ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಮೊದಲ ದಿನದ ಗಳಿಕೆ 1 ಕೋಟಿ ರೂ.

The Vaccine War Collection: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 3 ಕೋಟಿ ರೂಪಾಯಿ. ಬಳಿಕ ಸಿನಿಮಾಗೆ ಬಾಯಿಮಾತಿನ ಪ್ರಚಾರ ಸಿಕ್ಕಿದ್ದರಿಂದ, 250 ಕೋಟಿ ರೂಪಾಯಿ ಗಳಿಕೆ ಆಯಿತು. ಅದೇ ರೀತಿಯ ಪ್ರಚಾರ ‘ದಿ ವ್ಯಾಕ್ಸಿನ್ ವಾರ್’ ಚಿತ್ರಕ್ಕೂ ಸಿಕ್ಕರೆ ಸಹಕಾರಿ ಆಗಲಿದೆ. ಇಲ್ಲವಾದಲ್ಲಿ ಸಿನಿಮಾ ನೆಲಕಚ್ಚಲಿದೆ.  

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಮೊದಲ ದಿನದ ಗಳಿಕೆ 1 ಕೋಟಿ ರೂ.
ನಾನಾ ಪಾಟೇಕರ್-ವಿವೇಕ್ ಅಗ್ನಿಹೋತ್ರಿ

Updated on: Sep 29, 2023 | 11:10 AM

‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಯಶಸ್ಸು  ಕಂಡ ಬಳಿಕ ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೈಗೆತ್ತಿಕೊಂಡರು. ಈ ಚಿತ್ರಕ್ಕೆ ವಿವೇಕ್ ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲು ವಿವೇಕ್ ಪ್ರಯತ್ನಿಸಿದರು. ಆದರೆ, ಅಂದುಕೊಂಡಮಟ್ಟದಲ್ಲಿ ಸಿನಿಮಾ ಗಳಿಕೆ ಮಾಡುತ್ತಿಲ್ಲ. ಈ ಚಿತ್ರ ಮೊದಲ ದಿನ ಕೇವಲ 1.30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿಯಲ್ಲಿ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಯಿತು. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಇದ್ದ ಹೊರತಾಗಿಯೂ ಬಹುತೇಕ ಚಿತ್ರಮಂದಿರಗಳು ಖಾಲಿಯೇ ಇದ್ದವು. ಕೊರೊನಾ ಲಸಿಕೆ ಕಂಡು ಹಿಡಿಯಲು ಭಾರತದ ವಿಜ್ಞಾನಿಗಳು ಯಾವ ರೀತಿಯಲ್ಲಿ ಶ್ರಮ ಹಾಕಿದರು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ವಿವೇಕ್ ಅಗ್ನಿಹೋತ್ರಿ ಅವರ ಲೆಕ್ಕಾಚಾರ ಉಲ್ಟಾ ಆಗಿದೆ. ಈ ಚಿತ್ರ ಮೊದಲ ದಿನ 1.30 ಕೋಟಿ ರೂಪಾಯಿಗೆ ಸಮಾಧಾನಪಟ್ಟಿದೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 3 ಕೋಟಿ ರೂಪಾಯಿ. ಬಳಿಕ ಸಿನಿಮಾಗೆ ಬಾಯಿಮಾತಿನ ಪ್ರಚಾರ ಸಿಕ್ಕಿದ್ದರಿಂದ, 250 ಕೋಟಿ ರೂಪಾಯಿ ಗಳಿಕೆ ಆಯಿತು. ಅದೇ ರೀತಿಯ ಪ್ರಚಾರ ‘ದಿ ವ್ಯಾಕ್ಸಿನ್ ವಾರ್’ ಚಿತ್ರಕ್ಕೂ ಸಿಕ್ಕರೆ ಸಹಕಾರಿ ಆಗಲಿದೆ. ಇಲ್ಲವಾದಲ್ಲಿ ಸಿನಿಮಾ ನೆಲಕಚ್ಚಲಿದೆ.

ಕೊವಿಡ್ ನೆನಪಿನಿಂದ ಜನರು ಹೊರ ಬಂದಿದ್ದಾರೆ. ಅದರ ಬಗ್ಗೆ ಜನರಿಗೆ ಅಷ್ಟಾಗಿ ಆಸಕ್ತಿ ಉಳಿದುಕೊಂಡಿಲ್ಲ. ಈ ಕಾರಣದಿಂದಲೂ ಜನರು ಸಿನಿಮಾ ಇಷ್ಟಪಡದೇ ಇದ್ದಿರಬಹುದು ಎಂಬುದು ಕೆಲವರು ಅಭಿಪ್ರಾಯ. ಸಿನಿಮಾದಲ್ಲಿ ಯಾವುದೇ ಕಮರ್ಷಿಯಲ್ ಅಂಶ ಇಲ್ಲ. ಇದರಿಂದಲೂ ಸಿನಿಮಾಗೆ ಹಿನ್ನಡೆ ಆಗಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಅವರು ಮಾಡಿದ್ದು ನಿಸ್ವಾರ್ಥದ ಕೆಲಸ’; ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಸುಧಾ ಮೂರ್ತಿ

‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಬಜೆಟ್ ಕೇವಲ 12 ಕೋಟಿ ರೂಪಾಯಿ. ಈ ಚಿತ್ರದ ಒಟಿಟಿ ಹಾಗೂ ಸ್ಯಾಟಲೈಟ್ ಹಕ್ಕು ದೊಡ್ಡ ಮಟ್ಟದಲ್ಲಿ ಸೇಲ್ ಆಗಿದೆ. ಹೀಗಾಗಿ, ನಿರ್ಮಾಪಕಿ ಪಲ್ಲವಿ ಜೋಶಿ ಅವರು ಈಗಾಗಲೇ ಲಾಭದಲ್ಲಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:08 am, Fri, 29 September 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us