ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಜೋಡಿಯನ್ನ ತೆರೆಯ ಮೇಲೆ ನೋಡೋದೆ ಚಂದ. ಇವರಿಬ್ಬರು ಪ್ರೇಮ ಪಕ್ಷಿಗಳಾಗಿ ಬೆಳ್ಳಿತೆರೆ ಮೇಲೆ ಕಂಡ್ರೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗೋದು ಗ್ಯಾರಂಟಿ. ಆದ್ರೀಗ ದೀಪಿಕಾ ಇಬ್ಬರ ಅಭಿಮಾನಿಗಳಿಗೂ ಕಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ.
ಹೀಗೆ ದೀಪಿಕಾ ಹಾಗೂ ರಣ್ವೀರ್ ಸಿಂಗ್ ಇಬ್ಬರೂ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕನೇ ಸಿನಿಮಾ 83 ಚಿತ್ರೀಕರಣದ ಹಂತದಲ್ಲಿದೆ. ಪದ್ಮಾವತ್.. ಬಾಜಿರಾವ್ ಮಸ್ತಾನಿಯಂತಹ ಸಿನಿಮಾಗಳು ಇಬ್ಬರಿಗೂ ಸೂಪರ್ ಸಕ್ಸಸ್ ಕೊಟ್ಟಿದೆ. ಹೀಗಾಗಿ ಬಾಲಿವುಡ್ ಮಂದಿ ಈ ಜೋಡಿಯನ್ನ ಇಟ್ಕೊಂಡು ಸಿನಿಮಾ ಮಾಡೋಕೆ ಮುಂದಾಗಿತ್ತು.
ಪತಿ ಜೊತೆ ನಟಿಸೋದಿಲ್ಲ:
ದೀಪಿಕಾ, ರಣ್ವೀರ್ ಇಬ್ಬರಿಗೂ ಒಂದೇ ಸಿನಿಮಾದಲ್ಲಿ ನಟಿಸುವಂತೆ ಒತ್ತಡ ಹೇರಿದ್ದರು. ಆದ್ರೆ ದೀಪಿಕಾ ಮಾತ್ರ ಪತಿ ಜೊತೆ ನಟಿಸೋದಿಲ್ಲ ಅಂತ ಖಡಕ್ಕಾಗಿ ಹೇಳಿದ್ದಾಳೆ. ಡಿಪ್ಪಿ ಪತಿ ರಣ್ವೀರ್ ಜೊತೆನೇ ನಟಿಸೋದಿಲ್ಲ ಅಂತ ಹೇಳಿದ್ಯಾಕೆ? ದೀಪಿಕಾ ಹೀಗೆ ಹೇಳಿದ ಉದ್ದೇಶವೇನು ಅನ್ನೋದು ಬಾಲಿವುಡ್ ಮಂದಿಯನ್ನ ಕಾಡುತ್ತಿದೆ.
ಮದುವೆ ಬಳಿಕ ದೀಪಿಕಾಗೆ ಆಫರ್ಗಳೇನೂ ಕಮ್ಮಿ ಆಗಿಲ್ಲ. ಅದ್ರಲ್ಲೂ ರಣ್ವೀರ್ ಸಿಂಗ್ ಜೊತೆ ನಟಿಸೋಕೆ ದೀಪಿಕಾ ತುಂಬಾನೆೇ ಆಫರ್‌ಗಳು ಬರ್ತಿವೆಯಂತೆ. ಈಗಾಗಲೇ ಮೂರು ಸಿನಿಮಾಗಳ ಆಫರ್ ಬಂದಿದೆಯಂತೆ. ಆದ್ರೆ ದೀಪಿಕಾ ಮಾತ್ರ ರಣ್ವೀರ್ ಸಿಂಗ್ ಜೊತೆ ನಟಿಸೋದಿಲ್ಲ ಅಂತ ಕಡ್ಡಿಮುರಿದಂತೆ ಹೇಳಿದ್ದಾಳೆ.
Published On - 4:25 pm, Tue, 3 December 19