ಕನ್ನಡ ಹಾಡು ಹಾಡಿಲ್ಲ ಎಂದು ಎಡ್​ ಶೀರನ್​ನ ತಡೆದ ಪೊಲೀಸರು? ಸಿಕ್ಕಿತು ಸ್ಪಷ್ಟನೆ  

ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಪ್ರಸಿದ್ಧ ಗಾಯಕ ಎಡ್ ಶೀರನ್ ಅವರ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಅನಿರೀಕ್ಷಿತವಾಗಿ ನಿಲ್ಲಿಸಿದ್ದಾರೆ. ಪ್ರದರ್ಶನಕ್ಕೆ ಅನುಮತಿ ಇಲ್ಲದ ಕಾರಣ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆದಿವೆ .

ಕನ್ನಡ ಹಾಡು ಹಾಡಿಲ್ಲ ಎಂದು ಎಡ್​ ಶೀರನ್​ನ ತಡೆದ ಪೊಲೀಸರು? ಸಿಕ್ಕಿತು ಸ್ಪಷ್ಟನೆ  
ಎಡ್ ಶೀರನ್

Updated on: Feb 10, 2025 | 1:00 PM

ಬೆಂಗಳೂರಿನ ಚರ್ಚ್​​ ಸ್ಟ್ರೀಟ್​ನಲ್ಲಿ ಖ್ಯಾತ ಇಂಗ್ಲಿಷ್ ಗಾಯಕ ಎಡ್ ಶೀರನ್ ಅವರು ಹಾಡುತ್ತಿರುವಾಗ ಪೊಲೀಸರು ಇದಕ್ಕೆ ಅಡ್ಡಿ ಉಂಟು ಮಾಡಿದ್ದರು. ಪ್ಲಗ್​ನ ಎಳೆಯುವ ಮೂಲಕ ಪರ್ಫಾರ್ಮೆನ್ಸ್​ ಅರ್ಧಕ್ಕೆ ನಿಲ್ಲುವಂತೆ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ‘ಕನ್ನಡದಲ್ಲಿ ಹಾಡಿಲ್ಲ ಎಂಬ ಕಾರಣಕ್ಕೆ ಎಡ್ ಶೀರನ್ ಹಾಡನ್ನು ನಿಲ್ಲಿಸಲಾಯಿತು’ ಎಂದು ಕೂಡ ಟ್ರೋಲ್ ಆಗಿತ್ತು. ಈ ಬಗ್ಗೆ ಎಡ್ ಶೀರನ್ ಸ್ಪಷ್ಟನೆ ನೀಡಿದ್ದಾರೆ.

‘ಚರ್ಚ್​ ಸ್ಟ್ರೀಟ್​ನಲ್ಲಿ ಪರ್ಫಾರ್ಮೆನ್ಸ್ ಮಾಡಲು ನಾನು ಒಪ್ಪಿಗೆ ಪಡೆದುಕೊಂಡಿದ್ದೆ’ ಎಂದು ಎಡ್​ ಶೀರನ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಾಕಷ್ಟು ಚರ್ಚೆ ಆಗಿತ್ತು. ಒಪ್ಪಿಗೆ ಇದ್ದ ಹೊರತಾಗಿಯೂ ಎಡ್​ ಶೀರನ್ ಹಾಡನ್ನು ನಲ್ಲಿಸಿದ್ದೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಇದಕ್ಕೆ ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಚರ್ಚ್​ ಸ್ಟ್ರೀಟ್​ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಅದರಲ್ಲೂ ಭಾನುವಾರ ಎಂದಾಗ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಮುಂದಾಗಬಹುದಾದ ತೊಂದರೆಗಳನ್ನು ತಡೆಯಲು ಎಡ್ ಶೀರನ್ ಪರ್ಫಾರ್ಮೆನ್ಸ್​ನ ತಡೆಯಲಾಯಿತು ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

‘ಚರ್ಚ್​​​ಸ್ಟ್ರೀಟ್​ನಲ್ಲಿ ಪರ್ಫಾರ್ಮೆನ್ಸ್ ಮಾಡಲು ಅವಕಾಶ ನೀಡಿ ಎಂದು ಈವೆಂಟ್ ಆರ್ಗನೈಸರ್ಸ್ ಆಗಮಿಸಿದ್ದರು. ಆದರೆ, ಚರ್ಚ್​ಸ್ಟ್ರೀಟ್ ಸದಾ ಜನಜಂಗುಳಿಯಿಂದ ಕೂಡಿರುತ್ತದೆ ಎಂಬ ಕಾರಣಕ್ಕೆ ನಾವು ಒಪ್ಪಿಗೆ ನೀಡಿಲ್ಲ. ಈ ಕಾರಣಕ್ಕೆ ನಾವು ಜಾಗವನ್ನು ತೊರೆಯುವಂತೆ ಹೇಳಿದೆವು’ ಎಂದು ಕೇಂದ್ರ ಬೆಂಗಳೂರು ಡಿಸಿಪಿ ಶೇಖರ್ ಟಿ ಟೆಕ್ಕಣ್ಣನವರ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ

ಸ್ಟ್ರೀಟ್ ಪರ್ಫಾರ್ಮೆನ್ಸ್​ನ ತಡೆದಿದ್ದಕ್ಕೆ ಎಡ್ ಶೀರನ್ ಬೇಸರಗೊಂಡಿದ್ದಾರೆ. ಇದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಈ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟಿಹಾಕಿತ್ತು. ಎಡ್ ಶೀರನ್ ಅವರು ಇಂಗ್ಲೆಂಡ್​ನವರು. ಅವರು ‘ಶೇಪ್ ಆಫ್ ಯು’ ಹಾಡನ್ನು ಹಾಡಿದ್ದಾರೆ. ಈ ಹಾಡು ಸೂಪರ್ ಹಿಟ್ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us