ಭಾರತ ಸಿನಿಮಾ ಮಾರುಕಟ್ಟೆಯ ಆಳ ಮತ್ತು ವಿಸ್ತಾರ ವಿದೇಶಿ ಸಿನಿಮಾಗಳನ್ನು ಸೆಳೆಯುತ್ತಿವೆ. ಕೆಲವು ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ನೂರಾರು ಕೋಟಿ ಹಣ ಗಳಿಸಿದ್ದೂ ಸಹ ಇದೆ. ಭಾರತದ ಮಾರುಕಟ್ಟೆಯ ಶಕ್ತಿ ಅರಿತಿರುವ ವಿದೇಶಿ ಸಿನಿಮಾ ನಿರ್ಮಾಣ ಸಂಸ್ಥೆಗಳು ಇದೀಗ ತಮ್ಮ ಸಿನಿಮಾಗಳನ್ನು ಭಾರತದಲ್ಲಿ ಭರ್ಜರಿ ಪ್ರಚಾರ ಮತ್ತು ಅದ್ಧೂರಿ ಬಿಡುಗಡೆಗೆ ಮುಂದಾಗಿವೆ. ಇದೀಗ ಮಾರ್ವೆಲ್ನ ‘ಡೆಡ್ಪೂಲ್ ಆಂಡ್ ವೋಲ್ವವರಿನ್’ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿದ್ದು, ಇತ್ತೀಚೆಗಿನ ಕೆಲವು ಬಾಲಿವುಡ್ ಸಿನಿಮಾಗಳೇ ಮಾಡದಷ್ಟೆ ಕಲೆಕ್ಷನ್ ಮಾಡುತ್ತಿದೆ.
‘ಡೆಡ್ಪೂಲ್ ಆಂಡ್ ವೋಲ್ವರಿನ್’ ಸಿನಿಮಾ ಜುಲೈ 26 ಕ್ಕೆ ಭಾರತದಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ 21 ಕೋಟಿ ಹಣ ಗಳಿಸಿದ ಈ ಸಿನಿಮಾ ಎರಡನೇ ದಿನ ಅಂದರೆ ಶನಿವಾರದಂದು ಈ ಸಿನಿಮಾ ತುಸುವಷ್ಟೆ ಕಲೆಕ್ಷನ್ ಹೆಚ್ಚಿಸಿಕೊಂಡು 23 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಅಲ್ಲಿಗೆ ಸಿನಿಮಾದ ಒಟ್ಟು ಕಲೆಕ್ಷನ್ 44 ಕೋಟಿ ರೂಪಾಯಿಗಳಾಗಿದೆ. ಭಾನುವಾರದಂದು ಕಲೆಕ್ಷನ್ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದ್ದು, ಭಾನುವಾರ ಒಂದೇ ದಿನ ಸುಮಾರು 30 ರಿಂದ 35 ಕೋಟಿಯೂ ಹೆಚ್ಚು ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ.
ಇದನ್ನೂ ಓದಿ:ಕನ್ನಡದಲ್ಲಿಲ್ಲ ‘ಡೆಡ್ಪೂಲ್ v/s ವೋಲ್ವೊರಿನ್’ ಪ್ರದರ್ಶಕರ ಆಕ್ರೋಶ
‘ಡೆಡ್ಪೂಲ್ ಮತ್ತು ವೋಲ್ವರಿನ್’ ಸಿನಿಮಾ ಭಾರತದಲ್ಲಿ ಮೊದಲ ವಾರವೇ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ವಿದೇಶಿ ಸಿನಿಮಾಗಳು ಭಾರತದಲ್ಲಿ ನೂರು ಕೋಟಿ ಗಳಿಸಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಹಲವು ಸಿನಿಮಾಗಳು ಭಾರತದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳ ಕಲೆಕ್ಷನ್ ಮಾಡಿದೆ. ‘ಸ್ಪೈಡರ್ ಮ್ಯಾನ್: ಫಾರ್ ಫರ್ ಹೋಮ್’, ‘ಅವೇಂಜರ್ಸ್: ಎಂಡ್ ಗೇಮ್’ ಇನ್ನೂ ಹಲವು ಸಿನಿಮಾಗಳು ಭಾರತದಲ್ಲಿ ದೊಡ್ಡ ಸಂಖ್ಯೆಯ ಕಲೆಕ್ಷನ್ ಮಾಡಿವೆ. ಇದೀಗ ಅದೇ ಪಟ್ಟಿಗೆ ‘ಡೆಡ್ಪೂಲ್ ಮತ್ತು ವೋಲ್ವರಿನ್’ ಸಿನಿಮಾ ಸೇರಲು ಮುಂದಾಗಿದೆ.
‘ಡೆಡ್ಪೂಲ್ ಆಂಡ್ ವೋಲ್ವೊರಿನ್’ ಸಿನಿಮಾ ಮೊದಲ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ ಮೂರು ಸಾವಿರ ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ. ಈ ಸಿನಿಮಾ ಸುಮಾರು 10 ಸಾವಿರ ಕೋಟಿಗೂ ಹೆಚ್ಚು ಹಣ ಗಳಿಸುವ ವಿಶ್ವಾಸವನ್ನು ಬಾಕ್ಸ್ ಆಫೀಸ್ ವಿಮರ್ಶಕರು ಅಂದಾಜು ಮಾಡಿದ್ದಾರೆ. ಡೆಡ್ಪೂಲ್ ಮತ್ತು ವೋಲ್ವೊರಿನ್ ಎರಡು ಬೇರೆ-ಬೇರೆ ಯೂನಿವರ್ಸ್ನ ಪಾತ್ರಗಳು ಆದರೆ ಮಾರ್ವೆಲ್ ಅವರೆಡನ್ನೂ ಒಂದೇ ಕತೆಗೆ ತಂದು ಸಿನಿಮಾ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ