56 ಕೋಟಿ ರೂಪಾಯಿ ಸಾಲ; ಸನ್ನಿ ಡಿಯೋಲ್ ಬಂಗಲೆ ಹರಾಜಿಗಿಟ್ಟ ಬ್ಯಾಂಕ್ ಅಧಿಕಾರಿಗಳು

ಸನ್ನಿ ಡಿಯೋಲ್ ಅವರು ಮುಂಬೈನ ಜುಹುದಲ್ಲಿ ‘ಸನ್ನಿ ವಿಲ್ಲಾ’ ಹೆಸರಿನ ಬಂಗಲೆ ಹೊಂದಿದ್ದಾರೆ. ಈ ಬಂಗಲೆ ಹರಾಜಿಗೆ ಬಂದಿದೆ. ಸದ್ಯ ಬಂದಿರುವ ನೋಟಿಸ್ ಪ್ರಕಾರ, ಸನ್ನಿ ಅವರು ಬ್ಯಾಂಕ್ ಆಫ್ ಬರೋಡಾದಿಂದ 55.99 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ, ಇದನ್ನು ಅವರು ಹಿಂದಿರುಗಿಸಿಲ್ಲ.

56 ಕೋಟಿ ರೂಪಾಯಿ ಸಾಲ; ಸನ್ನಿ ಡಿಯೋಲ್ ಬಂಗಲೆ ಹರಾಜಿಗಿಟ್ಟ ಬ್ಯಾಂಕ್ ಅಧಿಕಾರಿಗಳು
ಸನ್ನಿ

Updated on: Aug 21, 2023 | 8:08 AM

‘ಗದರ್ 2’ ಚಿತ್ರದಿಂದ ಸನ್ನಿ ಡಿಯೋಲ್ (Sunny Deol) ದೊಡ್ಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಸನ್ನಿಗೆ ಸಾಲು ಸಾಲು ಆಫರ್​ಗಳು ಕೂಡ ಬರುತ್ತಿವೆ. ಅವರ ಸಂಭಾವನೆ ಹೆಚ್ಚಾಗಿದೆ’ ಎಂದೆಲ್ಲ ವರದಿ ಆಗಿದೆ. ಆದರೆ, ನಿಜ ವಿಚಾರ ಆ ರೀತಿ ಇಲ್ಲ. ‘ಗದರ್ 2’ (Gadar 2) ಹಿಟ್ ಆದರೂ ಸನ್ನಿಗೆ ಸಿಕ್ಕಿರುವ ಸಂಭಾವನೆ ಕಡಿಮೆ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಕಾರಣ ಅವರ ಮನೆಯನ್ನು ಬ್ಯಾಂಕ್​ನವರು ಹರಾಜಿಗೆ ಇಟ್ಟಿರುವುದು. 55 ಕೋಟಿ ರೂಪಾಯಿ ಸಾಲ ಇರುವುದರಿಂದ ಮನೆ ಹರಾಜಿಗೆ ಬಂದಿದೆ. ಸೆಪ್ಟೆಂಬರ್ 25ರಂದು ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಸನ್ನಿ ಡಿಯೋಲ್ ಅವರು ಮುಂಬೈನ ಜುಹುದಲ್ಲಿ ‘ಸನ್ನಿ ವಿಲ್ಲಾ’ ಹೆಸರಿನ ಬಂಗಲೆ ಹೊಂದಿದ್ದಾರೆ. ಈ ಬಂಗಲೆ ಹರಾಜಿಗೆ ಬಂದಿದೆ. ಸದ್ಯ ಬಂದಿರುವ ನೋಟಿಸ್ ಪ್ರಕಾರ, ಸನ್ನಿ ಅವರು ಬ್ಯಾಂಕ್ ಆಫ್ ಬರೋಡಾದಿಂದ 55.99 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ, ಇದನ್ನು ಅವರು ಹಿಂದಿರುಗಿಸಿಲ್ಲ. ಈ ಕಾರಣಕ್ಕೆ ಅವರ ಮನೆಯನ್ನು ಹರಾಜಿಗೆ ಇಡಲಾಗಿದೆ.

ಸನ್ನಿ ಡಿಯೋಲ್ ಕಚೇರಿ ಇದೇ ಬಂಗಲೆಯಲ್ಲಿದೆ. ಇಲ್ಲಿ ಒಂದು ಪ್ರಿವ್ಯೂ ಥಿಯೇಟರ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮಾಡಲು ಎರಡು ಸ್ಟುಡಿಯೋ ಇದೆ. 80ರ ದಶಕದಲ್ಲಿ ಇದನ್ನು ಕಟ್ಟಲಾಗಿದೆ. ಸದ್ಯ ಇದನ್ನು ಬ್ಯಾಂಕ್​ನವರು ಹರಾಜು ಹಾಕಲಿದ್ದಾರೆ. ವರ್ಚುವಲ್ ಹರಾಜು ನಡೆಯಲಿದೆ. ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದವರಿಗೆ ಬಂಗಲೆ ಸಿಗಲಿದೆ. ಆ ಬಳಿಕ ಬ್ಯಾಂಕ್​ ಆಫ್ ಬರೋಡಾದವರು ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಮಾಹಿತಿ ನೀಡಲಿದ್ದಾರೆ. ಅವರಿಂದ ಒಪ್ಪಿಗೆ ಸಿಕ್ಕ ಬಳಿಕ ಪ್ರಾಪರ್ಟಿ ಖರೀದಿದಾರರ ಕೈ ಸೇರಲಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಒಪ್ಪಿಗೆ ಸಿಕ್ಕ ಬಳಿಕ ಪ್ರಾಪರ್ಟಿ ಹಸ್ತಾಂತರಕ್ಕೆ ಒಂದು ತಿಂಗಳಿಂದ ಒಂದು ವರ್ಷ ಸಮಯ ಹಿಡಿಯಲಿದೆ.

ಇದನ್ನೂ ಓದಿ: 300 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಗದರ್ 2’ ಸಿನಿಮಾ; ‘ಕೆಜಿಎಫ್ 2’, ‘ಪಠಾಣ್’ ದಾಖಲೆ ಉಡೀಸ್

ಸನ್ನಿ ಡಿಯೋಲ್ ಅವರು ಈ ಮೊದಲು ‘ಘಾಯಲ್ ಒನ್ಸ್ ಅಗೇನ್’ (2016) ಸಿನಿಮಾ ನಿರ್ದೇಶನ ಮಾಡಿದ್ದರು. ಇದನ್ನು ಅವರ ತಂದೆ ಧರ್ಮೇಂದ್ರ ನಿರ್ಮಾಣ ಮಾಡಿದ್ದರು. ಇದಕ್ಕೆ ಹಣ ಹೊಂದಿಸಲು ಅವರು ಈ ಮನೆಯನ್ನು ಅಡ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಸನ್ನಿ ಡಿಯೋಲ್ ವಕ್ತಾರ ಸುತ್ತೋಲೆ ಬಿಡುಗಡೆ ಮಾಡಿದ್ದು, ಪ್ರಾಪರ್ಟಿ ಹರಾಜಿಗೆ ಬರದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:47 am, Mon, 21 August 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us