AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ’ ಕತೆ ಕದ್ದರೇ ಧನುಶ್, ‘ಓಂ’ ಟ್ರೈಲರ್ ಹೇಳುತ್ತಿರುವುದೇನು?

Om Movie vs Pushpa: ಧನುಶ್ ನಟನೆಯ ‘ಓಂ’ ಹೆಸರಿನ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗಿದ್ದು, ಈ ಸಿನಿಮಾದ ಟೀಸರ್ ನಿನ್ನೆಯಷ್ಟೆ ರಿಲೀಸ್ ಆಗಿದೆ. ಸಿನಿಮಾದ ಕತೆಯೂ ಸಹ ರಕ್ತ ಚಂದನ ಕಳ್ಳಸಾಗಣೆ ಸುತ್ತಲೇ ಸುತ್ತುತ್ತಿದೆ. ಟೀಸರ್ ನೋಡಿರುವ ಪ್ರೇಕ್ಷಕರು ‘ಪುಷ್ಪ’ ಕತೆ ಕದ್ದಿದ್ದಾರೆ ಎಂದು ಚರ್ಚೆ ಆರಂಭಿಸಿದ್ದಾರೆ.

‘ಪುಷ್ಪ’ ಕತೆ ಕದ್ದರೇ ಧನುಶ್, ‘ಓಂ’ ಟ್ರೈಲರ್ ಹೇಳುತ್ತಿರುವುದೇನು?
Pushpa Om
ಮಂಜುನಾಥ ಸಿ.
|

Updated on: Oct 28, 2026 | 11:41 AM

Share

ಮುಖ್ಯಾಂಶಗಳು

  • ಧನುಶ್ ನಟಿಸುತ್ತಿರುವ ತಮಿಳು ಸಿನಿಮಾ ‘ಓಂ’
  • ‘ಪುಷ್ಪ’ ಕತೆಯನ್ನು ಕದ್ದಿದ್ದಾರೆಂದು ಆರೋಪ
  • ‘ಓಂ’ ಸಿನಿಮಾ ಸಹ ರಕ್ತ ಚಂದನ ಕಳ್ಳಸಾಗಣೆ ಕತೆ ಹೊಂದಿದೆ

ಅಲ್ಲು ಅರ್ಜುನ್ ನಟಿಸಿ ಸುಕುಮಾರ್ ನಿರ್ದೇಶನ ಮಾಡಿರುವ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ರಕ್ತ ಚಂದನದ ಕಳ್ಳಸಾಗಣೆ ಸುತ್ತ ಸುತ್ತುವ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾನಲ್ಲಿ ಮಾಸ್ ಕಮರ್ಶಿಯಲ್ ಅಂಶಗಳನ್ನು ಭರಪೂರವಾಗಿ ತುಂಬಿದ್ದಾರೆ ನಿರ್ದೇಶಕ ಸುಕುಮಾರ್. ಇದೀಗ ಧನುಶ್ ನಟನೆಯ ‘ಓಂ’ ಹೆಸರಿನ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗಿದ್ದು, ಈ ಸಿನಿಮಾದ ಟೀಸರ್ ನಿನ್ನೆಯಷ್ಟೆ ರಿಲೀಸ್ ಆಗಿದೆ. ಸಿನಿಮಾದ ಕತೆಯೂ ಸಹ ರಕ್ತ ಚಂದನ ಕಳ್ಳಸಾಗಣೆ ಸುತ್ತಲೇ ಸುತ್ತುತ್ತಿದೆ. ಟೀಸರ್ ನೋಡಿರುವ ಪ್ರೇಕ್ಷಕರು ‘ಪುಷ್ಪ’ ಕತೆ ಕದ್ದಿದ್ದಾರೆ ಎಂದು ಚರ್ಚೆ ಆರಂಭಿಸಿದ್ದಾರೆ.

‘ಓಂ’ ಸಿನಿಮಾದ ಕತೆಯೂ ಸಹ ರಕ್ತ ಚಂದನ ಕಳ್ಳಸಾಗಣೆ ಕುರಿತಾಗಿಯೇ ಇದೆ. ನಿನ್ನೆ ಬಿಡುಗಡೆ ಆಗಿರುವ ಟೀಸರ್​​ ನಟಿ ಸಾಯಿ ಪಲ್ಲವಿ ಪಾತ್ರದ ಕುರಿತಾಗಿದ್ದಾಗಿದೆ. ಸಾಯಿ ಪಲ್ಲವಿ ಐಪಿಎಸ್ ನಿತ್ಯಾ ರೆಡ್ಡಿ ಪಾತ್ರದಲ್ಲಿ ನಟನೆ ಮಾಡಿದ್ದು, ಅರಣ್ಯದಲ್ಲಿ ನಡೆಯುತ್ತಿರುವ ರಕ್ತ ಚಂದನ ಕಳ್ಳಸಾಗಣೆ ತಡೆಯುವುದು ಅವರ ಗುರಿ. ನಿನ್ನೆ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಸಾಯಿ ಪಲ್ಲವಿ ಅವರ ಪಾತ್ರದ ಹಲವು ಕೋನಗಳನ್ನು ತೋರಿಸಲಾಗಿದೆ. ರಕ್ತ ಚಂದನ ತಡೆಯುವ ಪ್ರಯತ್ನದಲ್ಲಿ ಸಾಯಿ ಪಲ್ಲವಿ ಪಾತ್ರ ಅನುಭಿವಿಸುವ ಹಲವು ಭಾವನಾತ್ಮಕ ಏರು-ಪೇರುಗಳ ಸಣ್ಣ ಝಲಕ್ ಅನ್ನು ಸಹ ನೀಡಲಾಗಿದೆ.

ಇದನ್ನೂ ಓದಿ:ಪ್ರತಿದಿನ ಬೆಳಗ್ಗೆ 10 ನಿಮಿಷಗಳ ಕಾಲ ಓಂಕಾರ ಪಠಿಸುವುದು ಎಷ್ಟು ಪ್ರಯೋಜನಕಾರಿ ಗೊತ್ತೇ?

ಸಿನಿಮಾನಲ್ಲಿ ಧನುಶ್ ಮುಖ್ಯ ಪಾತ್ರದಲ್ಲಿ ನಟನೆ ಮಾಡಿದ್ದು, ಅವರು ರಕ್ತ ಚಂದನ ಕಳ್ಳಸಾಗಣೆದಾರನ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಮಮ್ಮುಟಿ ಸಹ ಇದ್ದು, ಅವರೂ ಸಹ ಗ್ಯಾಂಗಿನ ಮುಖ್ಯಸ್ಥನ ಪಾತ್ರದಲ್ಲಿ ನಟನೆ ಮಾಡಿದ್ದಾರಂತೆ. ‘ಪುಷ್ಪ’ ಸಿನಿಮಾನಲ್ಲಿಯೂ ಸಹ ಸಿನಿಮಾದ ನಾಯಕ ರಕ್ತ ಚಂದನ ಕಣ್ಣಸಾಗಣೆದಾರನಾಗಿರುತ್ತಾನೆ. ಈಗ ‘ಓಂ’ ಸಿನಿಮಾನಲ್ಲೂ ನಾಯಕ ರಕ್ತ ಚಂದನ ಕಳ್ಳಸಾಗಣೆದಾರನಾಗಿದ್ದಾನೆ. ಆ ಸಿನಿಮಾನಲ್ಲೂ ಸಹ ನಾಯಕ ನಾನಾ ರೀತಿ ಐಡಿಯಾಗಳನ್ನು ಬಳಸಿ ಪೊಲೀಸರ ಕಣ್ಣು ತಪ್ಪಿಸಿ ರಕ್ತ ಚಂದನ ಕಳ್ಳ ಸಾಗಣೆ ಮಾಡುತ್ತಾನೆ, ಇಲ್ಲಿಯೂ ಸಹ ಅದೇ ಕತೆಯೇ ಇದ್ದಂತಿದೆ.

ಈಗಾಗಲೇ ತೆಲುಗು ಪ್ರೇಕ್ಷಕರು, ‘ಓಂ’ ಸಿನಿಮಾ ನಿರ್ದೇಶಕರು ‘ಪುಷ್ಪ’ ಸಿನಿಮಾ ಕತೆ ಕದ್ದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ‘ಓಂ’ ಸಿನಿಮಾ ನಿರ್ದೇಶನ ಮಾಡುತ್ತಿರುವ ರಾಜ್​​ಕುಮಾರ್ ಪೆರಿಯಸಾಮಿ ಪ್ರತಿಭಾವಂತ ನಿರ್ದೇಶಕ. ಈ ಹಿಂದೆ ಅವರು ನಿರ್ದೇಶಿಸಿದ ‘ಅಮರನ್’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಧಕ್ಕಿದೆ ಮಾತ್ರವಲ್ಲದೆ ಅವರಿಗೂ ಸಹ ಅತ್ಯುತ್ತಮ ನಿರ್ದೇಶಕ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಪ್ರತಿಭಾವಂತ ನಿರ್ದೇಶಕ ರಾಜ್​​ಕುಮಾರ್ ಪೆರಿಯಸಾಮಿ ಅವರು ಕತೆ ಕದ್ದು ಸಿನಿಮಾ ಮಾಡಲಾರರು ಎಂಬ ನಂಬಿಕೆ ಸಿನಿಮಾ ಪ್ರೇಮಿಗಳದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More