
ಮುಂಬೈ: ಪುತ್ರ ಆರ್ಯನ್ ಖಾನ್ ಬಂಧನದ ನಂತರ ತಮ್ಮ ನಿವಾಸ ‘ಮನ್ನತ್’ನಿಂದ ಹೊರಬಂದಿರದ ಶಾರುಖ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಆರ್ಥರ್ ರೋಡ್ ಜೈಲಿಗೆ ತೆರಳಿ ಅವರು ಆರ್ಯನ್ ಖಾನ್ರನ್ನು ಭೇಟಿಯಾಗಿದ್ದಾರೆ. ಕ್ರೂಸ್ ಶಿಪ್ನಲ್ಲಿ ನಡೆದಿದ್ದ ಡ್ರಗ್ ಪಾರ್ಟಿಯಲ್ಲಿ ಭಾಗಿಯಾದ ಆರೋಪದ ಮೇಲೆ ಆರ್ಯನ್ ಖಾನ್ ಬಂಧನಕ್ಕೊಳಗಾಗಿದ್ಇಂದರು. ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್ರನ್ನು ನೋಡಲು, ಶಾರುಖ್ ತೆರಳಿದ್ಧಾರೆ. ಆರ್ಯನ್ ಬಂಧನದ ಬಳಿಕ ಮೊದಲ ಬಾರಿಗೆ ಶಾರುಖ್ ಹಾಗೂ ಆರ್ಯನ್ ಪರಸ್ಪರ ಭೇಟಿಯಾಗಿದ್ದಾರೆ.
ನಟ ಶಾರುಖ್ ಖಾನ್ ಪುತ್ರ ಆರ್ಯನ್ ಬಂಧನದ ನಂತರ ಇದುವರೆಗೆ ತಮ್ಮ ಮನೆಯಿಂದ ಹೊರಬಂದಿರಲಿಲ್ಲ. ನಿನ್ನೆ (ಅಕ್ಟೋಬರ್ 20) ನಡೆದ ಜಾಮೀನು ಅರ್ಜಿಯ ತೀರ್ಪಿನಲ್ಲಿ, ಆರ್ಯನ್ಗೆ ಬೇಲ್ ಸಿಗುವ ವಿಶ್ವಾಸ ಇಟ್ಟುಕೊಂಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಂಧನದ ಬಳಿಕ ಮೊದಲ ಬಾರಿಗೆ ಪುತ್ರನನ್ನು ನೋಡಲು ಶಾರುಖ್ ಜೈಲಿಗೆ ಆಗಮಿಸಿ, ಒಂದು ಸಣ್ಣ ಭೇಟಿಯ ನಂತರ ನಿರ್ಗಮಿಸಿದ್ದಾರೆ. ಈ ವೇಳೆ ಅವರು ಮಾಧ್ಯಮಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ.
ಶಾರುಖ್ ಜೈಲಿನಿಂದ ಮರಳುತ್ತಿರುವುದರ ಕುರಿತು ಎಎನ್ಐ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
ಆರ್ಯನ್ ಜಾಮೀನಿಗಾಗಿ ಹೈಕೋರ್ಟ್ನಲ್ಲಿ ಅರ್ಜಿ:
ಆರ್ಯನ್ ಖಾನ್ ಪರ ವಕೀಲರು ಎನ್ಡಿಪಿಎಸ್ ನ್ಯಾಯಾಲಯದಲ್ಲಿ ಜಾಮೀನು ಸಿಗದ ಕಾರಣ, ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ಕುರಿತ ವಿಚಾರಣೆಗಳು ಇನ್ನಷ್ಟೇ ನಡೆಯಬೇಕಿದೆ. ಆರ್ಯನ್ ಪರ ಖ್ಯಾತ ವಕೀಲರಾದ ಸತೀಶ್ ಮಾನೆಶಿಂಧೆ ಹಾಗೂ ಅಮಿತ್ ದೇಸಾಯಿ ವಾದ ಮಂಡಿಸಿದ್ದರು. ಎನ್ಸಿಬಿ ಪರ ವಕೀಲರು ಆರ್ಯನ್ ಹೈಪ್ರೊಫೈಲ್ ಕುಟುಂಬದ ವ್ಯಕ್ತಿಯಾಗಿರುವ ಕಾರಣ, ಜಾಮೀನು ನೀಡಿದರೆ ಸಾಕ್ಷ್ಯ ನಾಶವಾಗುವ ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಆರ್ಯನ್ ವಾಟ್ಸಾಪ್ ಚಾಟ್ಗಳನ್ನು ಹಾಜರುಪಡಿಸಿ, ಪ್ರಕರಣದಲ್ಲಿ ಆರ್ಯನ್ ಸಂಬಂಧವನ್ನು ವಿವರಿಸಿದ್ದರು. ನ್ಯಾಯಾಲಯ ಇದನ್ನು ಪರಿಗಣಿಸಿ ಜಾಮೀನು ನೀಡಿರಲಿಲ್ಲ.
ಇದನ್ನೂ ಓದಿ:
ಆರ್ಯನ್ಗೆ ಜಾಮೀನು ನೀಡೋಕೆ ಸಾಧ್ಯವೇ ಇಲ್ಲ ಎಂದ ಎನ್ಡಿಪಿಎಸ್ ಕೋರ್ಟ್
Donald Trump: ಟ್ವಿಟರ್, ಫೇಸ್ಬುಕ್ಗೆ ಸಡ್ಡು ಹೊಡೆಯಲು ಮುಂದಾದ ಟ್ರಂಪ್; ಸ್ವಂತ ಸಾಮಾಜಿಕ ಜಾಲತಾಣ ಘೋಷಣೆ
Published On - 10:16 am, Thu, 21 October 21