‘ದುಡ್ಡುಕೊಟ್ರೆ ನಿಮಗಿಂತ ಚೆನ್ನಾಗಿ ಕನ್ನಡ ಮಾತಾಡ್ತೀನಿ’ ಎಂದು ಟೀಕೆ; ಖಡಕ್ ಉತ್ತರ ಕೊಟ್ಟ ಬಾದ್​ಶಾ

|

Updated on: Oct 10, 2024 | 2:15 PM

ಬಾದ್​ಶಾ ಅವರು ಬಾಲಿವುಡ್ ಸಿಂಗರ್. ಅವರು ಜನಿಸಿದ್ದು ದೆಹಲಿಯಲ್ಲಿ. ಸೆಪ್ಟೆಂಬರ್ 8ರಂದು ಯುವ ದಸರಾ ಕಾರ್ಯಕ್ರಮದಲ್ಲಿ ಬಾದ್​ಶಾ ಭಾಗಿ ಆಗಿದ್ದರು. ಈ ವೇಳೆ ಕನ್ನಡದಲ್ಲಿ ಮಾತನಾಡಿದ ಅವರು, ಕನ್ನಡದ ಒಂದು ಹಾಡು ಕೇಳಿ ಸಖತ್ ಎಮೋಷನಲ್ ಆದರು. ಇದನ್ನು ಅನೇಕರು ಟೀಕಿಸಿದ್ದರು.

‘ದುಡ್ಡುಕೊಟ್ರೆ ನಿಮಗಿಂತ ಚೆನ್ನಾಗಿ ಕನ್ನಡ ಮಾತಾಡ್ತೀನಿ’ ಎಂದು ಟೀಕೆ; ಖಡಕ್ ಉತ್ತರ ಕೊಟ್ಟ ಬಾದ್​ಶಾ
ಬಾದ್​ಶಾ
Follow us on

ಬಾದ್​ಶಾ ಅವರು ಇತ್ತೀಚೆಗೆ ಮೈಸೂರು ಯುವ ದಸರಾದಲ್ಲಿ ಭಾಗಿ ಆಗಿದ್ದರು. ಅವರು ಶೋ ಕೊಟ್ಟಿದ್ದರು. ಈ ವೇಳೆ ಬಾದ್​ಶಾ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ಅವರ ಮಾತುಗಳನ್ನು ಕೆಲವರು ಟೀಕೆ ಮಾಡಿದ್ದರು. ‘ಹಣ ಪಡೆದು ಬಾದ್​ಶಾ ಕನ್ನಡ ಮಾತನಾಡಿದ್ದಾರೆ ಅಷ್ಟೇ’ ಎಂದೆಲ್ಲ ಟೀಕೆ ವ್ಯಕ್ತವಾಗಿತ್ತು. ಈ ಟ್ವೀಟ್ ಬಾದ್​ಶಾಗೂ ಕಾಣಿಸಿದೆ. ಅವರು ಖಡಕ್ ಆಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಾದ್​ಶಾ ಮಾತನಾಡಿದ್ದು ಏನು?

ಯುವ ದಸರಾ ವೇದಿಕೆ ಏರಿದ ಬಳಿಕ ಬಾದ್​ಶಾ ಕನ್ನಡದಲ್ಲಿ ಮಾತನಾಡಿದ್ದರು. ‘ಇಲ್ಲಿ ಯಾರೂ ಸ್ಟಾರ್ ಅಲ್ಲ, ಯಾರೂ ಸೂಪರ್​ಸ್ಟಾರ್ ಕೂಡ ಅಲ್ಲ. ನಾನು ಗಾಯಕ ಅಲ್ಲ, ನಾನು ಒಬ್ಬ ಬರಹಗಾರ. ನನಗೆ ಹೇಗೆ ಬರೆಯಬೇಕು ಎಂಬುದಷ್ಟೇ ಗೊತ್ತು. ನಾನು ಭಾವನೆಗಳನ್ನು ಬರೆಯುತ್ತೇನೆ. ನಾನು ನಿಮ್ಮಲ್ಲಿ ಒಬ್ಬ. ನಿಮ್ಮ ಆಶೀರ್ವಾದಿಂದ ಇಲ್ಲಿದ್ದೇನೆ. ನಾನು ನಿಮಗೆ ಸದಾ ಚಿರರುಣಿ’ ಎಂದು ಬಾದ್​ಶಾ ಕನ್ನಡದಲ್ಲಿ ಮಾತನಾಡಿದ್ದರು.

ಟೀಕೆ

ಪರಭಾಷಿಗರು ಬಾದ್​ಶಾನ ಟೀಕೆ ಮಾಡಿದ್ದರು. ‘ಕನ್ನಡಿಗರು ಹಣ ಕೊಟ್ಟರೆ ನಾನು ಅವರಿಗಿಂತ ಚೆನ್ನಾಗಿ ಕನ್ನಡ ಮಾತನಾಡುತ್ತೇನೆ’ ಎಂದು ಅಭಿಷೇಕ್ ಜವ್ಲಾ ಎಂಬಾತ ಹೇಳಿದ್ದ. ಈ ಕಮೆಂಟ್ ಸಾಕಷ್ಟು ವೈರಲ್ ಆಗಿತ್ತು. ಇದು ಬಾದ್​ಶಾ ಕಣ್ಣಿಗೂ ಬಿದ್ದಿದೆ.

ಏನ್​ ಅಂದ್ರು?

ಬಾದ್ ಶಾ ಅವರು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಶೋ ನಡೆಸಿಕೊಡಲು ಹಣ ಪಡೆದಿದ್ದೇನೆ. ಕನ್ನಡ ಮಾತನಾಡಿದ್ದು ಪ್ರೀತಿಯಿಂದ. ಪ್ರೀತಿಯನ್ನು ಹಂಚಿ’ ಎಂದು ಬಾದ್​ಶಾ ಟ್ವೀಟ್ ಮಾಡಿದ್ದಾರೆ. ‘ನಿಮ್ಮ ಮೇಲಿನ ಗೌರವ ಹೆಚ್ಚಿತು’ ಎಂದು ಕೆಲವರು ಕಮೆಂಟ್ ಹಾಕಿದ್ದಾರೆ.


ಇದನ್ನೂ ಓದಿ: ಯುವ ದಸರಾ ವೇದಿಕೆ ಮೇಲೆ ಕನ್ನಡದ ಈ ನಟನ ಹಾಡು ಕೇಳುತ್ತಿದ್ದಂತೆ ಎಮೋಷನಲ್ ಆದ ಬಾದ್​ಶಾ

ಪುನೀತ್ ಹಾಡು

ಪುನೀತ್ ರಾಜ್​ಕುಮಾರ್ ನಟನೆಯ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ..’ ಹಾಡನ್ನು ಪ್ಲೇ ಮಾಡಿದಾಗ ಬಾದ್​ಶಾ ಭಾವುಕರಾಗಿ ಕೈ ಮುಗಿದಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.