AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗಿನಲ್ಲಿ ಬರ್ತಿದೆ ಬಾಲಿವುಡ್ ಬ್ಲಾಕ್‌ಬಸ್ಟರ್ ‘ಹನುಮಾನ್ ಅಂಶ್; ಕನ್ನಡದಲ್ಲಿ ಯಾವಾಗ?

ಬಾಲಿವುಡ್‌ನಲ್ಲಿ 153 ಕೋಟಿ ರೂಪಾಯಿ ಗಳಿಸಿ ಸೂಪರ್ ಹಿಟ್ ಆಗಿರುವ 'ಹನುಮಾನ್ ಅಂಶ' ಸಿನಿಮಾ ಸೆಪ್ಟೆಂಬರ್ 18 ರಂದು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ಈ ಸಿನಿಮಾ ತೆಲುಗು ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

ತೆಲುಗಿನಲ್ಲಿ ಬರ್ತಿದೆ ಬಾಲಿವುಡ್ ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್; ಕನ್ನಡದಲ್ಲಿ ಯಾವಾಗ?
ಹನುಮಾನ್ ಅಂಶ್ Image Credit source: Hanumaan Ansh
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 12, 2026 | 8:56 AM

Share

ಮುಖ್ಯಾಂಶಗಳು

  • ಬಾಲಿವುಡ್‌ನಲ್ಲಿ 153 ಕೋಟಿ ಗಳಿಸಿದ ಸಿನಿಮಾ ಈಗ ತೆಲುಗಿಗೆ
  • ತ್ರಿವಿಕ್ರಮ್ ಶ್ರೀನಿವಾಸ್ ಸಾಥ್
  • 'ಹನುಮಾನ್ ಅಂಶ' ಬಿಡುಗಡೆ ದಿನಾಂಕ ಫಿಕ್ಸ್ 

ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಹನುಮಾನ್ ಅಂಶ್’ ಸಿನಿಮಾ ಈಗ ತೆಲುಗು ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದೆ. ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ಈ ಸಿನಿಮಾ ಭಾರೀ ಕಲೆಕ್ಷನ್ ಮಾಡುತ್ತಿದೆ. ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ಈ ಚಿತ್ರ ಈಗಾಗಲೇ ಭಾರತದಲ್ಲಿ ಬರೋಬ್ಬರಿ 153 ಕೋಟಿ ರೂಪಾಯಿ ಗಳಿಸಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ.

ಈ ಸೂಪರ್ ಹಿಟ್ ಸಿನಿಮಾ ಸೆಪ್ಟೆಂಬರ್ 18 ರಂದು ತೆಲುಗು ಭಾಷೆಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಟಾಲಿವುಡ್‌ನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಈ ಡಬ್ಬಿಂಗ್ ಆವೃತ್ತಿಯನ್ನು ಅರ್ಪಿಸುತ್ತಿದ್ದಾರೆ. ಅವರ ಧರ್ಮಪತ್ನಿ ಸಾಯಿ ಸೌಜನ್ಯ ಅವರ ಫಾರ್ಚೂನ್ ಫೋರ್ ಸಿನೆಮಾಸ್ ಸಂಸ್ಥೆಯು ಚಿತ್ರದ ವಿತರಣೆಯ ಹಕ್ಕನ್ನು ವಹಿಸಿಕೊಂಡಿದೆ.

ಈಗಾಗಲೇ ತೆಲುಗು ಪ್ರೇಕ್ಷಕರಲ್ಲಿ ಈ ಸಿನಿಮಾದ ಬಗ್ಗೆ ಭಾರೀ ಕುತೂಹಲ ಮತ್ತು ನಿರೀಕ್ಷೆಗಳು ಮೂಡಿವೆ. ತ್ರಿವಿಕ್ರಮ್ ಶ್ರೀನಿವಾಸ್ ಅವರ ಬೆಂಬಲ ಸಿಕ್ಕಿರುವುದರಿಂದ ತೆಲುಗು ಮಾರುಕಟ್ಟೆಯಲ್ಲಿ ಈ ಚಿತ್ರ ಮತ್ತಷ್ಟು ದೊಡ್ಡ ಮಟ್ಟದ ಯಶಸ್ಸು ಗಳಿಸುವ ಸಾಧ್ಯತೆಯಿದೆ. ತೆಲುಗಿನ ಸಿನಿಮಾ ಪ್ರಿಯರು ಈ ಭಕ್ತಿಪ್ರಧಾನ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಚಿತ್ರದಲ್ಲಿ ಶೋಭಿನವ್ ಮತ್ತು ಚಂದನ್ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ನಿಖಿಲ್ ದುಬೆ, ಉದಯಸಿಂಹ ರಜಪೂತ್ ಮತ್ತು ಪೂರ್ಣಿಮಾ ತಿವಾರಿ ನಟಿಸಿದ್ದಾರೆ. ವಿಶಾಲ್ ಚತುರ್ವೇದಿ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ. ತೆಲುಗಿನ ಜೊತೆಗೆ ಈ ಸಿನಿಮಾ ಕನ್ನಡದಲ್ಲೂ ಬರಬೇಕು ಎಂಬುದು ಕನ್ನಡ ಜನತೆಯ ಆಶಯವಾಗಿದೆ.

ಇದನ್ನೂ ಓದಿ: ‘ಹನುಮಾನ್ ಅಂಶ್’ ಸಿನಿಮಾದ ಅಭೂತಪೂರ್ವ ಯಶಸ್ಸಿಗೆ ಹೇಮಾ ಮಾಲಿನಿ ಸಂತಸ

ಸ್ವಯಂಭೂ ಮೀಡಿಯಾ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರಾಗಿಣಿ ಎಸ್, ನಮ್ರತಾ ಜಿ ಎಸ್, ವಿಶಾಲ್ ಚತುರ್ವೇದಿ ಹಾಗೂ ಅನುಪ್ರಿಯಾ ಎ ನಾಗರ್ ಅವರು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಬಾಲಿವುಡ್‌ನಲ್ಲಿ ಸೃಷ್ಟಿಸಿರುವ ಹವಾ ಈಗ ದಕ್ಷಿಣ ಭಾರತದಲ್ಲೂ ಮುಂದುವರಿಯುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:12 am, Sat, 12 September 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!