‘ಸ್ಪೈಡರ್ ಮ್ಯಾನ್’ ಹೊಸ ಚಿತ್ರಕ್ಕೆ ಸೆನ್ಸಾರ್ ಕತ್ತರಿ: 8 ಸೆಕೆಂಡ್‌ಗಳ ಚುಂಬನದ ದೃಶ್ಯ ಕಟ್

ಬಹುನಿರೀಕ್ಷಿತ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾದ ದೃಶ್ಯಕ್ಕೆ ಭಾರತದಲ್ಲಿ ಸೆನ್ಸಾರ್ ಮಂಡಳಿ ಕತ್ತರಿ ಹಾಕಿರುವುದು ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ. ಆದರೂ ಈ ಚಿತ್ರದ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ಈ ವಾರ (ಜುಲೈ 30) ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಸ್ಪೈಡರ್ ಮ್ಯಾನ್’ ಹೊಸ ಚಿತ್ರಕ್ಕೆ ಸೆನ್ಸಾರ್ ಕತ್ತರಿ: 8 ಸೆಕೆಂಡ್‌ಗಳ ಚುಂಬನದ ದೃಶ್ಯ ಕಟ್
Spider Man Brand New Day

Updated on: Jul 28, 2026 | 9:14 PM

ಜಾಗತಿಕ ಮಟ್ಟದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ (Spider-Man: Brand New Day) ಸಿನಿಮಾ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ, ವಿದೇಶಗಳಲ್ಲಿ ತೆರೆಕಾಣುತ್ತಿರುವ ಅದೇ ಆವೃತ್ತಿಯನ್ನು ಭಾರತೀಯ ಪ್ರೇಕ್ಷಕರು ವೀಕ್ಷಿಸಲು ಸಾಧ್ಯವಿಲ್ಲ. ‘ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ’ (CBFC) ಈ ಚಿತ್ರದ ಕೆಲವು ಪ್ರಮುಖ ದೃಶ್ಯಗಳಿಗೆ ಕತ್ತರಿ ಹಾಕಿದೆ. ಸಿನಿಮಾವನ್ನು ಪರಿಶೀಲಿಸಿದ ಸೆನ್ಸಾರ್ ಮಂಡಳಿಯು ‘UA 13+’ ಪ್ರಮಾಣಪತ್ರವನ್ನು ನೀಡಿದ್ದು, 13 ವರ್ಷ ಮೇಲ್ಪಟ್ಟ ಮಕ್ಕಳು ಪೋಷಕರ ಮಾರ್ಗದರ್ಶನದೊಂದಿಗೆ ಚಿತ್ರ ವೀಕ್ಷಿಸಬಹುದು. ಆದರೆ, ಸರ್ಟಿಫಿಕೇಟ್ ನೀಡುವ ಮುನ್ನ ಚಿತ್ರದಲ್ಲಿದ್ದ 8 ಸೆಕೆಂಡ್‌ಗಳ ಚುಂಬನದ ದೃಶ್ಯವನ್ನು ತೆಗೆದುಹಾಕುವಂತೆ ಸೂಚಿಸಿದೆ.

ಆಕ್ಷೇಪಾರ್ಹ ಪದಗಳಿಗೂ ಕಟ್:

ಕೇವಲ ಚುಂಬನದ ದೃಶ್ಯ ಮಾತ್ರವಲ್ಲದೆ, ಸಿನಿಮಾದ ಆಡಿಯೋ ಮತ್ತು ಸಬ್‌ಟೈಟಲ್‌ಗಳಲ್ಲಿ ಬಳಕೆಯಾಗಿದ್ದ ಕೆಲವು ಆಕ್ಷೇಪಾರ್ಹ ಪದಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಮಪಕರಿಗೆ ಮಂಡಳಿ ನಿರ್ದೇಶನ ನೀಡಿತ್ತು. ನಿರ್ಮಾಪಕರು ಈ ತಿದ್ದುಪಡಿಗಳನ್ನು ಮಾಡಿದ ನಂತರವೇ ಚಿತ್ರದ ಬಿಡುಗಡೆಗೆ ಹಸಿರು ನಿಶಾನೆ ಸಿಕ್ಕಿದೆ. ಈ ಎಲ್ಲಾ ಬದಲಾವಣೆಗಳ ನಂತರ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾದ ಒಟ್ಟು ಅವಧಿ 2 ಗಂಟೆ 24 ನಿಮಿಷಗಳು ಎಂದು ಖಚಿತಪಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ:

ಸೆನ್ಸಾರ್ ಮಂಡಳಿಯ ಈ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಸಿನಿಮಾ ಪ್ರಿಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಯಸ್ಸಿನ ಆಧಾರದ ಮೇಲೆ ಪ್ರಮಾಣಪತ್ರ ನೀಡಿದ ಮೇಲೆಯೂ ರೊಮ್ಯಾಂಟಿಕ್ ಹಾಗೂ ಕಿಸ್ಸಿಂಗ್ ದೃಶ್ಯಗಳನ್ನು ಕತ್ತರಿಸುವ ಅಗತ್ಯವೇನಿತ್ತು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿಯ ಇಂಥ ನಿಲುವಿಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಸೆನ್ಸಾರ್ ಮಂಡಳಿಯ ದ್ವಿಮುಖ ನೀತಿಗೆ ಟೀಕೆ:

‘ರೆಡ್ಡಿಟ್’ ಬಳಕೆದಾರರೊಬ್ಬರು ಕಾಮೆಂಟ್ ಮಾಡುತ್ತಾ, ‘ಬಾಲಿವುಡ್ ಸಿನಿಮಾಗಳಲ್ಲಿ ಕೆಟ್ಟ ನೃತ್ಯ, ಹಾಡು ಹಾಗೂ ಕಾಮಪ್ರಚೋದಕ ದೃಶ್ಯಗಳಿದ್ದರೂ ಸುಲಭವಾಗಿ ಬಿಡುಗಡೆ ಮಾಡಲು ಬಿಡುತ್ತಾರೆ. ಆದರೆ ಹಾಲಿವುಡ್ ಸಿನಿಮಾಗಳು ಬಂದರೆ ಮಾತ್ರ ಸೆನ್ಸಾರ್ ಮಂಡಳಿಗೆ ನಿಯಮಗಳು ನೆನಪಾಗುತ್ತವೆ. ಇದು ಸಂಪೂರ್ಣವಾಗಿ ದ್ವಿಮುಖ ನೀತಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಸ್ಪೈಡರ್ ಮ್ಯಾನ್’ ಹೆಗಲ ಮೇಲೆ ಕೈ, ಹಾಲಿವುಡ್ ಸಿನಿಮಾಕ್ಕೆ ರಿಷಬ್ ಪ್ರಚಾರ

ಮತ್ತೊಬ್ಬ ನೆಟ್ಟಿಗರು ಕಮೆಂಟ್ ಮಾಡಿ, ‘ನನಗೇನೂ ಆಶ್ಚರ್ಯವಾಗಿಲ್ಲ. ಕಳೆದ ವರ್ಷ ಸೂಪರ್‌ಮ್ಯಾನ್ ಚಿತ್ರದಲ್ಲೂ ಚುಂಬನದ ದೃಶ್ಯ ಕಟ್ ಮಾಡಿದ್ದ ಇದೇ ಸಿಬಿಎಫ್‌ಸಿ ಸದಸ್ಯರು, ತಮ್ಮ ಸಿದ್ಧಾಂತಕ್ಕೆ ಪೂರಕವಾದ ಹಾಗೂ ಸರ್ಕಾರದ ಪರವಾದ ಸಿನಿಮಾಗಳಿಗೆ ಯಾವುದೇ ಕಟ್ ಇಲ್ಲದೆ ಸುಲಭವಾಗಿ ಒಪ್ಪಿಗೆ ನೀಡುತ್ತಾರೆ’ ಎಂದು ಟೀಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us