Sridevi: ‘ಈಗಲೂ ನಿಮಗಾಗಿ ಎಲ್ಲೆಡೆ ಹುಡುಕುವೆ..’: ಶ್ರೀದೇವಿ ಪುಣ್ಯ ಸ್ಮರಣೆ ಹೊಸ್ತಿಲಲ್ಲಿ ಜಾನ್ವಿ ಭಾವುಕ ಮಾತು

Sridevi Death Anniversary | Janhvi Kapoor: ಬೋನಿ ಕಪೂರ್​ ಅವರು ಶ್ರೀದೇವಿಯ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಪುಸ್ತಕ ರೂಪದಲ್ಲಿ ಈ ಲೆಜೆಂಡರಿ ನಟಿಯ ಜೀವನ ಚರಿತ್ರೆ ಪ್ರಕಟ ಆಗಲಿದೆ.

Sridevi: ‘ಈಗಲೂ ನಿಮಗಾಗಿ ಎಲ್ಲೆಡೆ ಹುಡುಕುವೆ..’: ಶ್ರೀದೇವಿ ಪುಣ್ಯ ಸ್ಮರಣೆ ಹೊಸ್ತಿಲಲ್ಲಿ ಜಾನ್ವಿ ಭಾವುಕ ಮಾತು
ಶ್ರೀದೇವಿ

Updated on: Feb 21, 2023 | 3:49 PM

ಭಾರತೀಯ ಚಿತ್ರರಂಗದ ಲೆಜೆಂಡರಿ ನಟಿ ಶ್ರೀದೇವಿ (Sridevi) ಅವರು ಇಹಲೋಕ ತ್ಯಜಿಸಿ 5 ವರ್ಷ ಸಮೀಪಿಸುತ್ತಿದೆ. ಫೆಬ್ರವರಿ 24ರಂದು ಅವರ ಪುಣ್ಯ ಸ್ಮರಣೆ. ಅದಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಅವರ ಕುಟುಂಬದವರು ನುಡಿ ನಮನ ಸಲ್ಲಿಸಿದ್ದಾರೆ. ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ (Janhvi Kapoor), ಪತಿ ಬೋನಿ ಕಪೂರ್​ (Boney Kapoor) ಅವರು ಭಾವುಕವಾಗಿ ಪೋಸ್ಟ್​ ಮಾಡಿದ್ದಾರೆ. ಶ್ರೀದೇವಿ ಜತೆಗಿನ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಶ್ರೀದೇವಿ ನಿಧನರಾಗಿದ್ದು 2018 ಫೆಬ್ರವರಿ 24ರಂದು. ಅವರನ್ನು ಅಭಿಮಾನಿಗಳು ಇಂದಿಗೂ ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

ಜಾನ್ವಿ ಕಪೂರ್​ ಭಾವುಕ ಪೋಸ್ಟ್​:

‘ಈಗಲೂ ನಾನು ನಿಮಗಾಗಿ ಎಲ್ಲ ಕಡೆಗಳಲ್ಲಿ ಹುಡುಕುತ್ತೇನೆ ಅಮ್ಮ. ನಿಮಗೆ ಹೆಮ್ಮೆ ತರುವೆನೆಂಬ ಭರವಸೆಯಲ್ಲಿ ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವೆ. ನಾನು ಎಲ್ಲಿಯೇ ಹೋದರೂ ಏನೇ ಮಾಡಿದರೂ ಅದು ನಿಮ್ಮಿಂದಲೇ ಶುರುವಾಗುತ್ತದೆ ಹಾಗೂ ನಿಮ್ಮಲ್ಲೇ ಮುಗಿಯುತ್ತದೆ’ ಎಂದು ಜಾನ್ವಿ ಕಪೂರ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ
44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?
ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ
Janhvi Kapoor: ಜಾನ್ವಿ ಕಪೂರ್​ ಫೋಟೋ ವೈರಲ್​; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್​ ಎಂದ ಅಭಿಮಾನಿಗಳು
Janhvi Kapoor: ಪ್ರಕೃತಿಯ ಮಡಿಲಿನಲ್ಲಿ ಜಾನ್ವಿ ಕಪೂರ್ ವಿಹಾರ; ಫೋಟೋಗಳಿಗೆ ಮಸ್ತ್​ ಪೋಸ್​​

ಇದನ್ನೂ ಓದಿ: Janhvi Kapoor: ಸಾಂಪ್ರದಾಯಿಕ ಲುಕ್​​ನಲ್ಲಿ ಗಮನ ಸೆಳೆದ ನಟಿ ಜಾನ್ವಿ ಕಪೂರ್; ಇಲ್ಲಿದೆ ಫೋಟೋ

ಶ್ರೀದೇವಿ ಅವರ ಅನುಪಸ್ಥಿತಿಯಲ್ಲಿ ಜಾನ್ವಿ ಕಪೂರ್​ ಅವರು ತಮ್ಮ ಬಣ್ಣದ ಬದುಕಿನ ಪಯಣ ಮುಂದುವರಿಸಿದ್ದಾರೆ. ತಾಯಿ ಇದ್ದಿದ್ದರೆ ಮಗಳಿಗೆ ಇನ್ನಷ್ಟು ಬಲ, ಪ್ರೋತ್ಸಾಹ, ಸೂಕ್ತ ಮಾರ್ಗದರ್ಶನ ಸಿಗುತ್ತಿತ್ತು. ಈಗ ಜಾನ್ವಿ ಹಂಚಿಕೊಂಡಿರುವ ಈ ಭಾವುಕ ಪೋಸ್ಟ್​ಗೆ ಅನೇಕ ಸೆಲೆಬ್ರಿಟಿಗಳು ಕಮೆಂಟ್​ ಮಾಡಿದ್ದಾರೆ. ಮನೀಶ್​ ಮಲ್ಹೋತ್ರಾ, ಭೂಮಿ ಪಡ್ನೇಕರ್​, ರಾಕುಲ್​ ಪ್ರೀತ್​ ಸಿಂಗ್​ ಮುಂತಾದವರು ಹಾರ್ಟ್​ ಎಮೋಜಿ ಕಮೆಂಟ್​ ಮಾಡಿದ್ದಾರೆ.

ಪತ್ನಿ ನೆನಪಿನಲ್ಲಿ ಬೋನಿ ಕಪೂರ್:

ಶ್ರೀದೇವಿ ಅವರ ಪತಿ ಬೋನಿ ಕಪೂರ್​ ಕೂಡ ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ನೀನು ನಮ್ಮನ್ನು ಬಿಟ್ಟು ಹೋಗಿ 5 ವರ್ಷ ಆಯಿತು. ನಿನ್ನ ನೆನಪು ಮತ್ತು ಪ್ರೀತಿಯೇ ನಮ್ಮನ್ನು ಮುಂದುವರಿಸುತ್ತಿದೆ. ಅವು ನಮ್ಮ ಜೊತೆ ಸದಾ ಇರುತ್ತವೆ’ ಎಂದು ಬರೆದುಕೊಂಡಿರುವ ಬೋನಿ ಕಪೂರ್​ ಅವರು ಶ್ರೀದೇವಿಯ ಸುಂದರ ಫೋಟೋ ಹಂಚಿಕೊಂಡಿದ್ದಾರೆ.

ಪುಸ್ತಕ ರೂಪದಲ್ಲಿ ಶ್ರೀದೇವಿ ಅವರ ಜೀವನ ಚರಿತ್ರೆ ಪ್ರಕಟ ಆಗಲಿದೆ. ಆ ಸುದ್ದಿಯನ್ನು ಕೆಲವೇ ದಿನಗಳ ಹಿಂದೆ ಬೋನಿ ಕಪೂರ್​ ಹಂಚಿಕೊಂಡಿದ್ದರು. ‘ಶ್ರೀದೇವಿ: ದಿ ಲೈಫ್​ ಆಫ್​ ಎ ಲೆಜೆಂಡ್​’ ಎಂಬುದು ಇದರ ಶೀರ್ಷಿಕೆ. ಇದರ ಹಕ್ಕುಗಳನ್ನು ‘ವೆಸ್ಟ್​ಲ್ಯಾಂಡ್​ ಬುಕ್ಸ್​’ ಪಡೆದುಕೊಂಡಿದೆ. ಧೀರಜ್​ ಕುಮಾರ್ ಅವರು ಈ ಪುಸ್ತಕ ಬರೆಯುತ್ತಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us