
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ನಡೆದ ಕಹಿ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ನಿರ್ದೇಶಕನೊಬ್ಬ ಕುಡಿದು ತಮಗೆ ನೀಡಿದ ಕಿರುಕುಳದ ಬಗ್ಗೆ ಅವರು ಮೌನ ಮುರಿದಿದ್ದಾರೆ. ಈ ಘಟನೆಯು ತಮಗೆ ತೀವ್ರ ಭಯ ಹುಟ್ಟಿಸಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಅವರ ಈ ಮಾತುಗಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ. ನಟಿಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
‘ತನು ವೆಡ್ಸ್ ಮನು ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ಈ ಘಟನೆ ನಡೆದಿದೆ. ಮುಖ್ಯಭೂಮಿಕೆಯಲ್ಲಿದ್ದ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ ನಟಿಗೆ ಕವಿತೆಗಳನ್ನು ಕಳುಹಿಸುತ್ತಿದ್ದ. ಆ ಬಳಿಕ ಖಾಸಗಿಯಾಗಿ ಪ್ರಣಯ ಸನ್ನಿವೇಶದ ರೀಹರ್ಸಲ್ ಮಾಡಲು ಕ ಕರೆದಿದ್ದ. ಆದರೆ ಇತರೆ ನಟರು ಮತ್ತು ಕ್ಯಾಮೆರಾಮೆನ್ ಇಲ್ಲದೆ ಒಬ್ಬಂಟಿಯಾಗಿ ಬರಲು ಹೇಳಿದ್ದು ನಟಿಗೆ ಅನುಮಾನ ತಂದಿತ್ತು’ ಎಂದಿದ್ದಾರೆ.
‘ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದಾಗ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್ ಮದ್ಯಪಾನ ಮಾಡುತ್ತಿದ್ದರು. ಇದನ್ನು ಗಮನಿಸಿದ ತಕ್ಷಣವೇ ಆ ಜಾಗದಿಂದ ಹೊರಬಂದೆ. ಕೇವಲ 20 ವರ್ಷದ ಯುವತಿಯಾಗಿದ್ದ ನನಗೆ ಆ ವಾತಾವರಣ ಭಯ ಹುಟ್ಟಿಸಿತ್ತು. ಒಬ್ಬಂಟಿ ಹೆಣ್ಣುಮಗಳಾಗಿ ಕುಡಿತದ ಮತ್ತಿನಲ್ಲಿದ್ದ ಪುರುಷರ ಜೊತೆ ಕೆಲಸ ಮಾಡಲು ಅವರು ನಿರಾಕರಿಸಿದ್ದರು’ ಎಂದಿದ್ದಾರೆ.
ಆದರೆ ಕಿರುಕುಳ ಅಷ್ಟಕ್ಕೇ ನಿಲ್ಲಲಿಲ್ಲ. ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಬಂದ ನಿರ್ದೇಶಕ ನಟಿಯ ಕೋಣೆಯ ಬಾಗಿಲನ್ನು ಜೋರಾಗಿ ತಟ್ಟಿದ್ದಾನೆ. ಬಾಗಿಲು ತೆರೆದಾಗ ತನಗೆ ಅಪ್ಪುಗೆ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಆತ ತೂರಾಡುತ್ತಾ ಒತ್ತಾಯಿಸುತ್ತಿದ್ದಾಗ ನಟಿ ಆತನ ಮುಖಕ್ಕೆ ಹೊಡೆದಂತೆ ಬೇಡವೆಂದು ನಿರಾಕರಿಸಿದ್ದಾರೆ.
ಇದನ್ನೂ ಓದಿ: ರಾಮ ಜನ್ಮಭೂಮಿ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಬಳಿ ಕ್ಷಮೆ ಕೇಳಿದ್ದ ಸ್ವರಾ ಭಾಸ್ಕರ್
‘ರೈಸ್ & ಫಾಲ್ 2’ ಶೋನಲ್ಲಿ ಸಹ ಸ್ಪರ್ಧಿಗಳಾದ ಪ್ರಿಯಾಂಕಾ ಚಹರ್ ಮತ್ತು ತೇಜ್ ಪ್ರತಾಪ್ ಯಾದವ್ ಜೊತೆ ಸ್ವರಾ ಈ ವಿಷಯ ಹಂಚಿಕೊಂಡಿದ್ದಾರೆ. ಆದರೆ ಆ ನಿರ್ದೇಶಕ ಅಥವಾ ಸಿನಿಮಾದ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಪ್ರಸ್ತುತ ಈ ರಿಯಾಲಿಟಿ ಶೋನಲ್ಲಿ ಸ್ವರಾ ಭಾಸ್ಕರ್ ಪ್ರಮುಖ ಸ್ಪರ್ಧಿಯಾಗಿ ಮುನ್ನುಗ್ಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:13 am, Fri, 2 October 26