ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗೆ ಸಂಕಷ್ಟ; ಆಲಿಯಾ, ಬನ್ಸಾಲಿಗೆ ಸಮನ್ಸ್​ ​

ಕಮಾಟಿಪುರದ ಡಾನ್​ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ರಿಲೀಸ್​ ಆಗಿದ್ದ ಚಿತ್ರದ ಟೀಸರ್​ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗೆ ಸಂಕಷ್ಟ; ಆಲಿಯಾ, ಬನ್ಸಾಲಿಗೆ ಸಮನ್ಸ್​ ​
ಆಲಿಯಾ ಭಟ್​

Updated on: Mar 25, 2021 | 7:38 PM

ಮುಂಬೈ ಮಾಫಿಯಾ ಕ್ವೀನ್​ ಗಂಗುಬಾಯಿ ಕಾಠಿಯಾವಾಡಿ ಜೀವನ ಆಧರಿಸಿ ಸಿದ್ಧಗೊಂಡಿರುವ ಸಿನಿಮಾಗೆ ಈಗ ಸಂಕಷ್ಟ ಎದುರಾಗಿದೆ. ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಇರುವ ಈ ಚಿತ್ರ ತಂಡಕ್ಕೆ ಮುಂಬೈ ಕೋರ್ಟ್​ ಸಮನ್ಸ್​ ಜಾರಿ ಮಾಡಿದೆ. ಇದೇ ಮೇ 21ರಂದು ಬನ್ಸಾಲಿ, ಚಿತ್ರದ ನಟಿ ಆಲಿಯಾ ಭಟ್​ಗೆ ಕೋರ್ಟ್​ಗೆ ಹಾಜರಾಗಲು ಸೂಚಿಸಲಾಗಿದೆ.

ಕಮಾಟಿಪುರದ ಡಾನ್​ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ರಿಲೀಸ್​ ಆಗಿದ್ದ ಚಿತ್ರದ ಟೀಸರ್​ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈಗ ಗಂಗೂಬಾಯಿ ಅವರ ದತ್ತುಪುತ್ರ ಬಾಬುರಾವ್​ ಶಾ ದೂರು ದಾಖಲು ಮಾಡಿದ್ದಾರೆ. ಅಲ್ಲದೆ, ಅವರು ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ.

ಈ ಚಿತ್ರದಲ್ಲಿ ಗಂಗೂಬಾಯಿ ಅವರನ್ನು ತಪ್ಪಾಗಿ ತೋರಿಸಲಾಗಿದೆ. ಸಿನಿಮಾದಲ್ಲಿ ತೋರಿಸಲು ಹೊರಟಿರುವ ದೃಶ್ಯಗಳು ವಾಸ್ತವಕ್ಕೆ ದೂರ ಇದ್ದಂತೆ ಕಾಣುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರನ್ನು ಸ್ವೀಕರಿಸಿರುವ ಕೋರ್ಟ್​ ಆಲಿಯಾ ಭಟ್​ ಹಾಗೂ ನಿರ್ದೇಶಕ ಸಂಜಯ್​ ಬನ್ಸಾಲಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಜುಲೈ 30ರಂದು ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ, ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಮಧ್ಯೆ ಚಿತ್ರ ಒಂದಾದ ಮೇಲೆ ಒಂದು ವಿವಾದ ಸೃಷ್ಟಿಸುತ್ತಿರುವುದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇತ್ತೀಚೆಗೆ ಆಲಿಯಾ ಭಟ್​ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಫಸ್ಟ್​ಲುಕ್​ ಪೋಸ್ಟರ್​ ಮೂಲಕ ಆಲಿಯಾಗೆ ಆರ್​ಆರ್​ಆರ್​ ತಂಡ ಶುಭಾಶಯ ಕೋರಿತ್ತು. ಸೀರೆ ಮತ್ತು ಆಭರಣ ಧರಿಸಿ ಸಾಂಪ್ರದಾಯಿಕ ಗೆಟಪ್​ನಲ್ಲಿ ಆಲಿಯಾ ಕಾಣಿಸಿಕೊಂಡಿದ್ದು ಸಿನಿರಸಿಕರೆ ಖುಷಿ ನೀಡಿತ್ತು. ಬಾಹುಬಲಿ, ಮಗಧೀರ, ಮುಂತಾದ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ಅದ್ದೂರಿಯಾಗಿ ತೋರಿಸಿದ್ದಾರೆ ರಾಜಮೌಳಿ. ಅವರು ಈಗ ಆರ್​ಆರ್​ಆರ್​ ಚಿತ್ರದಲ್ಲಿ ಆಲಿಯಾರನ್ನು ಹೇಗೆ ತೋರಿಸಬಹುದು ಎನ್ನುವುದು ಸದ್ಯದ ಕುತೂಹಲ.

ಇದನ್ನೂ ಓದಿ: ಆಲಿಯಾ ಭಟ್​ ಜನ್ಮದಿನಕ್ಕೆ RRR ನಿರ್ದೇಶಕ ರಾಜಮೌಳಿ ಕಡೆಯಿಂದ ಭರ್ಜರಿ ಗಿಫ್ಟ್​! ಫ್ಯಾನ್ಸ್​ ಫಿದಾ

Published On - 7:27 pm, Thu, 25 March 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us