ಸೆಲೆಬ್ರಿಟಿಗಳು ಎಂದಾಗ 5 ಸ್ಟಾರ್ ಹೋಟೆಲ್ನಲ್ಲಿ ಊಟ ಮಾಡುತ್ತಾರೆ, ಸಾಮಾನ್ಯ ಆಹಾರ ಸೇವನೆ ಮಾಡುವುದಿಲ್ಲ ಎಂಬುದು ಅನೇಕರ ಕಲ್ಪನೆ ಆಗಿರುತ್ತದೆ. ಆದರೆ, ಎಲ್ಲರೂ ನಿಜಕ್ಕೂ ಆ ರೀತಿ ಇರುವುದಿಲ್ಲ. ಕೆಲವರಿಗೆ ಲೋಕಲ್ ಫುಡ್ ಎಂದರೆ ಸಖತ್ ಇಷ್ಟ. ಅನೇಕರಿಗೆ ದೋಸೆ ಇಷ್ಟ ಎಂದು ಹೇಳಿದ ಉದಾಹರಣೆ ಇದೆ. ಅದೇ ರೀತಿ ಇಡ್ಲಿ ಇಷ್ಟ ಎಂದು ಹೇಳಿದ ದಕ್ಷಿಣದ ಕಲಾವಿದರು ಸಾಕಷ್ಟು ಮಂದಿ ಇದ್ದಾರೆ. ಇಡ್ಲಿ ಪ್ರಿಯರು ಎನಿಸಿಕೊಂಡಿರೋ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ವಿವರ. ಅವರು ಇಡ್ಲಿ ಬಗ್ಗೆ ವಿಶೇಷ ಪ್ರೀತಿ ಹೊರಹಾಕಿದ್ದರು.
ದುಲ್ಕರ್ ಸಲ್ಮಾನ್ ಅವರು ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಫುಡ್ ಬಗ್ಗೆ ವಿಶೇಷ ಪ್ರಿತಿ ಇದೆ. ಅವರಿಗೆ ಇಡ್ಲಿ ಎಂದರೆ ಸಖತ್ ಇಷ್ಟ ಅಂತೆ. ‘ಇಡ್ಲಿ ಅಥವಾ ಚಪಾತಿ’ ಎಂದು ಕೇಳಿದ ಪ್ರಶ್ನೆಗೆ ಅವರು ಇಡ್ಲಿ ಎಂದು ಉತ್ತರ ನೀಡಿದ್ದರು. ಇನ್ನು, ಪ್ರಭಾಸ್ಗೆ ಆಹಾರದ ಬಗ್ಗೆ ವಿಶೇಷ ಕಾಳಜಿ. ಸೆಟ್ಗೆ ಅವರ ಮನೆಯಿಂದಲೇ ಊಟ ಬರುತ್ತದೆ. ಅವರ ಜೊತೆ ಇರುವ ಸೆಲೆಬ್ರಿಟಿಗಳಿಗೂ ಊಟ ಹೋಗೋದು ಮನೆಯಿಂದ. ಅವರಿಗೂ ಇಡ್ಲಿ ಎಂದರೆ ಸಖತ್ ಪ್ರೀತಿ. 12-1 ಗಂಟೆಗೂ ಇಡ್ಲಿ ತಿನ್ನುತ್ತೇನೆ ಎಂದು ಹೇಳಿದ್ದಾರೆ.
ದೀಪಿಕಾ ಪಡುಕೋಣೆ ಅವರು ಕರ್ನಾಟಕದವರು. ಅವರಿಗೆ ಇಡ್ಲಿ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಬಗ್ಗೆ ಅವರು ಹೇಳಿಕೊಂಡಿದ್ದರು. ‘ಇಡ್ಲಿ ದಿನ’ ಎಂಬುದು ಕೂಡ ಇದೆ. ಆ ದಿನದ ಬಗ್ಗೆ ಗೊತ್ತೇ ಇರಲಿಲ್ಲ’ ಎಂದು ದೀಪಿಕಾ ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: ದುಲ್ಕರ್ ಸಲ್ಮಾನ್ ಬಳಿ ಇರುವ ಕಾರುಗಳು ಬಾಲಿವುಡ್ ಸ್ಟಾರ್ ನಟರ ಬಳಿಯೂ ಇಲ್ಲ!
ಅದಿತಿ ರಾವ್ ಹೈದರಿಗೆ ಇಡ್ಲಿ ಎಂದರೆ ಅದೆಷ್ಟು ಪ್ರೀತಿ ಎಂಬುದನ್ನು ಈ ಮೊದಲು ಹೇಳಿಕೊಂಡಿದ್ದರು. ಬೆಳಿಗ್ಗೆ ತಿಂಡಿಗೆ, ಮಧ್ಯಾಹ್ನ ಊಟಕ್ಕೆ ಹಾಗೂ ರಾತ್ರಿ ಊಟಕ್ಕೆ ಇಡ್ಲಿಯನ್ನೇ ತಿನ್ನಬಲ್ಲೆ ಎಂದು ಅವರು ಹೇಳಿಕೊಂಡಿದ್ದರು.
ಇನ್ನು, ಕೀರ್ತಿ ಸುರೇಶ್ ಅವರು ದೋಸೆ ಪ್ರಿಯೆ. ಅವರು ದೋಸೆ ಬಗ್ಗೆ ಎಷ್ಟು ಪ್ರೀತಿ ಇದೆ. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Sat, 14 December 24