‘ಕರಾವಳಿ’ ಸಿನಿಮಾದಿಂದ ದರ್ಶನ್ ಹೊರಕ್ಕೆ? ದರ್ಶನ್ ಬದಲು ಮತ್ಯಾರು?
ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಬೇಕಿತ್ತು ಆದರೆ ಈಗ ಆ ಪಾತ್ರವನ್ನು ತೆಗೆದು ಹಾಕಿದ್ದಾರೆ ಎನ್ನಲಾಗುತ್ತಿದೆ. ಬೇರೊಬ್ಬ ಸ್ಟಾರ್ ನಟ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯೂ ಇದೆ.
ನಟ ದರ್ಶನ್ ತಮ್ಮ ಸಿನಿಮಾಗಳಲ್ಲಿ ನಟಿಸುವುದು ಮಾತ್ರವೇ ಅಲ್ಲದೆ, ತಮ್ಮ ಗೆಳೆಯರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಸೇರಿದಂತೆ ಕೆಲವು ನಟರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಿದೆ. ದರ್ಶನ್ ರ ಅತಿಥಿ ಪಾತ್ರದಿಂದ ಸಿನಿಮಾಗಳಿಗೆ ಸಾಕಷ್ಟು ಸಹಾಯವಾಗಿದ್ದೂ ಸಹ ಇದೆ. ತಮ್ಮ ಹಲವು ಗೆಳೆಯರ ಸಿನಿಮಾಗಳಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾದಲ್ಲಿಯೂ ಈ ಹಿಂದೆ ದರ್ಶನ್ ನಟಿಸಿದ್ದರು. ಈಗ ಪ್ರಜ್ವಲ್ ನಟನೆಯ ‘ಕರಾವಳಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿಯೂ ದರ್ಶನ್ ನಟಿಸಲಿದ್ದರು ಎನ್ನಲಾಗುತ್ತಿದೆ.
ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಚಿತ್ರೀಕರಣದ ಹಂತದಲ್ಲಿಯೇ ಸಖತ್ ಸದ್ದು ಮಾಡುತ್ತಿದೆ. ಭಿನ್ನವಾದ ಪೋಸ್ಟರ್ಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಇದು ಪ್ರಜ್ವಲ್ ವೃತ್ತಿ ಜೀವನದ ಸಖತ್ ಭಿನ್ನವಾದ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಬಗ್ಗೆ ಪ್ರಜ್ವಲ್ಗೆ ಭಾರಿ ನಿರೀಕ್ಷೆ ಇದ್ದು, ಸಿನಿಮಾದ ಅತಿಥಿ ಪಾತ್ರದಲ್ಲಿ ದರ್ಶನ್ ತೂಗುದೀಪ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ದರ್ಶನ್ ಈಗ ಜೈಲು ಪಾಲಾಗಿರುವ ಕಾರಣ ದರ್ಶನ್ ಬದಲಿಗೆ ಬೇರೊಬ್ಬ ಸ್ಟಾರ್ ನಟ ಈ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
‘ಕರಾವಳಿ’ ಸಿನಿಮಾವನ್ನು ಸುದೀಪ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಗುರುದತ್ ಗಾಣಿಗ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ತಮ್ಮ ಗುರು ಸುದೀಪ್ರನ್ನೇ ‘ಕರಾವಳಿ’ ಸಿನಿಮಾದ ಅತಿಥಿ ಪಾತ್ರಕ್ಕೆ ಕರೆತರುತ್ತಾರಾ ಎಂಬ ಅನುಮಾನವೂ ವ್ಯಕ್ತವಾಗಿದೆ. ಗುರುದತ್ ಗಾಣಿಗ ಈ ಹಿಂದೆ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ಅಂಬರೀಶ್ ಒಟ್ಟಿಗೆ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು.
ಇದನ್ನೂ ಓದಿ:ಉತ್ತರ ಕನ್ನಡ, ಕರಾವಳಿ ಕರ್ನಾಟಕದಲ್ಲಿ ಮಳೆ ಅಬ್ಬರ: ಮಲೆನಾಡು, ಕರಾವಳಿಯಲ್ಲಿ 3 ಸಾವು
ಪ್ರಜ್ವಲ್ ದೇವರಾಜ್ ನಟಿಸಿದ್ದ ‘ಇನ್ಸ್ಪೆಕ್ಟರ್ ವಿಕ್ರಂ’ ಸಿನಿಮಾನಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅದಕ್ಕೂ ಹಿಂದೆ ಬಹುತಾರಾಗಣದ ‘ಚೌಕ’ ಸಿನಿಮಾನಲ್ಲಿಯೂ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಸಹ ನಟಿಸಿದ್ದರು. ಈಗ ಮೂರನೇ ಬಾರಿ ‘ಕರಾವಳಿ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದರು. ಆದರೆ ದರ್ಶನ್ ಜೈಲಿನಲ್ಲಿರುವ ಕಾರಣ ಅವರು ಹೊರಗೆ ಬರುವವರೆಗೆ ಚಿತ್ರತಂಡಕ್ಕೆ ಕಾಯಲು ಸಾಧ್ಯವಿಲ್ಲವಾದ್ದರಿಂದ ಬೇರೊಬ್ಬ ಸ್ಟಾರ್ ನಟನಿಂದ ಪಾತ್ರ ಮಾಡಿಸುತ್ತಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ