AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonakshi Sinha: 95 ಕೆಜಿ ಇದ್ದ ಸೋನಾಕ್ಷಿ ಸಿನ್ಹಾ 65 ಕೆಜಿ ಆಗಿದ್ದು ಹೇಗೆ? ಇಲ್ಲಿದೆ ಸ್ಫೂರ್ತಿದಾಯಕ ಕಥೆ

Sonakshi Sinha Birthday: ಸೋನಾಕ್ಷಿ ಸಿನ್ಹಾ ಈ ರೀತಿ ಮಿಂಚೋಕೆ ಕಾರಣ ಅವರ ಶ್ರಮ. 18ನೇ ವಯುಸ್ಸಿಗೆ 95 ಕೆಜಿ ಇದ್ದ ಅವರು ನಂತರ ಶ್ರಮ ಹಾಕಿದರು.

Sonakshi Sinha: 95 ಕೆಜಿ ಇದ್ದ ಸೋನಾಕ್ಷಿ ಸಿನ್ಹಾ 65 ಕೆಜಿ ಆಗಿದ್ದು ಹೇಗೆ? ಇಲ್ಲಿದೆ ಸ್ಫೂರ್ತಿದಾಯಕ ಕಥೆ
ಸೋನಾಕ್ಷಿ ಸಿನ್ಹಾ
ರಾಜೇಶ್ ದುಗ್ಗುಮನೆ
|

Updated on:Jun 02, 2023 | 10:45 AM

Share

ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಇಂದು (ಜೂನ್ 2) ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಆಫರ್ ಬರುತ್ತಿದೆ. ಸೋನಾಕ್ಷಿ ಸಿನ್ಹಾ ಸ್ಟಾರ್ ಕಿಡ್ ಆದ ಹೊರತಾಗಿಯೂ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. ಸಲ್ಮಾನ್ ಖಾನ್ ನಟನೆಯ ‘ದಬಾಂಗ್​’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅವರು ಎಂಟ್ರಿ ಕೊಟ್ಟರು. ವಿಶೇಷ ಎಂದರೆ ಸೋನಾಕ್ಷಿ ಸಿನ್ಹಾ ಅವರ ದೇಹದ ತೂಕ 95 ಕೆಜಿ ಇತ್ತು. ಅದನ್ನು ಅವರು 65 ಕೆಜಿಗೆ ಇಳಿಸಿಕೊಂಡಿದ್ದಾರು. ಆ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ಸೋನಾಕ್ಷಿ ಸಿನ್ಹಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಸಖತ್ ಗ್ಲಾಮರಸ್ ಫೋಟೋ ಹಂಚಿಕೊಳ್ಳುತ್ತಾರೆ. ಸೋನಾಕ್ಷಿ ಸಿನ್ಹಾ ಈ ರೀತಿ ಮಿಂಚೋಕೆ ಕಾರಣ ಅವರ ಶ್ರಮ. 18ನೇ ವಯುಸ್ಸಿಗೆ 95 ಕೆಜಿ ಇದ್ದ ಅವರು ನಂತರ ಶ್ರಮ ಹಾಕಿದರು. ಅವರ ಬಗ್ಗೆ ಅವರಿಗೇ ಬೇಸರ ಇತ್ತು. ಆದರೆ, ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಎಂಬುದು ಅವರ ಮನಸ್ಸಿನಲ್ಲಿ ಮೂಡಿತ್ತು. ಅದನ್ನು ಸಾಧಿಸಿದರು. ದೇಹದ ತೂಕ ಇಳಿಸಿಕೊಳ್ಳಲು ಸೋನಾಕ್ಷಿ ಕೊಟ್ಟ ಟಿಪ್ಸ್ ಇದು.

ಆರೋಗ್ಯಕರ ಆಹಾರ ತಿನ್ನಿ: ಇತ್ತೀಚೆಗೆ ಜಂಕ್ ಫುಡ್ ಕಡೆ ಯುವ ಜನತೆ ಹೆಚ್ಚು ಒಲವು ತೋರಿಸುತ್ತಿದೆ. ಆದರೆ, ಅದರ ಬದಲು ಆರೋಗ್ಯಕರ ಆಹಾರದ ಕಡೆ ಹೆಚ್ಚು ಒಲವು ತೋರಿಸಬೇಕು ಅನ್ನೋದು ಅವರ ಸೂಚನೆ.

ಇದನ್ನೂ ಓದಿ: ದಪ್ಪ ಎಂಬ ಕಾರಣಕ್ಕೆ ಸೋನಾಕ್ಷಿ ಸಿನ್ಹಾ ಎದುರಿಸಿದ ಟೀಕೆಗಳು ಒಂದೆರಡಲ್ಲ

ನಿತ್ಯ ವ್ಯಾಯಾಯಮ ಮಾಡಿ: ನಿತ್ಯವೂ ತಪ್ಪದೆ ವ್ಯಾಯಮ ಮಾಡಿ. ವಾಕಿಂಗ್, ಯೋಗ, ಜಿಮ್ ಇವುಗಳ ಪೈಕಿ ಯಾವುದಾದರೂ ಉತ್ತಮ ಎನ್ನುತ್ತಾರೆ ಸೋನಾಕ್ಷಿ.

ತಾಳ್ಮೆ ಇರಲಿ: ರಾತ್ರೋ ರಾತ್ರಿ ಯಾರೂ ದೇಹದ ತೂಕ ಇಳಿಸಿಕೊಳ್ಳುವುದಿಲ್ಲ. ಆ ಬಗ್ಗೆ ತಾಳ್ಮೆ ಇರಲಿ ಅನ್ನೋದು ಸೋನಾಕ್ಷಿ ಅವರ ಕೋರಿಕೆ.

ವೆಬ್ ಸೀರಿಸ್ ಮೂಲಕ ಯಶಸ್ಸು

ಸೋನಾಕ್ಷಿ ಸಿನ್ಹ ಅವರು ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ದಹಾಡ್​’ ವೆಬ್ ಸೀರಿಸ್ ಮೆಚ್ಚುಗೆ ಪಡೆದಿದೆ. ಇದು ಅವರ ಬರ್ತ್​ಡೇ ಖುಷಿಯನ್ನು ಹೆಚ್ಚಿಸಿದೆ. ಅವರನ್ನು ಅನೇಕ ವೆಬ್​ ಸೀರಿಸ್​ ಆಫರ್​ಗಳು ಹುಡುಕಿ ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:42 am, Fri, 2 June 23

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?