ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಮಾಡಿದ್ದರು ಅಪರೂಪದ ಪ್ರಯೋಗ: ಮಾಹಿತಿ ಇಲ್ಲಿದೆ

Updated on: Oct 04, 2026 | 6:04 PM

ಭಾರತ ಚಿತ್ರರಂಗದ ಲಿಜೆಂಡರಿ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ನಿಧನ ಹೊಂದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. 80-90ರ ದಶಕದ ಅತ್ಯಂತ ಪ್ರತಿಭಾವಂತ ನಿರ್ದೇಶಕರಾಗಿದ್ದರು ಸಿಂಗೀತಂ. ಹಲವಾರು ರೀತಿಯ ಪ್ರಯೋಗಗಳನ್ನು ಸಿಂಗೀತಂ ಶ್ರೀನಿವಾಸ್ ಮಾಡಿದ್ದರು. ಕನ್ನಡದಲ್ಲಿ ಹಲವು ಅದ್ಭುತ ಸಿನಿಮಾಗಳನ್ನು ಸಿಂಗೀತಂ ನೀಡಿದ್ದಾರೆ. (ಅವುಗಳ ಪಟ್ಟಿ ಇಲ್ಲಿದೆ). ಸಿಂಗೀತಂ ಅವರು ಮಾಡಿದ ಅದ್ಭುತ ಪ್ರಯೋಗಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ...

1 / 7
ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡ ‘ಪುಷ್ಪಕ ವಿಮಾನ’ ಹಲವು ಕಾರಣಗಳಿಗೆ ಒಂದು ಅದ್ಭುತ ಸಿನಿಮಾ. ಸಂಭಾಷಣೆಗಳೇ ಇಲ್ಲದೆ ಸಿಂಗೀತಂ ಶ್ರೀನಿವಾಸ್ ಅವರು ಅದ್ಭುತವಾಗಿ ಕತೆ ಹೇಳಿದ್ದಾರೆ ಈ ಸಿನಿಮಾನಲ್ಲಿ. ಸಂಭಾಷಣೆಗಳೇ ಸಿನಿಮಾಗಳಲ್ಲಿ ಪ್ರಮುಖವಾಗಿದ್ದ ಕಾಲದಲ್ಲಿ ಸಂಭಾಷಣೆಗಳಿಲ್ಲದೆ ಕತೆ ಹೇಳಿದ್ದರು ಸಿಂಗೀತಂ. ಈ ಸಿನಿಮಾ ಯೂಟ್ಯೂಬ್ ಮತ್ತು ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡ ‘ಪುಷ್ಪಕ ವಿಮಾನ’ ಹಲವು ಕಾರಣಗಳಿಗೆ ಒಂದು ಅದ್ಭುತ ಸಿನಿಮಾ. ಸಂಭಾಷಣೆಗಳೇ ಇಲ್ಲದೆ ಸಿಂಗೀತಂ ಶ್ರೀನಿವಾಸ್ ಅವರು ಅದ್ಭುತವಾಗಿ ಕತೆ ಹೇಳಿದ್ದಾರೆ ಈ ಸಿನಿಮಾನಲ್ಲಿ. ಸಂಭಾಷಣೆಗಳೇ ಸಿನಿಮಾಗಳಲ್ಲಿ ಪ್ರಮುಖವಾಗಿದ್ದ ಕಾಲದಲ್ಲಿ ಸಂಭಾಷಣೆಗಳಿಲ್ಲದೆ ಕತೆ ಹೇಳಿದ್ದರು ಸಿಂಗೀತಂ. ಈ ಸಿನಿಮಾ ಯೂಟ್ಯೂಬ್ ಮತ್ತು ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

2 / 7

‘ಅಪ್ಪು ರಾಜ’ ಅಥವಾ ‘ಅಪೂರ್ವ ಸೋದರಂಗಳ್’ ಸಿನಿಮಾನಲ್ಲಿ ಸಿಂಗೀತಂ ಅವರು ಮಾಡಿರುವ ಪ್ರಯೋಗಗಳ ಬಗ್ಗೆ ಒಂದು ಪುಸ್ತಕವೇ ಬರೆಯಬಹುದು. ಕಮಲ್ ಹಾಸನ್ ಅವರನ್ನು ವಿಎಫ್​​ಎಕ್ಸ್ ಇಲ್ಲದೆ, ಕೇವಲ ಕ್ಯಾಮೆರಾ ಮತ್ತು ಸೆಟ್​​ ಟ್ರಿಕ್ಸ್ ಬಳಸಿ ಕುಳ್ಳ ವ್ಯಕ್ತಿಯಾಗಿ ಅವರು ತೋರಿಸಿದ್ದಾರೆ. ಈ ಸಿನಿಮಾ ಯೂಟ್ಯೂಬ್​​ನಲ್ಲಿ ಲಭ್ಯವಿದೆ.

3 / 7

ತೆಲುಗಿನಲ್ಲಿ ಸಿಂಗೀತಂ ನಿರ್ದೇಶನ ಮಾಡಿದ ‘ಆದಿತ್ಯ 369’ ಸಿನಿಮಾ. ‘ಟೈಂ ಟ್ರಾವೆಲ್’ ವಿಷಯದ ಮೇಲೆ ಆಧರಿತವಾದ ಭಾರತದ ಮೊಟ್ಟ ಮೊದಲ ಸಿನಿಮಾ ಎನ್ನಲಾಗುತ್ತದೆ. 1991 ರಲ್ಲಿ ಬಿಡುಗಡೆ ಆದ ಈ ಸೈನ್ಸ್ ಫಿಕ್ಷನ್ ಕತೆಯಲ್ಲೂ ಸಹ ಸಿಂಗೀತಂ ಅವರು ಹಲವು ಹೊಸ ಪ್ರಯೋಗಗಳನ್ನು ಮಾಡಿದ್ದರು. ಈ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ.

4 / 7

ಕಮಲ್ ಹಾಸನ್ ನಟನೆ ಮಾಡಿರುವ ‘ಮೈಖಲ್ ಮದನ ಕಾಮ ರಾಜ’ ಹೆಸರಿನ ಸಿನಿಮಾನಲ್ಲಿಯೂ ಸಹ ಸಿಂಗೀತಂ ಶ್ರೀನಿವಾಸ್ ಅವರು ಹಲವಾರು ಭಿನ್ನ-ಭಿನ್ನ ಪ್ರಯೋಗಗಳನ್ನು ಮಾಡಿದ್ದರು. ಆ ಸಿನಿಮಾನಲ್ಲಿ ಕಮಲ್ ಹಾಸನ್ ನಾಲ್ಕು ಪಾತ್ರಗಳಲ್ಲಿ ನಟನೆ ಮಾಡಿದ್ದರು. ಈ ಸಿನಿಮಾ ಸಹ ಯೂಟ್ಯೂಬಿನಲ್ಲಿ ಲಭ್ಯವಿದೆ.

5 / 7

ಸಿಂಗೀತಂ ಶ್ರೀನಿವಾಸ್ ಅವರು ಅದ್ಭುತ ನಿರ್ದೇಶಕರು ಮಾತ್ರವೇ ಅಲ್ಲದೆ ಅದ್ಭುತವಾದ ಸಂಗೀತ ನಿರ್ದೇಶಕ ಸಹ. ಕನ್ನಡದಲ್ಲಿ ಅವರು ನಿರ್ದೇಶನ ಮಾಡಿದ ಸೂಪರ್ ಹಿಟ್ ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಸಂಯುಕ್ತ’ ಸಿನಿಮಾಗಳಿಗೆ ಅವರೇ ಸಂಗೀತ ನೀಡಿದ್ದರು. ಬೇರೆ ಕೆಲ ಸಿನಿಮಾಗಳಿಗೂ ಸಂಗೀತ ನೀಡಿದ್ದರು.

6 / 7

2013 ರಲ್ಲಿ ಸಿಂಗೀತಂ ಅವರು ‘ವೆಲ್​​ಕಮ್ ಒಬಾಮ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಅನ್ನು ಅವರು ಹಳೆಯ ಈಸ್ಟ್​​ಮನ್ ಕಲರ್ ತಂತ್ರಜ್ಞಾನ ಬಳಸಿ ಚಿತ್ರೀಕರಿಸಿದ್ದರು. ಸಿನಿಮಾದ ಎಲ್ಲ ಕಲಾವಿದರು ಮೇಕಪ್ ಇಲ್ಲದೇ ನಟಿಸಿದ್ದು ವಿಶೇಷ. ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಣೆಗೆ ಸಿಗುತ್ತದೆ.

7 / 7

ಸಿಂಗೀತಂ ಶ್ರೀನಿವಾಸ್ ಅವರು ತಮ್ಮ 94ನೇ ವಯಸ್ಸಿನಲ್ಲಿ ನಿರ್ದೇಶಿಸಿದ ‘ಸಿಂಗ್ ಗೀತಂ’ ಸಿನಿಮಾ ಇದೇ ವರ್ಷ ರಿಲೀಸ್ ಆಯ್ತು. ಆ ಸಿನಿಮಾನಲ್ಲಿ ಆರಂಭದಿಂದ ಅಂತ್ಯದ ವರೆಗೆ ಬರೀ ಹಾಡುಗಳಷ್ಟೆ ಇವೆ. ಸಂಭಾಷಣೆಗಳು ಸಹ ಹಾಡುಗಳೇ. ಈ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯ.

Published On - 6:02 pm, Sun, 4 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us