AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಕತೆ, ಎರಡು ಸಿನಿಮಾ, ಒಂದೇ ದಿನ ಬಿಡುಗಡೆ: ಏನಿದು ವಿವಾದ?

ಪ್ರತಿ ವಾರ ಹಲವು ಭಾಷೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಪ್ರತಿ ವಾರ ಬೇರೆ ಬೇರೆ ರೀತಿಯ ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಈ ವಾರ ಒಂದು ಅಪರೂಪದ ಘಟನೆ ನಡೆಯುತ್ತಿದೆ. ಈ ವಾರ ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಎರಡೂ ಸಿನಿಮಾಗಳ ಕತೆ ಒಂದೇ ಆಗಿದೆ. ಹೌದು, ಈ ವಾರ ನವೆಂಬರ್ 30ಕ್ಕೆ ತೆಲುಗಿನ ಎರಡು ಹೊಸ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಎರಡೂ ಸಿನಿಮಾಗಳ ಕತೆ ಒಂದೇ ಆಗಿದೆ. ಇದು ಸಣ್ಣ ಮಟ್ಟಿಗಿನ ವಿವಾದಕ್ಕೆ ಸಹ ಕಾರಣ ಆಗಿದೆ.

ಒಂದೇ ಕತೆ, ಎರಡು ಸಿನಿಮಾ, ಒಂದೇ ದಿನ ಬಿಡುಗಡೆ: ಏನಿದು ವಿವಾದ?
Akashamlo Oka Tara Dear Astronaut
ಮಂಜುನಾಥ ಸಿ.
|

Updated on: Nov 18, 2026 | 1:07 PM

Share

ಮುಖ್ಯಾಂಶಗಳು

  • ಒಂದೇ ಕತೆ ಆದರೆ ಎರಡು ಸಿನಿಮಾ
  • ಒಂದೇ ಕತೆಯ ಎರಡು ಸಿನಿಮಾ ಒಂದೇ ದಿನ ರಿಲೀಸ್
  • ಯಾವುವು ಈ ಎರಡು ಸಿನಿಮಾಗಳು?

ಪ್ರತಿ ವಾರ ಹಲವು ಭಾಷೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಪ್ರತಿ ವಾರ ಬೇರೆ ಬೇರೆ ರೀತಿಯ ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಈ ವಾರ ಒಂದು ಅಪರೂಪದ ಘಟನೆ ನಡೆಯುತ್ತಿದೆ. ಈ ವಾರ ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಎರಡೂ ಸಿನಿಮಾಗಳ ಕತೆ ಒಂದೇ ಆಗಿದೆ. ಹೌದು, ಈ ವಾರ ನವೆಂಬರ್ 30ಕ್ಕೆ ತೆಲುಗಿನ ಎರಡು ಹೊಸ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಎರಡೂ ಸಿನಿಮಾಗಳ ಕತೆ ಒಂದೇ ಆಗಿದೆ. ಇದು ಸಣ್ಣ ಮಟ್ಟಿಗಿನ ವಿವಾದಕ್ಕೆ ಸಹ ಕಾರಣ ಆಗಿದೆ.

ಈ ವಾರ ಖ್ಯಾತ ನಟ ದುಲ್ಕರ್ ಸಲ್ಮಾನ್ ನಟನೆಯ ‘ಆಕಾಶಂ ಲೊ ಒಕ ತಾರಾ’ ರಿಲೀಸ್ ಆಗುತ್ತಿದೆ. ಅದೇ ದಿನ ‘ಡಿಯರ್ ಆಸ್ಟ್ರೊನಾಟ್’ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಎರಡೂ ಸಿನಿಮಾಗಳ ಕತೆ ಒಂದೇ ಆಗಿದೆ. ಸಿನಿಮಾನಲ್ಲಿ ಪತಿಯೊಬ್ಬ, ತನ್ನ ಪತ್ನಿಯ ಗಗನಯಾತ್ರಿ (ಆಸ್ಟ್ರೊನಾಟ್) ಆಗುವ ಕನಸನ್ನು ಈಡೇರಿಸುವ ಪ್ರಯತ್ನ ಮಾಡುವ ಕತೆಯನ್ನು ಒಳಗೊಂಡಿದೆ. ಎರಡೂ ಸಿನಿಮಾಗಳ ಟ್ರೈಲರ್ ರಿಲೀಸ್ ಆಗಿದ್ದು, ಎರಡೂ ಸಿನಿಮಾಗಳ ಕತೆ ಒಂದೇ ಆಗಿರುವುದನ್ನು ಟ್ರೈಲರ್ ಸಹ ಖಾತ್ರಿ ಪಡಿಸುತ್ತಿದೆ. ಎರಡೂ ಸಿನಿಮಾಗಳಲ್ಲಿ ಪತಿ, ತನ್ನ ಪತ್ನಿಯ ಗಗನಯಾತ್ರಿ ಆಗುವ ಕನಸಿಗೆ ಬೆಂಬಲವಾಗಿ ನಿಲ್ಲುತ್ತಾನೆ.

ದುಲ್ಕರ್ ಸಲ್ಮಾನ್ ನಟನೆ ಮಾಡಿರುವ ‘ಆಕಾಶಂಲೊ ಒಕ ತಾರಾ’ ಸಿನಿಮಾವನ್ನು ಪವನ್ ಸದಿನೇನಿ ನಿರ್ದೇಶನ ಮಾಡಿದ್ದಾರೆ. ‘ಡಿಯರ್ ಆಸ್ಟ್ರೊನಾಟ್’ ಸಿನಿಮಾವನ್ನು ಕಾರ್ತಿಕ್ ಭಾಗ್ಯರಾಜ್ ನಿರ್ದೇಶನ ಮಾಡಿದ್ದಾರೆ. ಲಭ್ಯವಿರು ಮಾಹಿತಿಗಳ ಪ್ರಕಾರ, ಕೆಲ ವರ್ಷಗಳ ಹಿಂದೆ ಕಾರ್ತಿಕ್ ಭಾಗ್ಯರಾಜ್ ಅವರು ಇದೇ ಕತೆ ಆಧರಿಸಿ ‘ಕೌಗಿಲಿ’ ಹೆಸರಿನ ಕಿರುಚಿತ್ರ ಮಾಡಿ, ಯೂಟ್ಯೂಬ್​​ನಲ್ಲಿ ಶೇರ್ ಮಾಡಿದ್ದರು. ಆ ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕಿತ್ತು. ಅದನ್ನು ಸಿನಿಮಾ ಮಾಡುವ ಆಸೆಯಿಂದ ಕಿರುಚಿತ್ರವನ್ನು ಯೂಟ್ಯೂಬ್​​ನಿಂದ ತೆಗೆದರು. ಬಳಿಕ ಅದೇ ಕತೆಯನ್ನು ಕೆಲವು ನಿರ್ಮಾಪಕರುಗಳಿಗೆ ಹೇಳಿದ್ದರು.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಹಾಡಿನಲ್ಲಿ ತಪ್ಪು ಹುಡುಕಿದ ಗೀತ ಸಾಹಿತಿ

ಈ ಮೊದಲೇ ಸಿನಿಮಾ ಮಾಡಲು ‘ಡಿಯರ್ ಆಸ್ಟ್ರೊನಾಟ್’ ನಿರ್ದೇಶಕ ಕಾರ್ತಿಕ್ ಯತ್ನಿಸಿದ್ದು, ನಟ ವರುಣ್ ಸಂದೇಶ್ ಮತ್ತು ವಿತಿಕಾ ಶೇರು ಅವರನ್ನು ಹಾಕಿಕೊಂಡು ಕೆಲ ಭಾಗದ ಚಿತ್ರೀಕರಣ ಸಹ ಮಾಡಿದರಂತೆ. ಟೀಸರ್ ಸಹ ರಿಲೀಸ್ ಮಾಡಿದ್ದರು. ಆದರೆ ಆ ಸಿನಿಮಾ ನಿಂತು ಹೋಯ್ತು. ಅದಾದ ಬಳಿಕ ಮತ್ತೆ ಹೊಸ ನಟ-ನಟಿಯರನ್ನು ಹಾಕಿಕೊಂಡು ಸಿನಿಮಾ ಮುಗಿಸಿದ್ದು, ಇದೀಗ ರಿಲೀಸ್ ಆಗುತ್ತಿದೆ. ಆದರೆ ಈಗ ಅದೇ ಕತೆಯನ್ನು ಇರಿಸಿಕೊಂಡು ಪವನ್ ಸದಿನೇನಿ ಸಹ ಸಿನಿಮಾ ಮಾಡಿದ್ದಾರೆ. ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಮತ್ತೊಂದು ವಿಶೇಷವೆಂದರೆ ಎರಡೂ ಸಿನಿಮಾಗಳಲ್ಲಿ ಖ್ಯಾತ ನಟ ಗೌತಮ್ ವಾಸುದೇವ್ ಮೆನನ್ ಮುಖ್ಯ ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಎರಡು ದಿನಗಳ ಫಿಲಿಪೈನ್ಸ್​ ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ಪ್ರಧಾನಿ ಮೋದಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
ಇಂದು ಈ ರಾಶಿಯವರು ಜೊತೆಗಿರುವವರಿಂದ ಏನನ್ನೂ ನಿರೀಕ್ಷಿಸದಿರಿ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
16 ಲಕ್ಷ ರೂಪಾಯಿ ಮೌಲ್ಯದ 753 ಗ್ರಾಂ ಚರಸ್ ಜಪ್ತಿ: ಆರೋಪಿಗಳ ಬಂಧನ
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು
ಮುಂದಿನ ಪ್ಲ್ಯಾನ್ ಬಗ್ಗೆ ಮಾತಾಡಿದ ‘ಪ್ರೇಮದ ಊರಲಿ’ ನಟಿ ರಮಿಕಾ ಶಿವು