ದಿಲ್ಜೀತ್ ಕಾನ್ಸರ್ಟ್​​ಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಲೈವ್ ಕಾನ್ಸರ್ಟ್ ಮಾರುಕಟ್ಟೆ ಬೆಳೆಯುತ್ತಿರುವ ರೀತಿ, ಅದು ಸೃಷ್ಟಿಸುವ ಅವಕಾಶಗಳ ಬಗ್ಗೆ ಚರ್ಚಿಸಿದ್ದರು. ಅದಾದ ಬಳಿಕ ಮೋದಿ ಅವರು ಎಲ್ಲ ರಾಜ್ಯ ಸರ್ಕಾರಗಳ ಬಳಿ ಮನವಿ ಮಾಡಿ ಲೈವ್ ಕಾನ್ಸರ್ಟ್​​ಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಇದರಿಂದ ಭಾರತದಲ್ಲಿ ಲೈವ್ ಕಾನ್ಸರ್ಟ್​​ಗಳು ಹೆಚ್ಚಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಅದೇ ದಿಲ್ಜೀತ್ ಅವರ ಹೊಸ ಲೈವ್ ಕಾನ್ಸರ್ಟ್​​ಗೆ ದೆಹಲಿ ಸರ್ಕಾರ ಅವಕಾಶ ನಿರಾಕರಿಸಿದೆ.

ದಿಲ್ಜೀತ್ ಕಾನ್ಸರ್ಟ್​​ಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್
Diljit Dosanjh

Updated on: Oct 22, 2026 | 4:06 PM

ಮುಖ್ಯಾಂಶಗಳು

  • ದಿಲ್ಜಿತ್ ದೊಸ್ಸಾಂಜ್​​ ಶೋಗೆ ಅನುಮತಿ ನಿರಾಕರಣೆ
  • ದಿಲ್ಜೀತ್ ದೊಸ್ಸಾಂಜ್ ಲೈವ್ ಕಾನ್ಸರ್ಟ್ ಆಯೋಜಿಸಲಾಗಿತ್ತು
  • ದೆಹಲಿ ಪೊಲೀಸರಿಂದ ಅವಕಾಶ ನಿರಾಕರಣೆ

ಕೆಲ ತಿಂಗಳ ಹಿಂದೆ, ಖ್ಯಾತ ಗಾಯಕ, ನಟ ದಿಲ್ಜೀತ್ ದೊಸ್ಸಾಂಜ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಲೈವ್ ಕಾನ್ಸರ್ಟ್​​ಗಳ ಬಗ್ಗೆ ಮಾತನಾಡಿದ್ದರು. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಲೈವ್ ಕಾನ್ಸರ್ಟ್ ಮಾರುಕಟ್ಟೆ ಬೆಳೆಯುತ್ತಿರುವ ರೀತಿ, ಅದು ಸೃಷ್ಟಿಸುವ ಅವಕಾಶಗಳ ಬಗ್ಗೆ ಚರ್ಚಿಸಿದ್ದರು. ಅದಾದ ಬಳಿಕ ಮೋದಿ ಅವರು ಎಲ್ಲ ರಾಜ್ಯ ಸರ್ಕಾರಗಳ ಬಳಿ ಮನವಿ ಮಾಡಿ ಲೈವ್ ಕಾನ್ಸರ್ಟ್​​ಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಇದರಿಂದ ಭಾರತದಲ್ಲಿ ಲೈವ್ ಕಾನ್ಸರ್ಟ್​​ಗಳು ಹೆಚ್ಚಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಅದೇ ದಿಲ್ಜೀತ್ ಅವರ ಹೊಸ ಲೈವ್ ಕಾನ್ಸರ್ಟ್​​ಗೆ ದೆಹಲಿ ಸರ್ಕಾರ ಅವಕಾಶ ನಿರಾಕರಿಸಿದೆ.

ಅಕ್ಟೋಬರ್ 30ರಂದು ದಿಲ್ಜೀತ್ ದೊಸ್ಸಾಂಜ್ ಅವರು ದೆಹಲಿಯಲ್ಲಿ​​ ಕನ್ಸರ್ಟ್‌ ಆಯೋಜನೆ ಮಾಡಿದ್ದರು. ಬುಕ್​​ಮೈ ಶೋನಲ್ಲಿ ಟಿಕೆಟ್​​ಗಗಳು ಸಹ ಮಾರಾಟ ಆಗಿದ್ದವು. ಆದರೆ ಶೋಗೆ ಇನ್ನೊಂದು ವಾರ ಇರುವಾಗ ದೆಹಲಿ ಪೊಲೀಸರು ಕಾನ್ಸರ್ಟ್​​ಗೆ ಅವಕಾಶವನ್ನು ನಿರಾಕರಿಸಿದ್ದಾರೆ. ದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಕಾನ್ಸರ್ಟ್ ಆಯೋಜನೆಗೊಂಡಿತ್ತು. ಭದ್ರತಾ ಕಾರಣವನ್ನು ನೀಡಿ ಪೊಲೀಸರು ದಿಲ್ಜೀತ್ ಅವರಿಗೆ ಅನುಮತಿಯನ್ನು ನಿರಾಕರಿಸಿದ್ದಾರೆ.

ದಿಲ್ಜಿತ್ ಭಾರತದಲ್ಲಿ ಮಾತ್ರವೇ ಅಲ್ಲದೆ ವಿಶ್ವದಾದ್ಯಂತ ಹಲವಾರು ಶೋಗಳನ್ನು ಕಳೆದ ಕೆಲ ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. 2024ರಲ್ಲಿ ಅವರು ನಡೆಸಿಕೊಟ್ಟಿದ್ದ ‘ದಿಲ್​-ಲುಮಿನಾಟಿ’ ಟೂರ್ ಭಾರಿ ಯಶಸ್ವಿ ಆಗಿತ್ತು. ವಿಶ್ವದ ಹಲವು ಪ್ರಮುಖ ನಗರಗಳಲ್ಲಿ ಭಾರಿ ಅದ್ಧೂರಿ ಶೋಗಳನ್ನು ದಿಲ್ಜಿತ್ ನೀಡಿದರು. ಈಗ ಅವರು ಭಾರತದ ಟೂರ್ ಆರಂಭಿಸಿದ್ದರು. ಆದರೆ ದೆಹಲಿಯಲ್ಲಿ ಅವರಿಗೆ ಅನುಮತಿ ನಿರಾಕರಣೆ ಮಾಡಲಾಗಿದೆ.

ಇದನ್ನೂ ಓದಿ:93 ಕೋಟಿ ರೂಪಾಯಿ ಗಳಿಸಿದ ‘ಪ್ರೇಮದ ಊರಲಿ’ ಸಿನಿಮಾ; ನೂರು ಕೋಟಿ ಗಳಿಕೆ ಫಿಕ್ಸ್

ದಿಲ್ಜೀತ್ ಅವರ ಇಂಡಿಯಾ ಟೂರ್​​ನ ಮೊದಲ ಕಾನ್ಸರ್ಟ್ ದೆಹಲಿಯಲ್ಲಿಯೇ ಆಯೋಜಿಸಲಾಗಿತ್ತು. ಆದರೆ ಮೊದಲ ಶೋಗೆ ಅವಕಾಶವನ್ನು ಪೊಲೀಸರು ನಿರಾಕರಿಸಿದ್ದಾರೆ. ದೆಹಲಿ, ಇಂಧೋರ್, ಅಹಮದಾಬಾದ್, ಮುಂಬೈ, ಬೆಂಗಳೂರು, ಲಖನೌ, ಕೊಲ್ಕತ್ತ, ಚಂಡೀಘಡಗಳಲ್ಲಿ ದಿಲ್ಜೀತ್ ಅವರ ಶೋ ನಿಗದಿ ಆಗಿದೆ. ಬೆಂಗಳೂರಿನಲ್ಲಿ ನವೆಂಬರ್ 29ರಂದು ಶೋ ನಡೆಯಲಿದೆ. ಬುಕ್​​ ಮೈ ಶೋನಲ್ಲಿ ಟಿಕೆಟ್​​ಗಳು ಮಾರಾಟ ಆಗುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us