ಥಿಯೇಟರ್‌ನಲ್ಲಿ ‘ಸ್ಪೈಡರ್ ಮ್ಯಾನ್’ ಕಥೆ ಹೇಳುತ್ತಿದ್ದ ಯುವಕನಿಗೆ ಧರ್ಮದೇಟು; ವಿಡಿಯೋ ವೈರಲ್

‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ ನಡುವೆ ಜಗಳ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಹೌಸ್​ಫುಲ್ ಆಗಿದ್ದ ಥಿಯೇಟರ್‌ನಲ್ಲಿ ಹಲವರು ಜಗಳ ಬಿಡಿಸಲು ಯತ್ನಿಸುತ್ತಿದ್ದರೆ, ಇನ್ನು ಕೆಲವರು ಆಶ್ಚರ್ಯದಿಂದ ನೋಡುತ್ತಿರುವುದು ಸೆರೆಯಾಗಿದೆ.

ಥಿಯೇಟರ್‌ನಲ್ಲಿ ‘ಸ್ಪೈಡರ್ ಮ್ಯಾನ್’ ಕಥೆ ಹೇಳುತ್ತಿದ್ದ ಯುವಕನಿಗೆ ಧರ್ಮದೇಟು; ವಿಡಿಯೋ ವೈರಲ್
Spider Man Brand New Day

Updated on: Aug 03, 2026 | 4:51 PM

ಚಿತ್ರಮಂದಿರದಲ್ಲಿ ಇಷ್ಟಪಟ್ಟು ಸಿನಿಮಾ ನೋಡಲು ಬಂದವರಿಗೆ ಪಕ್ಕದಲ್ಲಿದ್ದವನೇ ಕಥೆಯ ರಹಸ್ಯ ಬಿಚ್ಚಿಟ್ಟರೆ ಕೋಪ ಬರುವುದು ಸಹಜ. ಇತ್ತೀಚೆಗೆ ತೆರೆಕಂಡ ಬಹುನಿರೀಕ್ಷಿತ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ (Spider-Man: Brand New Day) ಸಿನಿಮಾ ಪ್ರದರ್ಶನದ ವೇಳೆ ಇಂಥದ್ದೇ ಒಂದು ಘಟನೆ ನಡೆದಿದೆ. ಈ ವೇಳೆ ಶುರುವಾದ ಪ್ರೇಕ್ಷಕರ ನಡುವಿನ ವಾಗ್ವಾದವು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಹೊಸದಾಗಿ ಬಿಡುಗಡೆಯಾಗಿರುವ, ಮಾರ್ವೆಲ್ ಸ್ಟುಡಿಯೋಸ್ ನಿರ್ಮಾಣದ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರವನ್ನು ನೋಡಲು ನಾಲ್ವರು ಸ್ನೇಹಿತರು ಅತ್ಯಂತ ಕಾತರದಿಂದ ಚಿತ್ರಮಂದಿರಕ್ಕೆ ತೆರಳಿದ್ದರು. ಅವರ ಪಕ್ಕದ ಸೀಟ್‌ನಲ್ಲೇ ಒಬ್ಬ ಯುವಕ ಹಾಗೂ ಆತನ ಸ್ನೇಹಿತೆ ಕುಳಿತಿದ್ದರು. ತನ್ನ ಸ್ನೇಹಿತೆಗೆ ಕಥೆ ವಿವರಿಸುತ್ತಿದ್ದ ಯುವಕನಿಂದಾಗಿ ಕಿರಿಕ್ ಶುರು ಆಯಿತು ಎನ್ನಲಾಗಿದೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಪಕ್ಕದಲ್ಲಿದ್ದ ಯುವಕ ಈಗಾಗಲೇ ಈ ಸಿನಿಮಾವನ್ನು ಒಮ್ಮೆ ವೀಕ್ಷಿಸಿದ್ದ. ಎರಡನೇ ಬಾರಿ ತನ್ನ ಸ್ನೇಹಿತೆಯೊಂದಿಗೆ ಸಿನಿಮಾ ನೋಡಲು ಬಂದಿದ್ದ ಆತ, ಪ್ರದರ್ಶನದುದ್ದಕ್ಕೂ ಮುಂಬರುವ ದೃಶ್ಯಗಳ ಕಥೆಯನ್ನು ಆಕೆಗೆ ಜೋರಾಗಿ ಹೇಳಲು ಪ್ರಾರಂಭಿಸಿದ್ದ. ಮುಂದೆ ಯಾವ ದೃಶ್ಯ ಬರಲಿದೆ, ಕಥೆಯಲ್ಲಿ ಏನು ತಿರುವು ಸಿಗಲಿದೆ ಎಂಬುದನ್ನು ಆ ಯುವಕ ನಿರಂತರವಾಗಿ ಹೇಳುತ್ತಿದ್ದರಿಂದ ಪಕ್ಕದಲ್ಲಿದ್ದ ನಾಲ್ವರು ಪ್ರೇಕ್ಷಕರ ಸಿನಿಮಾ ವೀಕ್ಷಣೆಯ ಉತ್ಸಾಹ ಸಂಪೂರ್ಣವಾಗಿ ಹಾಳಾಗಿತ್ತು.

ಕೈಕೈ ಮಿಲಾಯಿಸಿದ ಪ್ರೇಕ್ಷಕರು:

ಮೊದಲಿಗೆ ಸಮಾಧಾನದಿಂದಲೇ ಯುವಕನಿಗೆ ಎಚ್ಚರಿಕೆ ನೀಡಿದರೂ ಆತ ಸ್ಪಾಯ್ಲರ್ ನೀಡುವುದನ್ನು ನಿಲ್ಲಿಸಲಿಲ್ಲ. ಇದರಿಂದ ಆಕ್ರೋಶಗೊಂಡ ನಾಲ್ವರು ಸ್ನೇಹಿತರು ಥಿಯೇಟರ್ ಒಳಗಡೆಯೇ ಆತನ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಕೊನೆಗೆ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಸಿನಿಮಾ ಮಂದಿರದಲ್ಲೇ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಸ್ಪೈಡರ್-ಮ್ಯಾನ್ ಅಬ್ಬರ; 4 ದಿನಗಳಲ್ಲಿ 300 ಕೋಟಿ ಕ್ಲಬ್ ಸೇರಿದ ‘ಬ್ರ್ಯಾಂಡ್ ನ್ಯೂ ಡೇ’

ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದಲ್ಲಿ ಟಾಮ್ ಹಾಲೆಂಡ್, ಝೆಂಡಾಯಾ, ಜಾಕೋಬ್ ಬಟಾಲನ್, ಮಾರ್ಕ್ ರಫೆಲೊ ಮುಂತಾದವರು ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಮಾರಾಮಾರಿ ನಡೆದಿರುವ ಈ ಘಟನೆಯ ನಂತರ, ‘ಮೊದಲೇ ಸಿನಿಮಾ ನೋಡಿದವರು ಇತರರಿಗೆ ಸ್ಪಾಯ್ಲರ್ ನೀಡಿ ಅವರ ಅನುಭವ ಹಾಳು ಮಾಡಬಾರದು’ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us