AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವೇಂಜರ್ಸ್ ಅಸೆಂಬಲ್’ ಮತ್ತೆ ಬರ್ತಿದೆ ‘ಅವೇಂಜರ್ಸ್: ಎಂಡ್​​ಗೇಮ್’

Avengers Endgame movie: ‘ಅವೇಂಜರ್ಸ್’ ಸರಣಿಯ ನಾಲ್ಕು ಸಿನಿಮಾ ಬಿಡುಗಡೆ ಆಗಿವೆ. ಈ ವರೆಗೆ ಬಿಡುಗಡೆ ಆಗಿರುವ ನಾಲ್ಕು ಸಿನಿಮಾಗಳಲ್ಲಿ ‘ಅವೇಂಜರ್ಸ್: ದಿ ಎಂಡ್​​ಗೇಮ್’ ಭಾರಿ ದೊಡ್ಡ ಹಿಟ್ ಆಗಿರುವ ಸಿನಿಮಾ ಹಾಗೂ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಸಿನಿಮಾ ಆಗಿದೆ. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಅದೂ ಕೆಲವು ಬದಲಾವಣೆಗಳು ಹಾಗೂ ಕೆಲ ಹೆಚ್ಚುವರಿ ದೃಶ್ಯಗಳ ಜೊತೆಗೆ.

‘ಅವೇಂಜರ್ಸ್ ಅಸೆಂಬಲ್’ ಮತ್ತೆ ಬರ್ತಿದೆ ‘ಅವೇಂಜರ್ಸ್: ಎಂಡ್​​ಗೇಮ್’
Avengers Endgame
ಮಂಜುನಾಥ ಸಿ.
|

Updated on: Aug 26, 2026 | 7:07 PM

Share

‘ಅವೇಂಜರ್ಸ್’ (Avengers) ವಿಶ್ವದಾದ್ಯಂತ ಅತಿ ಹೆಚ್ಚು ಜನ ನೋಡುವ ಸಿನಿಮಾ ಸರಣಿಗಳಲ್ಲಿ ಪ್ರಮುಖವಾದುದು. ಈ ವರೆಗೆ ‘ಅವೇಂಜರ್ಸ್’ ಸರಣಿಯ ನಾಲ್ಕು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿದ್ದು, ಐದನೇ ಸಿನಿಮಾ ಇದೇ ವರ್ಷ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಈ ವರೆಗೆ ಬಿಡುಗಡೆ ಆಗಿರುವ ನಾಲ್ಕು ಸಿನಿಮಾಗಳಲ್ಲಿ ‘ಅವೇಂಜರ್ಸ್: ದಿ ಎಂಡ್​​ಗೇಮ್’ ಭಾರಿ ದೊಡ್ಡ ಹಿಟ್ ಆಗಿರುವ ಸಿನಿಮಾ ಹಾಗೂ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಸಿನಿಮಾ ಆಗಿದೆ. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಅದೂ ಕೆಲವು ಬದಲಾವಣೆಗಳು ಹಾಗೂ ಕೆಲ ಹೆಚ್ಚುವರಿ ದೃಶ್ಯಗಳ ಜೊತೆಗೆ.

ಮಾರ್ವೆಲ್ ಸ್ಟುಡಿಯೋಸ್ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾ ಅನ್ನು ‘ಅವೇಂಜರ್ಸ್: ಎಂಡ್​​ಗೇಮ್: ಎನ್​​ಕೋರ್’ ಎಂಬ ಹೊಸ ಶೀರ್ಷಿಕೆಯೊಂದಿಗೆ ಮತ್ತೆ ಚಿತ್ರಮಂದಿರಗಳಿಗೆ ತರುತ್ತಿದೆ. ಸೆಪ್ಟೆಂಬರ್ 25 ರಂದು ಈ ಚಿತ್ರವು ಮರುಬಿಡುಗಡೆಯಾಗಲು ಸಜ್ಜಾಗಿದೆ. ಇದೇ ಹಿನ್ನೆಲೆಯಲ್ಲಿ ಮಾರ್ವೆಲ್ ಸ್ಟುಡಿಯೋ ಹೊಸ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ.

ಹೊಸದಾಗಿ ಬಿಡುಗಡೆಯಾಗಿರುವ 1.36 ನಿಮಿಷಗಳ ಟ್ರೈಲರ್​​ನಲ್ಲಿ, ‘ಅವೇಂಜರ್ಸ್’ ಸಿನಿಮಾದ ನವೀಕರಿಸಿದ ಕಲರ್ ಗ್ರೇಡಿಂಗ್ ಮತ್ತು ಸಂಭಾಷಣೆಗಳಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ತೋರಿಸಲಾಗಿದೆ. ಜೊತೆಗೆ ಚಿತ್ರದ ಅತ್ಯಾಕರ್ಷಕ ಕ್ಲೈಮ್ಯಾಕ್ಸ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದ ನೈಜ ದೃಶ್ಯಗಳನ್ನು ಸಹ ಒಳಗೊಂಡಿದೆ. ಐಮ್ಯಾಕ್ಸ್ ಮತ್ತು ಇನ್ಫಿನಿಟಿ ವಿಷನ್ ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಈ ಚಿತ್ರವು ತೆರೆಕಾಣಲಿದ್ದು, ಮುಂಗಡ ಟಿಕೆಟ್ ಬುಕಿಂಗ್ ಈಗಾಗಲೇ ಲಭ್ಯವಿದೆ. ಈ ‘ಎನ್ಕೋರ್’ ಆವೃತ್ತಿಯು ಡಿಸೆಂಬರ್ 18 ರಂದು ಬಿಡುಗಡೆಯಾಗಲಿರುವ ‘Avengers: Doomsday’ ಚಿತ್ರದ ವಿಶೇಷ ಮುನ್ನೋಟವನ್ನೂ ಒಳಗೊಂಡಿರಲಿದ್ದು, ಇದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಉಂಟಾಗುವಂತೆ ಮಾಡಿದೆ.

ಇದನ್ನೂ ಓದಿ:‘ಅವೇಂಜರ್ಸ್ ಡೂಮ್​​ಸ್ಡೇ’: ಒಬ್ಬನ ಎದುರಿಸಲು ಒಗ್ಗೂಡಿದ ಎಲ್ಲ ಸೂಪರ್​​ ಹೀರೋಗಳು

‘ಅವೇಂಜರ್ಸ್’ ಸರಣಿಯ ಐದನೇ ಸಿನಿಮಾ ‘ಅವೇಂಜರ್ಸ್: ಡೂಮ್ಸ್​ಡೇ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಸಿನಿಮಾ ಇದೇ ವರ್ಷ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಮಾರ್ವೆಲ್​​ನ ಐಕಾನಿಕ್ ಪಾತ್ರವಾದ ‘ಐರನ್ ಮ್ಯಾನ್’ನಲ್ಲಿ ನಾಯಕನಾಗಿ ನಟಿಸುತ್ತಿದ್ದ ರಾಬರ್ಟ್ ಡೌನಿ ಜೂನಿಯರ್, ‘ಡೂಮ್ಸ್​​ಡೇ’ ಸಿನಿಮಾನಲ್ಲಿ ಸೂಪರ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅವೇಂಜರ್ಸ್’ ಮಾತ್ರವೇ ಅಲ್ಲದೆ, ಹಾಲಿವುಡ್​​ ಇತಿಹಾಸದಲ್ಲಿಯೇ ಅತಿ ದೊಡ್ಡ ಸ್ಟಾರ್ ಕಾಸ್ಟ್ ಉಳ್ಳ, ಅತಿ ದೊಡ್ಡ ಬಜೆಟ್​​ನ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್​​ನ ಎಲ್ಲ ಸೂಪರ್ ಹೀರೋಗಳು ಒಟ್ಟಿಗೆ ಒಂದೆಡೆ ಸೇರಿಕೊಂಡಿರುವುದು ವಿಶೇಷ. ಆ ಸಿನಿಮಾದ ಪ್ರಚಾರಕ್ಕಾಗಿಯೇ ಇದೀಗ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್