The Kerala Story: 156 ಕೋಟಿ ರೂಪಾಯಿಗೆ ಏರಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್; ಮುಂದಿನ ಟಾರ್ಗೆಟ್​ 200 ಕೋಟಿ ರೂ.

The Kerala Story Box Office Collection: ಬಿಡುಗಡೆ ಆಗಿ 13 ದಿನ ಕಳೆದಿದ್ದರೂ ಕೂಡ ‘ದಿ ಕೇರಳ ಸ್ಟೋರಿ’ ಸಿನಿಮಾದ ಅಬ್ಬರ ನಿಂತಿಲ್ಲ. ಇದೇ ರೀತಿ ಪ್ರದರ್ಶನ ಮುಂದುವರಿದರೆ ಶೀಘ್ರದಲ್ಲೇ ಈ ಚಿತ್ರ ದ್ವಿಶತಕ ಬಾರಿಸಲಿದೆ.

The Kerala Story: 156 ಕೋಟಿ ರೂಪಾಯಿಗೆ ಏರಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್; ಮುಂದಿನ ಟಾರ್ಗೆಟ್​ 200 ಕೋಟಿ ರೂ.
ಅದಾ ಶರ್ಮಾ

Updated on: May 17, 2023 | 1:02 PM

ಮುಖ್ಯಾಂಶಗಳು

  • ಬಿಡುಗಡೆ ಆಗಿ 13 ದಿನ ಕಳೆದಿದ್ದರೂ ಕೂಡ ‘ದಿ ಕೇರಳ ಸ್ಟೋರಿ’ ಸಿನಿಮಾದ ಅಬ್ಬರ ನಿಂತಿಲ್ಲ.
  • ಸದ್ಯ 156 ಕೋಟಿ ರೂಪಾಯಿ ಮಾಡಿರುವ ಈ ಚಿತ್ರದ ಮುಂದಿರುವ ಟಾರ್ಗೆಟ್​ 200 ಕೋಟಿ ರೂಪಾಯಿ!
  • ಇದೇ ರೀತಿ ಪ್ರದರ್ಶನ ಮುಂದುವರಿದರೆ ಶೀಘ್ರದಲ್ಲೇ ಈ ಚಿತ್ರ ದ್ವಿಶತಕ ಬಾರಿಸಲಿದೆ.

ನೋಡನೋಡುತ್ತಿದ್ದಂತೆಯೇ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಜಯಭೇರಿ ಬಾರಿಸಿದೆ. ದೇಶದ ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ವಿವಾದಾತ್ಮಕ ಕಥಾಹಂದರ ಇರುವುದೇ ಇದಕ್ಕೆ ಕಾರಣ ಎಂದರೂ ತಪ್ಪಿಲ್ಲ. ಟೀಸರ್​ ಬಿಡುಗಡೆ ಆದಾಗಲೇ ಈ ಸಿನಿಮಾ ವಿವಾದ ಎಬ್ಬಿಸಿತ್ತು. ಸಿನಿಮಾ ಬಿಡುಗಡೆ ಬಳಿಕವೂ ಕಿರಿಕ್​ ಜೋರಾಯಿತು. ಏನೇ ಆದರೂ ಈ ಚಿತ್ರದ ಗಲ್ಲಾಪೆಟ್ಟಿಗೆ ಗಳಿಕೆಗೆ ತೊಂದರೆ ಆಗಿಲ್ಲ. ಈಗ ‘ದಿ ಕೇರಳ ಸ್ಟೋರಿ’ ಸಿನಿಮಾದ ಕಲೆಕ್ಷನ್ (Box Office Collection)​ 156 ಕೋಟಿ ರೂಪಾಯಿ ಆಗಿದೆ. ಇದರಿಂದ ಚಿತ್ರತಂಡಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ನಿರ್ದೇಶಕ ಸುದೀಪ್ತೋ ಸೇನ್​ ಅವರಿಗೆ ಈ ಚಿತ್ರದಿಂದ ಖ್ಯಾತಿ ಹೆಚ್ಚಾಗಿದೆ. ಮುಖ್ಯಭೂಮಿಕೆ ನಿಭಾಯಿಸಿರುವ ನಟಿ ಅದಾ ಶರ್ಮಾ (Adah Sharma) ಕೂಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

ಬಿಡುಗಡೆ ಆಗಿ 13 ದಿನ ಕಳೆದಿದ್ದರೂ ಕೂಡ ‘ದಿ ಕೇರಳ ಸ್ಟೋರಿ’ ಸಿನಿಮಾದ ಅಬ್ಬರ ನಿಂತಿಲ್ಲ. ಪ್ರತಿ ದಿನವೂ ಈ ಚಿತ್ರ ಉತ್ತಮವಾಗಿ ಕಲೆಕ್ಷನ್​ ಮಾಡುತ್ತಿದೆ. ಸದ್ಯ 156 ಕೋಟಿ ರೂಪಾಯಿ ಮಾಡಿರುವ ಈ ಚಿತ್ರದ ಮುಂದಿರುವ ಟಾರ್ಗೆಟ್​ 200 ಕೋಟಿ ರೂಪಾಯಿ! ಇದೇ ರೀತಿ ಪ್ರದರ್ಶನ ಮುಂದುವರಿದರೆ ಶೀಘ್ರದಲ್ಲೇ ಈ ಚಿತ್ರ ದ್ವಿಶತಕ ಬಾರಿಸಲಿದೆ.

ಇದನ್ನೂ ಓದಿ
‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್​ನಲ್ಲಿ ಜೋರಾಗಿದೆ ಚರ್ಚೆ
Adah Sharma: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಗಮನ ಸೆಳೆದ ಅದಾ ಶರ್ಮಾ ನಟನೆ; ಪ್ರೇಕ್ಷಕರಿಂದ ಸಿಕ್ತು ಮೆಚ್ಚುಗೆ
The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

ಇದನ್ನೂ ಓದಿ: Adah Sharma: ಬ್ಲೂ ವೇಲ್​ ಕುರಿತ ಸಿನಿಮಾದಲ್ಲಿ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ; ಈ ಚಿತ್ರದ ಕಥೆ ಏನು?

‘ದಿ ಕೇರಳ ಸ್ಟೋರಿ’ ಚಿತ್ರದ ಕಲೆಕ್ಷನ್​ ರಿಪೋರ್ಟ್​:

1ನೇ ದಿನ: 8.03 ಕೋಟಿ ರೂ.

2ನೇ ದಿನ: 11.22 ಕೋಟಿ ರೂ.

3ನೇ ದಿನ: 16.40 ಕೋಟಿ ರೂ.

4ನೇ ದಿನ: 10.07 ಕೋಟಿ ರೂ.

5ನೇ ದಿನ: 11.14 ಕೋಟಿ ರೂ.

6ನೇ ದಿನ: 12 ಕೋಟಿ ರೂ.

7ನೇ ದಿನ: 12.50 ಕೋಟಿ ರೂ.

8ನೇ ದಿನ: 12.23 ಕೋಟಿ ರೂ.

9ನೇ ದಿನ: 19.50 ಕೋಟಿ ರೂ.

10ನೇ ದಿನ: 23.75 ಕೋಟಿ ರೂ.

11ನೇ ದಿನ: 10.30 ಕೋಟಿ ರೂ.

12ನೇ ದಿನ: 9.65 ಕೋಟಿ ರೂ.

‘ದಿ ಕೇರಳ ಸ್ಟೋರಿ’ ಸೀಕ್ವೆಲ್​ ಮಾಡಲು ನಿರ್ದೇಶಕರಿಗೆ ಆಫರ್​:

ಈ ಸಿನಿಮಾದ ಸೀಕ್ವೆಲ್​ ಬಗ್ಗೆ ಸುದ್ದಿ ಕೇಳಿಬಂದಿದೆ. ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಕೇವಲ ಮಹಿಳೆಯರ ಬ್ರೇನ್​ವಾಶ್​ ಬಗ್ಗೆ ತೋರಿಸಲಾಗಿದೆ. ಆದರೆ ಹುಡುಗರ ಬ್ರೇನ್​ವಾಶ್​​ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಅನೇಕರು ಪ್ರಶ್ನೆ ಎತ್ತಿದ್ದಾರೆ. ನಿರ್ದೇಶಕ ಸುದೀಪ್ತೋ ಸೇನ್​ ಅವರನ್ನು ಈ ಕುರಿತು ಕೆಲವರು ಪ್ರಶ್ನಿಸಿದ್ದಾರಂತೆ. ಹುಡುಗರನ್ನು ಬ್ರೇನ್​ವಾಶ್​ ಮಾಡಿದ್ದರ ಕುರಿತು ಸೀಕ್ವೆಲ್​ ಮಾಡುವಂತೆ ಅವರಿಗೆ ಆಫರ್​ ನೀಡಲಾಗಿದೆ. ಹಾಗಾಗಿ ‘ದಿ ಕೇರಳ ಸ್ಟೋರಿ 2’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us