ತೆಲುಗು ನಟನೊಂದಿಗೆ ‘ನಟಸಾರ್ವಭೌಮ’ ಚೆಲುವೆ ವಿವಾಹ?

|

Updated on: Oct 05, 2023 | 4:06 PM

Anupama Parameswaran: ಮಲಯಾಳಿ ಚೆಲುವೆ ಅನುಪಮಾ ಪರಮೇಶ್ವರನ್, ತೆಲುಗಿನ ಸ್ಟಾರ್ ನಟರೊಬ್ಬರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ತೆಲುಗು ನಟನೊಂದಿಗೆ ನಟಸಾರ್ವಭೌಮ ಚೆಲುವೆ ವಿವಾಹ?
ಅನುಪಮಾ ಪರಮೇಶ್ವರನ್
Follow us on

ಮಲಯಾಳಂನ (Malayalam) ‘ಪ್ರೇಮಂ’ ಸಿನಿಮಾ ಮೂಲಕ ನಟನೆ ಆರಂಭಿಸಿದ ನಟಿ ಅನುಪಮಾ ಪರಮೇಶ್ವರನ್ ಈಗ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಲು-ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅನುಪಮಾ, ತೆಲುಗಿನ ಜನಪ್ರಿಯ ನಟನೊಬ್ಬನನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್​ನಲ್ಲಿ ಜೋರಾಗಿ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಸ್ವತಃ ಅನುಪಮಾ ಪರಮೇಶ್ವರನ್ (Anupama Parameswaran) ಸ್ಪಷ್ಟನೆ ನೀಡಿದ್ದಾರೆ.

ಅನುಪಮಾ ಪರಮೇಶ್ವರನ್ ಅವರು ತೆಲುಗಿನ ಸ್ಟಾರ್ ನಟ ರಾಮ್ ಪೋತಿನೇನಿ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿದೆ. ರಾಮ್ ಪೋತಿನೇನಿ ಹಾಗೂ ಅನುಪಮಾ ಒಟ್ಟಿಗೆ ‘ಹಲೋ ಗುರು ಪ್ರೇಮ ಕೋಸಮೆ’ ಸಿನಿಮಾದಲ್ಲಿ ನಟಿಸಿದ್ದರು. ಅದೇ ಕಾರಣಕ್ಕೆ ಈ ಇಬ್ಬರ ಹೆಸರು ಒಟ್ಟಿಗೆ ಕೇಳಿ ಬರುತ್ತಿದೆ.

ಅನುಪಮಾರ ಮದುವೆ ಸುದ್ದಿಯ ಬಗ್ಗೆ ಅನುಪಮಾರ ತಾಯಿ ಸುನಿತಾ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಅನುಪಮಾ ಹಾಗೂ ರಾಮ್ ನಡುವೆ ಆ ರೀತಿಯ ಯಾವುದೇ ಆತ್ಮೀಯ ಸಂಬಂಧವಿಲ್ಲ, ಅನುಪಮಾ ಹಾಗೂ ರಾಮ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಅಪ್ಪಟ ಸುಳ್ಳು. ಅನುಪಮಾ ಮದುವೆ ಮಾಡುವ ತಕ್ಷಣದ ಆಲೋಚನೆ ಇಲ್ಲ, ಯಾವುದೇ ಕಾರಣಕ್ಕೂ ಬೆಳೆಯುತ್ತಿರುವ ನಟಿ ಅನುಪಮಾ ಪರಮೇಶ್ವರನ್ ಕುರಿತಾಗಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಸುಂದರವಾಗಿ ಸೀರೆ ಧರಿಸಿ ಓಣಂ ಆಚರಿಸಿದ ನಟಿ ಅನುಪಮಾ ಪರಮೇಶ್ವರನ್​

ಅನುಪಮಾ ಪರಮೇಶ್ವರನ್ ಈ ಹಿಂದೆ ಕೆಲ ಸಂದರ್ಶನದಲ್ಲಿ ಮದುವೆ ಪ್ರಶ್ನೆ ಮಾಡಿದಾಗ ತಾನಿನ್ನೂ ಚಿಕ್ಕವಳು, ಇನ್ನೂ ಕೆಲವು ವರ್ಷಗಳ ಕಾಲ ನಾನು ನನ್ನ ವೃತ್ತಿಯ ಕಡೆಗೆ ಗಮನ ಹರಿಸಲಿದ್ದೇನೆ ಆ ಬಳಿಕವಷ್ಟೆ ಮದುವೆ ಬಗ್ಗೆ ಯೋಚಿಸಲಿದ್ದೇನೆ ಎಂದಿದ್ದರು. ಅದರ ನಡುವೆಯೇ ಅನುಪಮಾ ಹಾಗೂ ರಾಮ್ ಪೋತಿನೇನಿ ಕುರಿತು ಸುದ್ದಿಗಳು ಹರಿದಾಡಿದ್ದವು. ಆದರೆ ಆ ಸುದ್ದಿಗಳು ಸುಳ್ಳೆಂದು ಇದೀಗ ಖಾತ್ರಿಯಾಗಿದೆ.

ಮಲಯಾಳಿ ಚೆಲುವೆ ಅನುಪಮಾ ಪರಮೇಶ್ವರನ್ ಮಲಯಾಳಂನ ‘ಪ್ರೇಮಂ’ ಸಿನಿಮಾ ಮೂಲಕ 2015ರಲ್ಲಿ ನಟನೆಗೆ ಪದಾರ್ಪಣೆ ಮಾಡಿದರು. ಈವರೆಗೆ ಹಲವು ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಅನುಪಮಾ, ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟನೆಯ ‘ನಟಸಾರ್ವಭೌಮ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ