ಇಂದು (ಜೂನ್ 21) ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು (International Yoga Day 2023) ಆಚರಿಸಲಾಗುತ್ತಿದೆ. ಕನ್ನಡ ಚಿತ್ರರಂಗ, ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ದಿನದಲ್ಲಿ ಭಾಗಿ ಆಗಿದ್ದಾರೆ. ಬಾಲಿವುಡ್ನ ಹಲವು ನಟಿಯರು ಯೋಗಕ್ಕೆ ಆದ್ಯತೆ ನೀಡುತ್ತಾರೆ. ಕೆಲವು ನಟಿಯರ ಬದುಕನ್ನು ಯೋಗ ಬದಲಾಯಿಸಿದೆ. ಈ ಬಗ್ಗೆ ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಿದೆ. ಈ ಸಾಲಿನಲ್ಲಿ ಕರೀನಾ ಕಪೂರ್, ಶಿಲ್ಪಾ ಶೆಟ್ಟಿ ಮೊದಲಾದವರು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಕರೀನಾ ಕಪೂರ್ ಅವರು ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅವರು ಎರಡು ಮಕ್ಕಳ ತಾಯಿ. ಆದಾಗ್ಯೂ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಕರೀನಾ ಯೋಗ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ನಿತ್ಯವೂ ಯೋಗ ಮಾಡುತ್ತಾರೆ. ಇದು ಅವರ ಫಿಟ್ನೆಸ್ ಗುಟ್ಟು. ಸದ್ಯ ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿ ನಟಿಸುತ್ತಿದ್ದಾರೆ.
ಬಾಲಿವುಡ್ ನಟಿ ಮಲೈಕಾ ಅರೋರಾಗೆ ಈಗ ವಯಸ್ಸು 49. ಆದಾಗ್ಯೂ ಯುವತಿಯರನ್ನು ನಾಚಿಸುವಂತಿದೆ ಅವರ ಫಿಟ್ನೆಸ್. ಅವರು ಇಷ್ಟು ಫಿಟ್ ಆಗಿರೋಕೆ ಯೋಗವೂ ಕಾರಣ. ಅವರು ನಿತ್ಯ ಯೋಗಾಸನ ಮಾಡುತ್ತಾರೆ. ಈ ವಿಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಚಿತ್ರರಂಗಕ್ಕೆ ಬರುವುದಕ್ಕೂ ಮೊದಲೂ ದಪ್ಪ ಇದ್ದರು. ಇದಕ್ಕೆ ಅವರು ಸಾಕಷ್ಟು ಟ್ರೋಲ್ ಆಗಿದ್ದರು. ಜಿಮ್ ಜೊತೆ ನಿತ್ಯ ಯೋಗಾಸನ ಮಾಡುವುದನ್ನು ಅಭ್ಯಾಸ ಮಾಡಿಕೊಂಡ ನಂತರ ಅವರ ಬಾಡಿ ಫಿಟ್ ಆಯಿತು. ಈಗ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಸಾಕಷ್ಟು ಫೋಟೋಗಳನ್ನು ಅವರು ಶೇರ್ ಮಾಡಿಕೊಳ್ಳುತ್ತಾರೆ.
ಕನ್ನಡ ಸಿನಿಮಾದಿಂದ ಬಣ್ಣದ ಬದುಕು ಆರಂಭಿಸಿದ ನಟಿ ರಕುಲ್ ಪ್ರೀತ್ ಸಿಂಗ್ ಯೋಗಾಸನ ಮಾಡುತ್ತಾರೆ. ಅವರು ಸಖತ್ ಫಿಟ್ ಆಗಿದ್ದಾರೆ. ಅವರು ಆಗಾಗ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಗಾಸನಕ್ಕೆ ಆದ್ಯತೆ ನೀಡುತ್ತಾರೆ. ಒಂದು ದಿನವೂ ಬಿಡದೇ ಯೋಗ ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೂ ಯೋಗ ಹೇಳಿಕೊಡುತ್ತಾರೆ. ಅವರಿಗೆ ಯೋಗಾಸನದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಅವರ ಪತಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿ ಬಿದ್ದಾಗ ಶಿಲ್ಪಾ ಯೋಗದ ಬಗ್ಗೆ ಹೆಚ್ಚು ಮಾತನಾಡಿದ್ದರು.
ನಟಿ ದಿಯಾ ಮಿರ್ಜಾ ಅವರು ಕೂಡ ಯೋಗಾಸನ ಅಭ್ಯಾಸ ಮಾಡುತ್ತಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯೋಗ ಮಾಡುತ್ತಿರುವ ಸಾಕಷ್ಟು ಫೋಟೋಗಳು ಇವೆ.
ಇದನ್ನೂ ಓದಿ: Anita Bhat: ಯೋಗದ ಮೂಲಕ ಅನೇಕರಿಗೆ ಸ್ಫೂರ್ತಿಯಾದ ನಟಿ ಅನಿತಾ ಭಟ್
ನಟಿ ಮೀರಾ ಕಪೂರ್ ಫಿಟ್ನೆಸ್ ಮೂಲಕ ಗಮನ ಸೆಳೆದಿದ್ದಾರೆ. ಅವರ ಫಿಟ್ನೆಸ್ ಹಿಂದೆ ಯೋಗ ಇದೆ. ಅವರು ಯೋಗ ಮಾಡುತ್ತಿರುವ ಹಲವು ಫೋಟೋಗಳು ಈ ಮೊದಲು ವೈರಲ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ