AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲಿಲ್ಲ ‘ಡೆಡ್​ಪೂಲ್ v/s ವೋಲ್ವೊರಿನ್’ ಪ್ರದರ್ಶಕರ ಆಕ್ರೋಶ

‘ಡೆಡ್​ಪೂಲ್ v/s ವೋಲ್ವರಿನ್’ ಸಿನಿಮಾ ಕನ್ನಡದ ಹೊರತಾಗಿ ಭಾರತದ ಇತರೆ ಭಾಷೆಗಳಲ್ಲಿ ಡಬ್ ಆಗುತ್ತಿದೆ. ಕರ್ನಾಟಕದಲ್ಲಿ ಕನ್ನಡದ ಹೊರತಾಗಿ ಬೇರೆ ಭಾಷೆಯ ಡಬ್ ಆವೃತ್ತಿಗಳು ಬಿಡುಗಡೆ ಆಗಲಿವೆ. ಇದನ್ನು ಖಂಡಿಸಿ ಚಿತ್ರ ಪ್ರದರ್ಶಕರ ಸಂಘ ಪತ್ರ ಬರೆದಿದೆ.

ಕನ್ನಡದಲ್ಲಿಲ್ಲ ‘ಡೆಡ್​ಪೂಲ್ v/s ವೋಲ್ವೊರಿನ್’ ಪ್ರದರ್ಶಕರ ಆಕ್ರೋಶ
ಮಂಜುನಾಥ ಸಿ.
|

Updated on:Jul 06, 2024 | 6:04 PM

Share

ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗದಂತೆ ಕನ್ನಡ ಚಿತ್ರರಂಗ ದಶಕಗಳ ಕಾಲ ತಡೆದಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ನ್ಯಾಯಾಲಯದ ಆದೇಶದಿಂದಾಗಿ ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗುತ್ತಿವೆ. ಕೆಲವು ಸಿನಿಮಾಗಳು ಒಳ್ಳೆಯ ಪ್ರದರ್ಶನವನ್ನೂ ಕಾಣುತ್ತಿವೆ. ಆದರೂ ಸಹ ಕೆಲ ನಿರ್ಮಾಣ ಸಂಸ್ಥೆಗಳು ಕನ್ನಡದಲ್ಲಿ ಸಿನಿಮಾಗಳನ್ನು ಡಬ್ಬಿಂಗ್ ಮಾಡದೇ ಮೂಲ ಭಾಷೆಯಲ್ಲಿಯೇ ಬಿಡುಗಡೆ ಮಾಡುತ್ತಿವೆ. ಅಥವಾ ಬೇರೆ ಭಾಷೆಯ ಡಬ್ಬಿಂಗ್ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹೀಗಾದಾಗೆಲ್ಲ ಕನ್ನಡಿಗರು ಪ್ರತಿಭಟಿಸಿದ್ದಾರೆ. ಇದೀಗ ಮತ್ತೊಮ್ಮೆ ಇದೇ ರೀತಿಯ ಸನ್ನಿವೇಶ ಎದುರಾಗಿದ್ದು ಚಿತ್ರ ಪ್ರದರ್ಶಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಾಲಿವುಡ್​ನ ‘ಡೆಡ್​ಪೂಲ್ v/s ವೋಲ್ವರಿನ್’ ಸಿನಿಮಾ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾ ಜುಲೈ 26 ರಂದು ಭಾರತದಲ್ಲಿ ಸಹ ಬಿಡುಗಡೆ ಆಗಲಿದ್ದು, ಭಾರತದ ಕೆಲವು ಮುಖ್ಯ ಭಾಷೆಗಳಿಗೆ ಡಬ್ ಆಗಿ ಸಿನಿಮಾ ಬಿಡುಗಡೆ ಆಗಲಿದೆ. ‘ಡೆಡ್​ಪೂಲ್ v/s ವೋಲ್ವರಿನ್’ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಆಗಿದ್ದು, ಕನ್ನಡದಲ್ಲಿ ಡಬ್ ಆಗಿಲ್ಲ. ಅಲ್ಲದೆ ಬೆಂಗಳೂರಿನಲ್ಲಿ ಬೇರೆ ಭಾಷೆಗೆ ಡಬ್ ಆಗಿರುವ ಆವೃತ್ತಿ ಬಿಡುಗಡೆ ಆಗಲಿದೆ. ಇದನ್ನು ವಿರೋಧಿಸಿ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ಡಿಸ್ನಿ ಪಿಕ್ಚರ್ಸ್ ಇಂಡಿಯಾಕ್ಕೆ ಪತ್ರ ಬರೆದಿದ್ದಾರೆ.

‘ಕರ್ನಾಟದಲ್ಲಿ ಕನ್ನಡ ಡಬ್ ಸಿನಿಮಾಗಳಿಗೆ ಬಹಳ ಬೇಡಿಕೆ ಇದೆ. ಅಲ್ಲದೆ ಇಲ್ಲಿ ಹಾಲಿವುಡ್ ಸಿನಿಮಾಗಳಿಗೆ ವೀಕ್ಷಕ ವರ್ಗವೂ ದೊಡ್ಡದಿದೆ. ಈ ಹಿಂದೆ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’, ‘ಅವೇಂಜರ್ಸ್ ಎಂಡ್​ಗೇಮ್’, ಇನ್ನಿತರೆ ಸಿನಿಮಾಗಳು ನೂರಾರು ಕೋಟಿ ಗಳಿಕೆ ಮಾಡಿವೆ. ಅಂತೆಯೇ ‘ಡೆಡ್​ಪೂಲ್ v/s ವೋಲ್ವರಿನ್’ ಸಿನಿಮಾದ ಬಗ್ಗೆಯೂ ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕಾತರತೆ ಇಲ್ಲಿನ ಪ್ರೇಕ್ಷಕರಿಗೆ ಇದೆ. ಆದರೆ ಸಿನಿಮಾವನ್ನು ಭಾರತದಲ್ಲಿ ವಿತರಣೆ ಮಾಡುತ್ತಿರುವವರು ಕನ್ನಡದಲ್ಲಿ ಸಿನಿಮಾವನ್ನು ಡಬ್ಬಿಂಗ್ ಮಾಡದೆ ಬಿಡುಗಡೆ ಮಾಡುತ್ತಿರುವುದು ಕನ್ನಡಿಗರಿಗೆ ಬೇಸರ ತಂದಿದೆ’ ಎಂದಿದ್ದಾರೆ.

ಇದನ್ನೂ ಓದಿ:ರಿಲೀಸ್​ಗೂ ಮೊದಲೇ ಮಾರಾಟ ಆಯ್ತು ‘ಫಾರ್ ರಿಜಿಸ್ಟ್ರೇಷನ್’ ಡಬ್ಬಿಂಗ್ ಹಕ್ಕು

‘ಡೆಡ್​ಪೂಲ್ v/s ವೋಲ್ವರಿನ್’ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವುದು ಕನ್ನಡಿಗರಿಗೆ ನೀಡುವ ಗೌರವ ಮತ್ತು ಕನ್ನಡವನ್ನು ಒಳಗೊಳ್ಳುವಿಕೆಯನ್ನು ತೋರಿಸುತ್ತದೆ. ಅಲ್ಲದೆ ಸಿನಿಮಾದ ಮಾರುಕಟ್ಟೆಯ ದೃಷ್ಟಿಯಿಂದಲೂ ಸಹ ಇದು ಒಳ್ಳೆಯ ನಡೆಯಲಾಗಲಿದೆ. ಕರ್ನಾಟಕದ ಸಿನಿಮಾ ಪ್ರೇಕ್ಷಕನಿಗೆ ಮಾರ್ವೆಲ್ ಸ್ಟುಡಿಯೋ ಜೊತೆಗೆ ಇರುವ ಉತ್ತಮ ಬಾಂಧವ್ಯವನ್ನು ಮುಂದುವರೆಸಲು ಹೆಜ್ಜೆ ಇಟ್ಟಂತಾಗುತ್ತದೆ. ನಮ್ಮ ಈ ಮನವಿಯನ್ನು ಗೌರವದಿಂದ ಪರಿಗಣಿಸುತ್ತೀರಿ ಎಂದು ನಂಬಿದ್ದೇವೆ’ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ಪತ್ರದಲ್ಲಿ ಹೇಳಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sat, 6 July 24

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?