Matthew Perry: ‘ಫ್ರೆಂಡ್ಸ್’ ಖ್ಯಾತಿಯ ಮ್ಯಾಥ್ಯು ಪೆರ್ರಿ ಸಾವಿಗೆ ತಿಳಿಯಿತು ಅಸಲಿ ಕಾರಣ..

|

Updated on: Dec 16, 2023 | 10:01 AM

ಮ್ಯಾಥ್ಯು ಪೆರ್ರಿ ಅವರು ಬಾತ್​ಟಬ್​ನಲ್ಲಿ ಮುಳುಗಿ ಸತ್ತಿದ್ದರಿಂದ ಅನೇಕರು ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.

Matthew Perry: ‘ಫ್ರೆಂಡ್ಸ್’ ಖ್ಯಾತಿಯ ಮ್ಯಾಥ್ಯು ಪೆರ್ರಿ ಸಾವಿಗೆ ತಿಳಿಯಿತು ಅಸಲಿ ಕಾರಣ..
ಮ್ಯಾಥ್ಯೂ
Follow us on

ಜನಪ್ರಿಯ ಟಿವಿ ಶೋ ‘ಫ್ರೆಂಡ್ಸ್’  (Friends Series) ನಟ ಮ್ಯಾಥ್ಯು ಪೆರ್ರಿ ಅಕ್ಟೋಬರ್​ 28ರಂದು ಮೃತಪಟ್ಟಿದ್ದರು. ಅವರ ಸಾವು ಸಾಕಷ್ಟು ಅನುಮಾನ ಹುಟ್ಟುಹಾಕಿತ್ತು. ಹಾಟ್​ ಟಬ್​ನಲ್ಲಿ ಮ್ಯಾಥ್ಯೂ ಮೃತದೇಹ ಪತ್ತೆ ಆಗಿತ್ತು. ಹೀಗಾಗಿ, ಅನೇಕರು ಅವರ ಸಾವಿನ ಬಗ್ಗೆ ತನಿಖೆ ನಡೆಯಬೇಕು ಎಂದು ಅನೇಕರು ಆಗ್ರಹಿಸಿದ್ದರು. ಈಗ ಅವರ ಮರಣೋತ್ತರ ಪರೀಕ್ಷೆಯ ಸಂಪೂರ್ಣ ರಿಪೋರ್ಟ್ ಸಿಕ್ಕಿದೆ. ಕೆಟಮೈನ್​ನಿಂದ ಅವರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

ಮ್ಯಾಥ್ಯು ಪೆರ್ರಿ ಅವರ ಜೀವನ ಅಂದುಕೊಂಡಂತೆ ನಡೆಯುತ್ತಿರಲಿಲ್ಲ. ಅವರು ಅತಿಯಾಗಿ ಪೇನ್​ಕಿಲ್ಲರ್​ ತಿನ್ನುತ್ತಿದ್ದರು ಮತ್ತು ಮದ್ಯಪಾನ ಸೇವನೆ ಮಾಡುತ್ತಿದ್ದರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಅನೇಕ ಬಾರಿ ಅವರಿಗೆ ಆರೋಗ್ಯದ ಸಮಸ್ಯೆ ಉಂಟಾಗಿತ್ತು. ಚಿಕಿತ್ಸೆಗಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದರು. ಹಲವು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಅವರು ಬಾತ್​ಟಬ್​ನಲ್ಲಿ ಮುಳುಗಿ ಸತ್ತಿದ್ದರಿಂದ ಅನೇಕರು ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.

ಮ್ಯಾಥ್ಯೂ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ವಿಶೇಷ ಥೆರೆಪಿಗೆ ಒಳಗಾಗಿದ್ದರು. ಥೆರೆಪಿಯಲ್ಲಿ ಕೆಟಮೈನ್​ನ ತೆಗೆದುಕೊಳ್ಳುವ ಥೆರಪಿ ಇದಾಗಿತ್ತು. ಖಿನ್ನತೆಗೆ ಒಳಗಾದ ವ್ಯಕ್ತಿಗಳನ್ನು ಟ್ರೀಟ್ ಮಾಡಲು ಇದನ್ನು ಬಳಕೆ ಮಾಡಲಾಗಿತ್ತು. ಆದರೆ, ಮ್ಯಾಥ್ಯೂ ಸಾಯುವ ಸಂದರ್ಭದಲ್ಲಿ ಕೆಟಮೈನ್​ ಪ್ರಮಾಣ ಅವರ ದೇಹದಲ್ಲಿ ಅಧಿಕವಾಗಿತ್ತು. ಹೀಗಾಗಿ ಅವರು ನೀರಿನಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡರು ಮತ್ತು ಮೇಲೆದ್ದು ಬರಲು ಅವರ ಬಳಿ ಸಾಧ್ಯವಾಗಲೇ ಇಲ್ಲ. ಇದರಿಂದ ಮ್ಯಾಥ್ಯೂ ಮೃತಪಟ್ಟರು.

ಇದನ್ನೂ ಓದಿ: Matthew Perry: ಮ್ಯಾಥ್ಯು ಪೆರ್ರಿ ಸಾವಿಗೆ ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ತಿಳಿಯಲಿಲ್ಲವೇ?

10 ಸೀಸನ್​ಗಳಲ್ಲಿ ‘ಫ್ರೆಂಡ್ಸ್​’ ಸೀರಿಸ್​ ಪ್ರಸಾರ ಕಂಡಿತ್ತು. ಅದರಲ್ಲಿ ಮ್ಯಾಥ್ಯು ಪೆರ್ರಿ ಅವರು ಚಾಂಡ್ಲರ್​ ಬೇಂಗ್​ ಹೆಸರಿನ ಪಾತ್ರ ಮಾಡಿದ್ದರು. ಇದು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಈ ಮೂಲಕ ವಿಶ್ವಾದ್ಯಂತ ಅವರು ಜನಪ್ರಿಯತೆ ಪಡೆದಿದ್ದರು. ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದರು. ‘ಫೂಲ್ಸ್​ ರಶ್​ ಇನ್​’, ‘ದಿ ಹೋಲ್​ ನೈನ್​ ಯಾರ್ಡ್ಸ್​’ ಸೇರಿದಂತೆ ಒಂದಷ್ಟು ಹಾಲಿವುಡ್​ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಭಾರತದಲ್ಲೂ ಅವರಿಗೆ ಅಭಿಮಾನಿಗಳು ಇದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ