ಬಾಲಿವುಡ್ ಪಾರ್ಟಿಗಳೆಂದರೆ ಅಕ್ಷಯ್​ ಕುಮಾರ್​​ಗೆ ಅಲರ್ಜಿ? ಇದರ ಹಿಂದಿದೆ ಇಂಟರೆಸ್ಟಿಂಗ್​ ವಿಚಾರ

ಸಿನಿಮಾ ಯಶಸ್ವಿಯಾದ ಖುಷಿಗೆ, ಬರ್ತ್​ಡೇ, ಮದುವೆ ಹೀಗೆ ನಾನಾ ವಿಚಾರಗಳಿಗೆ ಚಿತ್ರರಂಗದಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತದೆ. ಅದರಲ್ಲಿಯೂ ಬಾಲಿವುಡ್​ನಲ್ಲಿ ಈ ಸಂಪ್ರದಾಯ ದೊಡ್ಡ ಮಟ್ಟದಲ್ಲಿ ನಡೆದುಕೊಂಡು ಬಂದಿದೆ.

ಬಾಲಿವುಡ್ ಪಾರ್ಟಿಗಳೆಂದರೆ ಅಕ್ಷಯ್​ ಕುಮಾರ್​​ಗೆ ಅಲರ್ಜಿ? ಇದರ ಹಿಂದಿದೆ ಇಂಟರೆಸ್ಟಿಂಗ್​ ವಿಚಾರ
ಅಕ್ಷಯ್​ ಕುಮಾರ್​

Updated on: Jun 21, 2021 | 8:36 PM

ಬಾಲಿವುಡ್​ನ ಅನೇಕ ನಟರು ತಮ್ಮದೇ ಆದ ನಿಯಮ ಹಾಕಿಕೊಂಡಿದ್ದಾರೆ. ಆ ನಿಯಮವನ್ನು ಅವರು ಎಂದಿಗೂ ಮೀರಿಲ್ಲ. ನಟ ಆಮೀರ್​ ಖಾನ್​ ಎಂದಿಗೂ ಅವಾರ್ಡ್​ ಫಂಕ್ಷನ್​ಗಳಿಗೆ ತೆರಳುವುದಿಲ್ಲ. ಅದೇ ರೀತಿ ಅಕ್ಷಯ್​ ಕುಮಾರ್​ ಬಾಲಿವುಡ್​ ಪಾರ್ಟಿಗಳಿಗೆ ತೆರಳುವುದಿಲ್ಲವಂತೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಸಿನಿಮಾ ಯಶಸ್ವಿಯಾದ ಖುಷಿಗೆ, ಬರ್ತ್​ಡೇ, ಮದುವೆ ಹೀಗೆ ನಾನಾ ವಿಚಾರಗಳಿಗೆ ಚಿತ್ರರಂಗದಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತದೆ. ಅದರಲ್ಲಿಯೂ ಬಾಲಿವುಡ್​ನಲ್ಲಿ ಈ ಸಂಪ್ರದಾಯ ದೊಡ್ಡ ಮಟ್ಟದಲ್ಲಿ ನಡೆದುಕೊಂಡು ಬಂದಿದೆ. ಬಾಲಿವುಡ್​ನ ದೊಡ್ಡ ನಿರ್ಮಾಪಕರಾದ ಕರಣ್​ ಜೋಹರ್​ ಸೇರಿ ಸಾಕಷ್ಟು ಜನರು ಸಣ್ಣ ಸಣ್ಣ ವಿಚಾರಕ್ಕೂ ದೊಡ್ಡ ದೊಡ್ಡ ಫಂಕ್ಷನ್​ ಆಯೋಜನೆ ಮಾಡುತ್ತಾರೆ. ಇದಕ್ಕೆ ಅಕ್ಷಯ್​ಗೂ ಆಹ್ವಾನ ಇರುತ್ತದೆ. ಆದರೆ, ಅವರು ಹೋಗುವುದಿಲ್ಲವಂತೆ. ಈ ಬಗ್ಗೆ ಕಪಿಲ್​ ಶರ್ಮಾ ಶೋನಲ್ಲಿ ಅಕ್ಷಯ್​ ಈ ವಿಚಾರ ಬಾಯ್ಬಿಟ್ಟಿದ್ದಾರೆ.

‘ಅಕ್ಷಯ್​ ನೀವು ಬಾಲಿವುಡ್​ ಪಾರ್ಟಿಗಳಿಗೆ ತೆರಳುವುದಿಲ್ಲವಂತೆ. ನೀವು ಮರಳಿ ಪಾರ್ಟಿ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡುತ್ತೀರಂತೆ ಹೌದೇ?’ ಎಂದು ಕಪಿಲ್​ ಶರ್ಮಾ ಪ್ರಶ್ನೆ ಮಾಡಿದ್ದರು. ಇದಕ್ಕೆ ಹೌದು ಎನ್ನುವ ಉತ್ತರ ಅಕ್ಷಯ್​ ಕುಮಾರ್​ ಅವರಿಂದ ಬಂತು. ಅಕ್ಷಯ್​ ಮದ್ಯ ಸೇವನೆ ಮಾಡುವುದಿಲ್ಲ. ಸಿಗರೇಟ್​ ಸೇದುವುದಿಲ್ಲ. ಹೀಗಾಗಿ, ಇಂಥ ಪಾರ್ಟಿ ಆಯೋಜನೆ ಮಾಡುವುದು ಮತ್ತು ಅದಕ್ಕೆ ಹೋಗೋದು ಎರಡೂ ಇಷ್ಟವಾಗುವುದಿಲ್ಲ. ಈ ಬಗ್ಗೆ ಕರಣ್​ ಜೋಹರ್​ ಬಳಿಯೂ ಅವರು ಈ ಬಗ್ಗೆ ಮಾತನಾಡಿದ್ದರು.

YouTube video player

ಅಕ್ಷಯ್​ ಕುಮಾರ್​ ಅವರು ಪೃಥ್ವಿರಾಜ್ ಚೌಹಾಣ್​​ ಅವರ ಜೀವನ ಆಧರಿಸಿ ಯಶ್​ ರಾಜ್​ ಫಿಲ್ಮ್ಸ್ ನಿರ್ಮಿಸುತ್ತಿರುವ ‘ಪೃಥ್ವಿರಾಜ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಪೃಥ್ವಿರಾಜ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಟೈಟಲ್​ ಬದಲಿಸುವಂತೆ ಕರಣಿ ಸೇನಾದವರು ಪಟ್ಟು ಹಿಡಿದಿದ್ದಾರೆ. ಅವರ ನಟನೆಯ, ‘ಸೂರ್ಯವಂಶಿ’ ಹಾಗೂ ‘ಬೆಲ್​ ಬಾಟಮ್​’ ಸಿನಿಮಾ ತೆರೆಗೆ ಬರೋಕೆ ಸಿದ್ಧವಾಗಿದೆ. ರಕ್ಷಾ ಬಂಧನ್​ ಸಿನಿಮಾದ ಶೂಟಿಂಗ್​ ಇಂದಿನಿಂದ ಆರಂಭವಾಗಿದೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us