕಿ’, ‘ಜವಾನ್​’ನಿಂದ ಬಂದ ಹಣ ಎಷ್ಟು?

‘ಜವಾನ್’ ಸಿನಿಮಾದ ಸ್ಯಾಟಲೈಟ್, ಡಿಜಿಟಲ್ ಹಾಗೂ ಮ್ಯೂಸಿಕ್ ರೈಟ್ಸ್ ಬರೋಬ್ಬರಿ 250 ಕೋಟಿ ರೂಪಾಯಿಗೆ ಮಾರಾಟ ಆಗಿದೆಯಂತೆ. ಡಂಕಿ ಸಿನಿಮಾ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ.

Shah Rukh Khan: ತಮ್ಮದೇ ನಿರ್ಮಾಣ ಸಂಸ್ಥೆಗೆ ದೊಡ್ಡ ಲಾಭ ಮಾಡಿಕೊಟ್ಟ ಶಾರುಖ್ ಖಾನ್; ‘ಡಂಕಿ’, ‘ಜವಾನ್​’ನಿಂದ ಬಂದ ಹಣ ಎಷ್ಟು?
ಶಾರುಖ್ ಖಾನ್

Updated on: Jul 05, 2023 | 2:20 PM

ಶಾರುಖ್ ಖಾನ್ (Shah Rukh Khan) ಎಂಬ ಹೆಸರು ಈಗ ಬ್ರ್ಯಾಂಡ್ ಆಗಿದೆ. ಅವರ ಸಿನಿಮಾಗಳು ಒಳ್ಳೆಯ ಬಿಸ್ನೆಸ್ ಮಾಡುತ್ತವೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಯಶಸ್ಸು ಕಂಡ ಬಳಿಕ ಅವರ ಬೇಡಿಕೆ ಹೆಚ್ಚಿದೆ. ‘ಜವಾನ್’ ಹಾಗೂ ‘ಡಂಕಿ’ (Dunki Movie) ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳಿಗೆ ಶಾರುಖ್ ಖಾನ್ ಅವರೇ ಬಂಡವಾಳ ಹೂಡಿದ್ದಾರೆ. ಈ ಎರಡೂ ಸಿನಿಮಾಗಳಿಂದ ‘ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್​’ಗೆ ದೊಡ್ಡ ಲಾಭ ಆಗಿದೆ ಎನ್ನಲಾಗುತ್ತಿದೆ.

‘ಜವಾನ್’ ಚಿತ್ರಕ್ಕೆ ಅಟ್ಲಿ ಅವರ ನಿರ್ದೇಶನ ಇದೆ. ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಅವರು ಈ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಶಾರುಖ್​ಗೆ ಜೊತೆಯಾಗಿ ನಯನತಾರಾ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಸೈನಿಕನಾಗಿ ಶಾರುಖ್ ಖಾನ್ ನಟಿಸುತ್ತಿದ್ದಾರೆ. ದೇಶಭಕ್ತಿ ಪ್ರಧಾನ ಸಿನಿಮಾ ಇದಾಗಿರಲಿದೆ ಎಂಬುದು ಅನೇಕರ ಊಹೆ. ಇನ್ನು, ‘ಡಂಕಿ’ ಸಿನಿಮಾ ಬಗ್ಗೆಯೂ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರವನ್ನು ಗೆಲುವಿನ ಸರದಾರ ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ಗ್ಲಿಂಪ್ಸ್​ ಗಮನ ಸೆಳೆದಿದೆ. ಈ ಸಿನಿಮಾಗಳು ಶೂಟಿಂಗ್ ಹಂತದಲ್ಲಿರುವಾಗಲೇ ಒಳ್ಳೆಯ ಬಿಸ್ನೆಸ್ ಮಾಡಿವೆ.

ಪಿಂಕ್​ವಿಲ್ಲಾ ವರದಿ ಮಾಡಿರುವ ಪ್ರಕಾರ, ‘ಜವಾನ್’ ಸಿನಿಮಾದ ಸ್ಯಾಟಲೈಟ್, ಡಿಜಿಟಲ್ ಹಾಗೂ ಮ್ಯೂಸಿಕ್ ರೈಟ್ಸ್ ಬರೋಬ್ಬರಿ 250 ಕೋಟಿ ರೂಪಾಯಿಗೆ ಮಾರಾಟ ಆಗಿದೆಯಂತೆ. ಇನ್ನು, ‘ಡಂಕಿ’ ಸಿನಿಮಾದಿಂದ 230 ಕೋಟಿ ರೂಪಾಯಿ ಬಿಸ್ನೆಸ್ ಆಗಿದೆ ಎಂದು ವರದಿ ಆಗಿದೆ. ಈ ಎಲ್ಲಾ ಕಾರಣದಿಂದ ಸಿನಿಮಾಗೆ ದೊಡ್ಡ ಲಾಭ ಆಗಿದೆ.

ಇದನ್ನೂ ಓದಿ: Shah Rukh Khan: ಅಮೆರಿಕದಲ್ಲಿ ಶೂಟಿಂಗ್ ವೇಳೆ ಅವಘಡ; ನಟ ಶಾರುಖ್ ಖಾನ್ ಮೂಗಿಗೆ ಬಲವಾದ ಪೆಟ್ಟು

ಬಿಡುಗಡೆ ಪೂರ್ವ ಬಿಸ್ನೆಸ್ ಕೂಡ ಬಾಕ್ಸ್ ಆಫೀಸ್ ಗಳಿಕೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ರಿಲೀಸ್​ಗೂ ಮೊದಲೇ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಿದರೆ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗುತ್ತದೆ. ಆಗ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us