ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ನಾಳೆ (ಅಕ್ಟೋಬರ್ 15) ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿಯೂ ಸಹ ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ರಿಲೀಸ್ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಈ ಸಿನಿಮಾವನ್ನು ನಿರ್ಮಾಪಕ ಕೆ ಮಂಜು ವಿತರಣೆ ಮಾಡುತ್ತಿದ್ದಾರೆ. ‘ಜೈಲರ್ 2’ ಸಿನಿಮಾ ಮೂಲಕ ಅವರು ವಿತರಣೆಗೆ ಮರಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ ಮಂಜು, ‘ಜೈಲರ್ 2’ ಸಿನಿಮಾದ ರಿಲೀಸ್ ಇಂದ ಕನ್ನಡ ಸಿನಿಮಾ ‘ಪ್ರೇಮದ ಊರಲಿ’ಗೆ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದಿದ್ದಾರೆ. ಈ ಸಿನಿಮಾದ ಮೂಲಕ ಇನ್ನು ಮುಂದೆ ಬೇರೆ ಬೇರೆ ಸಿನಿಮಾಗಳನ್ನು ಸಹ ವಿತರಣೆ ಮಾಡುವುದಾಗಿ ಕೆ ಮಂಜು ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ