ಪತ್ನಿ ಅನುಷ್ಕಾ ಶರ್ಮಾ ಮೇಲೆ ಎಷ್ಟೊಂದು ಪ್ರೀತಿ; ಶತಕ ಬಾರಿಸಿದ ಬಳಿಕ ವಿರಾಟ್​ ಮಾಡಿದ್ದೇನು?

Anushka Sharma: ಪಂದ್ಯ ಮುಗಿದ ಬಳಿಕ ಅವರು ಪತ್ನಿಯನ್ನು ನೆನಪಿಸಿಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.

ಪತ್ನಿ ಅನುಷ್ಕಾ ಶರ್ಮಾ ಮೇಲೆ ಎಷ್ಟೊಂದು ಪ್ರೀತಿ; ಶತಕ ಬಾರಿಸಿದ ಬಳಿಕ ವಿರಾಟ್​ ಮಾಡಿದ್ದೇನು?
ವಿರಾಟ್-ಅನುಷ್ಕಾ

Updated on: May 19, 2023 | 12:23 PM

ಗುರುವಾರ (ಮೇ 19) ನಡೆದ ಐಪಿಎಲ್ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಗೆದ್ದು ಬೀಗಿದೆ. ಕೊಹ್ಲಿ ಬಾರಿಸಿದ ಶತಕದಿಂದ ಆರ್​ಸಿಬಿ ಸುಲಭವಾಗಿ ಗೆಲುವಿನ ನಗೆ ಬೀರಿತು. ನಿನ್ನೆಯ ಪಂದ್ಯ ವೀಕ್ಷಣೆಗೆ ಅನುಷ್ಕಾ ಶರ್ಮಾ ಬಂದಿರಲಿಲ್ಲ. ಆದರೆ, ಅನುಷ್ಕಾ ಅವರನ್ನು ಕೊಹ್ಲಿ (Virat Kohli) ಮರೆತಿಲ್ಲ. ಪಂದ್ಯ ಮುಗಿದ ಬಳಿಕ ಅವರು ಪತ್ನಿಯನ್ನು ನೆನಪಿಸಿಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.

ಎಸ್​​ಆರ್​ಎಚ್​ ಹಾಗೂ ಆರ್​ಸಿಬಿ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 186 ರನ್​ಗಳ ಟಾರ್ಗೆಟ್ ನೀಡಿತು. ಇದನ್ನು ಬೆನ್ನುಹತ್ತಿದ ಆರ್​ಸಿಬಿಗೆ ಒಳ್ಳೆಯ ಆರಂಭ ಸಿಕ್ಕಿತು. ವಿರಾಟ್ ಕೊಹ್ಲಿ ಹಾಗೂ ಪಾಫ್ ಡುಪ್ಲೆಸಿಸ್ ಅವರ 172 ರನ್​ಗಳ ಜೊತೆಯಾಟದಿಂದ ತಂಡಕ್ಕೆ ಆಸರೆ ಸಿಕ್ಕಿತು. ವಿರಾಟ್ ಅವರು 62 ಬಾಲ್​ಗಳಲ್ಲಿ ಶತಕ ಸಿಡಿಸಿದರು. ವಿರಾಟ್ ಕೊಹ್ಲಿಯನ್ನು ಚಿಯರ್ ಮಾಡಲು ಅನುಷ್ಕಾ ಸ್ಟೇಡಿಯಂಗೆ ಬಂದಿರಲಿಲ್ಲ.

ಅನುಷ್ಕಾ ಶರ್ಮಾ ಅವರಿಗೆ ಈ ಬಾರಿ ಕಾನ್ ಚಿತ್ರೋತ್ಸವಕ್ಕೆ ಆಹ್ವಾನ ಬಂದಿದೆ. ಮೇ 16ರಿಂದ ಈ ಚಿತ್ರೋತ್ಸವ ಆರಂಭ ಆಗಿದ್ದು, ಅನುಷ್ಕಾ ಶರ್ಮಾ ಅವರು ಇದರಲ್ಲಿ ಭಾಗಿ ಆಗುತ್ತಿದ್ದಾರೆ. ಇದರ ಸಿದ್ಧತೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ಮೂಲಗಳ ಪ್ರಕಾರ ಅವರು ಫ್ರಾನ್ಸ್​ನಲ್ಲಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅವರು ಈ ಮ್ಯಾಚ್​ನ ಮಿಸ್ ಮಾಡಿಕೊಂಡಿದ್ದಾರೆ.

ಪಂದ್ಯ ಮುಗಿದ ತಕ್ಷಣ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಇದನ್ನು ಕ್ಯಾಮೆರಾಮ್ಯಾನ್ ಸೆರೆಹಿಡಿದ್ದಾರೆ. ಇದು ಟಿವಿಯಲ್ಲೂ ಬಿತ್ತರ ಆಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಕ್ಲಿಪ್ ವೈರಲ್ ಆಗಿದೆ. ಅನುಷ್ಕಾ ಮೇಲೆ ವಿರಾಟ್ ಕೊಹ್ಲಿಗೆ ಇರುವ ಪ್ರೀತಿ ಕಂಡು ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಕಾನ್​ ಸಿನಿಮೋತ್ಸವದಲ್ಲಿ ಅನುಷ್ಕಾ ಶರ್ಮಾ; ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಲಿದ್ದಾರೆ ನಟಿ

2018ರಲ್ಲಿ ರಿಲೀಸ್ ಆದ ‘ಜೀರೋ’ ಚಿತ್ರದ ಬಳಿಕ ಅನುಷ್ಕಾ ಶರ್ಮಾ ಅವರು ಮಗುವಿನ ಆರೈಕೆಯಲ್ಲಿ ಬ್ಯುಸಿ ಆದರು. ಅವರು ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿ ಅನ್ನೋದು ಅಭಿಮಾನಿಗಳ ಕೋರಿಕೆ. ಆದರೆ, ಅದು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 12:22 pm, Fri, 19 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us