ಚಿತ್ರೀಕರಣದ ವೇಳೆ ಜೂ ಎನ್​​ಟಿಆರ್​ಗೆ ಗಾಯ, ಹೇಳಿಕೆ ಬಿಡುಗಡೆ

Jr NTR movies: ಜೂ ಎನ್​​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದೀಗ ಜೂ ಎನ್​​ಟಿಆರ್ ಗಾಯಗೊಂಡಿದ್ದಾರೆ. ಆದರೆ ಜೂ ಎನ್​​ಟಿಆರ್ ಗಾಯಗೊಂಡಿರುವುದು ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣದ ವೇಳೆ ಅಲ್ಲ. ಜೂ ಎನ್​ಟಿಆರ್ ಅವರು ಯಾವುದೋ ಖಾಸಗಿ ಜಾಹೀರಾತಿಗಾಗಿ ಚಿತ್ರೀಕರಣ ನಡೆಸುವಾಗ ಸೆಟ್​​​ನಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡಿದ್ದಾರೆ.

ಚಿತ್ರೀಕರಣದ ವೇಳೆ ಜೂ ಎನ್​​ಟಿಆರ್​ಗೆ ಗಾಯ, ಹೇಳಿಕೆ ಬಿಡುಗಡೆ
Jr Ntr

Updated on: Sep 19, 2025 | 5:48 PM

ಪ್ಯಾನ್ ಇಂಡಿಯಾ ಸ್ಟಾರ್ ನಟ ಜೂ ಎನ್​​ಟಿಆರ್ (Jr NTR) ಅವರಿಗೆ ಚಿತ್ರೀಕರಣದ ವೇಳೆ ಗಾಯವಾಗಿದೆ. ಜೂ ಎನ್​​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆದರೆ ಜೂ ಎನ್​​ಟಿಆರ್ ಗಾಯಗೊಂಡಿರುವುದು ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣದ ವೇಳೆ ಅಲ್ಲ. ಜೂ ಎನ್​ಟಿಆರ್ ಅವರು ಯಾವುದೋ ಖಾಸಗಿ ಜಾಹೀರಾತಿಗಾಗಿ ಚಿತ್ರೀಕರಣ ನಡೆಸುವಾಗ ಸೆಟ್​​​ನಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡಿದ್ದಾರೆ. ಗಾಯ ತುಸು ಗಂಭೀರ ಸ್ವರೂಪದ್ದಾಗಿದ್ದು, ಕೆಲ ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ.

ಜೂ ಎನ್​​ಟಿಆರ್ ಅವರು ಹೈದರಾಬಾದ್​​​ನಲ್ಲಿ ಜಾಹೀರಾತಿಗಾಗಿ ಚಿತ್ರೀಕರಣ ಮಾಡುವ ವೇಳೆ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಜೂ ಎನ್​​ಟಿಆರ್ ಅವರಿಗೆ ಕಾಲಿನ ಮೂಳೆ ಮುರಿತವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಘಟನೆ ನಡೆದ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಿರುವ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಜೂ ಎನ್​​ಟಿಆರ್ ಅವರಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಎನ್​​ಟಿಆರ್ ಅವರ ಮಾಧ್ಯಮ ವ್ಯವಸ್ಥಾಪಕ, ‘ಜೂ ಎನ್​​ಟಿಆರ್ ಅವರು ಖಾಸಗಿ ಜಾಹೀರಾತು ಚಿತ್ರೀಕರಣದ ವೇಳೆ ಗಾಯಗೊಂಡಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪೂರ್ಣ ಗುಣಮುಖರಾಗಲು ಅವರು ಕೆಲ ವಾರಗಳ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅವರು ಆರೋಗ್ಯವಾಗಿದ್ದು, ಯಾವುದೇ ಆತಂಕದ ಅಗ್ಯವಿಲ್ಲ. ಅವರ ಆರೋಗ್ಯದ ಕುರಿತಾಗಿ ಯಾವುದೇ ಸುಳ್ಳು ಸುದ್ದಿ ಹರಡಿಸದಂತೆ ಅಭಿಮಾನಿಗಳು, ಮಾಧ್ಯಮಗಳಲ್ಲಿ ಮನವಿ ಮಾಡುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ:‘ವಾರ್ 2’ ಸೋತರೂ ಜೂ ಎನ್​ಟಿಆರ್​​ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್​ಎಫ್

ಕೆಲ ದಿನಗಳ ಹಿಂದಷ್ಟೆ ಜೂ ಎನ್​​ಟಿಆರ್ ಅವರ ಚಿಕ್ಕಪ್ಪ, ನಟ ಬಾಲಕೃಷ್ಣ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಈಗ ಜೂ ಎನ್​ಟಿಆರ್ ಅವರು ಗಾಯಗೊಂಡಿದ್ದಾರೆ. ಜೂ ಎನ್​​ಟಿಆರ್ ಅವರು ಜಿಮ್​​​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಕೆಲ ದಿನಗಳ ಹಿಂದಷ್ಟೆ ವೈರಲ್ ಆಗಿತ್ತು. ಜೂ ಎನ್​​ಟಿಆರ್ ಸಾಕಷ್ಟು ತೂಕ ಸಹ ಇಳಿಸಿಕೊಂಡಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಗಾಯಗೊಂಡಿದ್ದಾರೆ. ಜೂ ಎನ್​​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದು, ಈಗ ವೈದ್ಯರ ಸಲಹೆಯಂತೆ ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿರುವ ಕಾರಣ ಅವರ ಸಿನಿಮಾ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ.

ಜೂ ಎನ್​​ಟಿಆರ್ ಅವರ ನಟನೆಯ ‘ವಾರ್ 2’ ಸಿನಿಮಾ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಗಳಿಸಿದೆ. ಈಗ ನೀಲ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಬಳಿಕ ತ್ರಿವಿಕ್ರಮ್ ನಿರ್ದೇಶನದ ‘ಮುರುಗನ್’ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ‘ದೇವರ 2’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ. ಯಶ್ ಚೋಪ್ರಾ ಅವರು ಜೂ ಎನ್​​ಟಿಆರ್ ಅವರನ್ನಿರಿಸಿಕೊಂಡು ಪ್ರತ್ಯೇಕ ಸ್ಪೈ ಆಕ್ಷನ್ ಸಿನಿಮಾ ಮಾಡುವ ಯೋಜನೆಯಲ್ಲೂ ಇದ್ದು, ಅದೂ ಸಹ ಆರಂಭಗೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us