
ಹಾಲಿವುಡ್ನ (Hollywood) ಬಹು ನಿರೀಕ್ಷಿತ ಸಿನಿಮಾ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಇಂದು (ಜುಲೈ 30) ಭಾರತದಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಸಿನಿಮಾದ ಟ್ರೈಲರ್ ಸಹ ಸಖತ್ ಸದ್ದು ಮಾಡಿತ್ತು. ಭಾರತದಲ್ಲಿ ಭಾರಿ ಮುಂಗಡ ಬುಕಿಂಗ್ ಅನ್ನು ಈ ಸಿನಿಮಾ ಬಾಚಿಕೊಂಡಿತ್ತು. ಮೊದಲ ದಿನ ದಾಖಲೆಯ ಕಲೆಕ್ಷನ್ ಅನ್ನು ಈ ಸಿನಿಮಾ ಭಾರತದಲ್ಲಿ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಹಲವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ನೀವು ನೋಡಲು ಬಯಸುವ ಎಲ್ಲವೂ ‘ಸ್ಪೈಡರ್ ಮ್ಯಾನ್’ ಸಿನಿಮಾನಲ್ಲಿದೆ. ಈ ಚಿತ್ರದ ಭಾವನಾತ್ಮಕ ಅಂಶವು ಅದ್ಭುತವಾಗಿದೆ, ಸಿನಿಮಾನಲ್ಲಿ ಒಂಟಿತನವನ್ನು ತೋರಿಸಿರುವ ರೀತಿ, ಒಂಟಿತನದ ಬಗ್ಗೆ ಹೇಳಿರುವ ಅಂಶಗಳು ನೆನಪುಳಿಯುತ್ತವೆ. ಕೊನೆಯಲ್ಲಿ, ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದನ್ನು ಈ ಸಿನಿಮಾ ಕೊಡುತ್ತದೆ. ಇದು ಅತ್ಯಂತ ಶಕ್ತಿಶಾಲಿ ಮತ್ತು ಚೆನ್ನಾಗಿ ಸಂಯೋಜಿಸಲ್ಪಟ್ಟಿರುವ ‘ಸ್ಪೈಡರ್ ಮ್ಯಾನ್’ ಸಿನಿಮಾ. ಈ ಚಿತ್ರವು ಮಾರ್ವೆಲ್ ನ ಈ ವರೆಗಿನ ಕೆಲ ಅತ್ಯುತ್ತಮ ಆಕ್ಷನ್ ದೃಶ್ಯಗಳನ್ನು ಹೊಂದಿದೆ. ಸಿನಿಮಾ ನಿಧಾನವಾಗಿ ಪ್ರಾರಂಭವಾಗುತ್ತದೆ, ಆದರೆ ನಂತರ ಮುಂದಿನ ಅರ್ಧವು ಅದನ್ನು ಸರಿದೂಗಿಸುತ್ತದೆ’ ಎಂದಿದ್ದಾರೆ ಕಾರ್ಲ್. ಸಿನಿಮಾಕ್ಕೆ 8.50 ಅಂಕಗಳನ್ನು ನೀಡಿದ್ದಾರೆ.
ಶ್ರೀಧರ್ ಪಿಳ್ಳೈ ಎಂಬುವರು ಟ್ವೀಟ್ ಮಾಡಿ, ‘ಹಿಂದಿನ ಸ್ಪೈಡರ್ ಮ್ಯಾನ್ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದ ಅನುಭವವನ್ನು ಈ ಸಿನಿಮಾ ನೀಡುತ್ತದೆ. ಇದು ಪೀಟರ್ನ ಒಂಟಿತನ ಮತ್ತು ಮಾನವ ದುರ್ಬಲತೆಯ ಬಗ್ಗೆ ಆಳವಾಗಿ ಮಾತನಾಡುತ್ತದೆ. ರೋಮಾಂಚಕಾರಿ ಆಕ್ಷನ್ ಮತ್ತು ಅದ್ಭುತವಾದ ವಿಎಫ್ಎಕ್ಸ್ ಅನ್ನು ಒಳಗೊಂಡಿದೆ. ಟಾಮ್ ಹಾಲೆಂಡ್ ಗಾಢವಾದ, ಹೆಚ್ಚು ಪ್ರಬುದ್ಧ ನೆಟನೆ ಮಾಡಿದ್ದಾರೆ. ಸ್ಯಾಡಿ ಸಿಂಕ್ ಅದ್ಭುತವಾಗಿದೆ, ಹಲ್ಕ್ ಸೀಕ್ವೆನ್ಸ್ಗಳು ಸಖತ್ ಆಗಿವೆ, ಆಕ್ಷನ್ ಅಂತೂ ಅದ್ಭುತವಾಗಿವೆ’ ಎಂದಿದ್ದಾರೆ.
ರಮೇಶ್ ಬಾಲಾ ಟ್ವೀಟ್ ಮಾಡಿದ್ದು, ‘ಇದೊಂದು ಫನ್ ಆಕ್ಷನ್ ಡ್ರಾಮಾ, ಸ್ಪೈಡರ್ ಮ್ಯಾನ್ ಅಭಿಮಾನಿಗಳು ಸಿನಿಮಾದಿಂದ ಏನೇನು ಬಯಸಿದ್ದರೊ ಅದೆಲ್ಲವೂ ಇದರಲ್ಲಿ ಸಿಗುತ್ತದೆ. ಹಲ್ಕ್ ಅದ್ಭುತ, ಆಕ್ಷನ್ ದೃಶ್ಯಗಳಂತೂ ಸೂಪರ್, ಟಾಮ್ ಹಾಲೆಂಡ್ ಮತ್ತು ಜೆಂಡೆಯಾ ನಡುವಿನ ದೃಶ್ಯಗಳು ಭಾವನಾತ್ಮಕವಾಗಿವೆ. ವಿಲನ್ ಮತ್ತು ಸಪೋರ್ಟಿಂಗ್ ಪಾತ್ರಗಳು ಸಹ ನೆನಪುಳಿಯುತ್ತವೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ