ವಿಲ್ ಸ್ಮಿತ್ ಸಲಿಂಗಿ, ಸಹ ನಟನ ಜೊತೆ ಸಂಬಂಧವಿದೆ: ಮಾಜಿ ಸಹಾಯಕನ ಹೇಳಿಕೆ

|

Updated on: Nov 15, 2023 | 9:39 PM

Will Smith: ಖ್ಯಾತ ಹಾಲಿವುಡ್ ನಟ ವಿಲ್ ಸ್ಮಿತ್ ಸಲಿಂಗಿಯಾಗಿದ್ದು, ತನ್ನ ಸಹನಟ, ಗೆಳೆಯನೊಡನೆ ಸಂಬಂಧ ಹೊಂದಿದ್ದಾನೆ ಎಂದು ವಿಲ್ ಸ್ಮಿತ್​ರ ಮಾಜಿ ಸಹಾಯಕ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಆರೋಪ ಮಾಡಿದ್ದಾನೆ.

ವಿಲ್ ಸ್ಮಿತ್ ಸಲಿಂಗಿ, ಸಹ ನಟನ ಜೊತೆ ಸಂಬಂಧವಿದೆ: ಮಾಜಿ ಸಹಾಯಕನ ಹೇಳಿಕೆ
Follow us on

ಖ್ಯಾತ ಹಾಲಿವುಡ್ ನಟ ವಿಲ್ ಸ್ಮಿತ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಆಸ್ಕರ್​ ವೇದಿಕೆ ಮೇಲೆ ಹಾಸ್ಯನಟನ ಕೆನ್ನೆಗೆ ಭಾರಿಸಿ ಸುದ್ದಿಯಾಗಿದ್ದರು. ಅದಾದ ಬಳಿಕ ಅವರ ಪತ್ನಿ ಜೂಡಾ ಪಿನ್ಕೆಟ್, ವಿಲ್ ಸ್ಮಿತ್ ಬಗ್ಗೆ ಕೆಲವು ಖಾಸಗಿ ವಿಷಯಗಳನ್ನು ಬಹಿರಂಗಪಡಿಸಿದ್ದರು, ಮಾತ್ರವಲ್ಲದೆ ತಾವು ಹಾಗೂ ವಿಲ್ ಸ್ಮಿತ್ 2016ರಿಂದ ಪ್ರತ್ಯೇಕವಾಗಿ ಇರುವ ವಿಷಯ ಹೇಳಿದ್ದರು. ಇದೀಗ ವಿಲ್ ಸ್ಮಿತ್​ರ ಮಾಜಿ ಆಪ್ತರೊಬ್ಬರು ವಿಲ್ ಸ್ಮಿತ್ ಸಲಿಂಗಿ ಎಂದಿದ್ದಾರೆ. ಇದು ವಿಲ್ ಸ್ಮಿತ್​ರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ವಿಲ್​ ಸ್ಮಿತ್​ರ ಆತ್ಮೀಯ ಗೆಳೆಯ, ಮಾಜಿ ಸಹಾಯಕ ಎಂದು ಹೇಳಿಕೊಂಡಿರುವ ಬಿಲಾಲ್ ಹೆಸರಿನ ವ್ಯಕ್ತಿಯೊಬ್ಬರು ಸಂದರ್ಶನವೊಂದರಲ್ಲಿ ವಿಲ್ ಸ್ಮಿತ್ ಸಲಿಂಗಿ ಎಂದಿದ್ದಾರೆ. ”ನಾನು ಒಮ್ಮೆ ವಿಲ್ ಸ್ಮಿತ್​ರ ಕೋಣೆಗೆ ಹೋದೆ ಆಗ ಆತ ತನ್ನ ಸಹ ನಟ ಡ್ಯೂನ್ ಮಾರ್ಟಿನ್ ಜೊತೆ ಲೈಂಗಿಕತೆ ನಡೆಸುತ್ತಿದ್ದ. ಈ ಘಟನೆ ವಿಲ್ ಸ್ಮಿತ್ ‘ದಿ ಫ್ರೆಶ್ ಪ್ರಿನ್ಸ್ ಆಫ್ ಬೆಲ್ ಏರ್​’ ಶೋಗೆ ಬಂದಿದ್ದಾಗ ನಡೆಯಿತು. ಆ ದೃಶ್ಯ ನೋಡಿ ನಾನು ಗಾಬರಿಯಾದೆ. ನನ್ನ ಬಾಯಿಂದ ಮಾತೇ ಹೊರಡಲಿಲ್ಲ” ಎಂದಿದ್ದರು.

ಈ ಸಂದರ್ಶನ ಇದೀಗ ವೈರಲ್ ಆಗಿದೆ. ಅದರ ಬೆನ್ನಲ್ಲೆ ಈ ಹಿಂದೆ ವಿಲ್ ಸ್ಮಿತ್​ರ ಪತ್ನಿ ಜೂಡಾ ಪಿನ್ಕೆಟ್, ವಿಲ್ ಸ್ಮಿತ್​ರ ಲೈಂಗಿಕ ಅಸಾಮರ್ಥ್ಯದ ಬಗ್ಗೆ ಆಡಿದ್ದ ಮಾತುಗಳು ಇದರೊಟ್ಟಿಗೆ ಸೇರಿಕೊಂಡು ವೈರಲ್ ಆಗಿವೆ. ವಿಲ್ ಸ್ಮಿತ್ ಸಲಿಂಗಿ ಆಗಿದ್ದರೂ ಅದನ್ನು ಘೋಷಿಸಿಕೊಂಡಿಲ್ಲದೇ ಇರು ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವಿಲ್ ಸ್ಮಿತ್, ಸಲಿಂಗಿ ಆಗಿರುವುದಕ್ಕೆ ಖುಷಿಯನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ವಿಲ್ ಸ್ಮಿತ್​ ಒಳ್ಳೆಯ ವ್ಯಕ್ತಿ’; ಸಂಗೀತ ನಿರ್ದೇಶಕ ಎ.ಆರ್​​. ರೆಹಮಾನ್ ಮೆಚ್ಚುಗೆಯ ಮಾತು

ಇದೆಲ್ಲದರ ನಡುವೆ ವಿಲ್ ಸ್ಮಿತ್​ರ ಮಾಧ್ಯಮ ಪ್ರತಿನಿಧಿ, ವಿಲ್​ ಸ್ಮಿತ್​ರ ಮಾಜಿ ಆಪ್ತ ಸಹಾಯಕ ಎಂದು ಹೇಳಿಕೊಂಡಿರುವ ವ್ಯಕ್ತಿ ತನ್ನ ಬಗ್ಗೆ ನೀಡಿರುವ ಹೇಳಿಕೆ ಅಪ್ಪಟ ಸುಳ್ಳೆಂದು ಹೇಳಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಸುಳ್ಳು ಹರಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಯೋಚನೆಯಲ್ಲಿ ವಿಲ್ ಸ್ಮಿತ್ ಇದ್ದಾರೆ ಎಂದು ಹೇಳಿದ್ದಾರೆ.

ಸಂದರ್ಶನದಲ್ಲಿ ವಿಲ್ ಸ್ಮಿತ್ ಬಗ್ಗೆ ಮಾತನಾಡಿರುವ ವ್ಯಕ್ತಿ ಬಿಲಾಲ್, ವಿಲ್ ಸ್ಮಿತ್ ಜೊತೆಗೆ ಹಲವಾರು ಬಾರಿ ಈ ಹಿಂದೆ ಕಾಣಿಸಿಕೊಂಡಿದ್ದರು ಎನ್ನಲಾಗುತ್ತಿದೆ. ವಿಲ್ ಸ್ಮಿತ್ ಜೊತೆಗಿನ ಬಹಳ ಹಳೆಯ ಚಿತ್ರಗಳು, ವಿಡಿಯೋಗಳು ಬಿಲಾಲ್ ಬಳಿ ಇವೆ.

ವಿಲ್ ಸ್ಮಿತ್ ಹಾಲಿವುಡ್​ನ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ‘ಬ್ಯಾಡ್ ಬಾಯ್ಸ್’, ‘ಮೆನ್ ಇನ್ ಬ್ಲ್ಯಾಕ್’, ‘ಇಂಡಿಪೆಂಡೆನ್ಸ್ ಡೇ’, ‘ಐ ರೋಬಾಟ್’, ‘ಹ್ಯಾಂಕಾಕ್’, ‘ಸೂಸೈಡ್ ಸ್ಕ್ವಾಡ್’, ಆಸ್ಕರ್ ಗೆದ್ದ ‘ಕಿಂಗ್ ರಿಚರ್ಡ್’ ಮಾತ್ರವಲ್ಲದೆ ಹಿಂದಿಯ ‘ಸ್ಟುಡೆಂಟ್ ಆಫ್ ದಿ ಇಯರ್ 2’ ನಲ್ಲಿಯೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ