AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೈಲ್ ಅಂದ್ರೆ ಇದು, ಚುನಾವಣೆ ಪ್ರಚಾರದಲ್ಲಿ ದಳಪತಿ ವಿಜಯ್ ಸ್ವ್ಯಾಗ್ ನೋಡಿ

ದಳಪತಿ ವಿಜಯ್ ರಾಜಕೀಯ ಅಖಾಡಕ್ಕೆ ಧುಮುಕಿ, ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿದ್ದಾರೆ. ಮೇ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಅವರ ಅದೃಷ್ಟ ಪರೀಕ್ಷೆಯ ಉತ್ತರ ಸಿಗಲಿದೆ. ಇತ್ತೀಚೆಗೆ ಪ್ರಚಾರದಲ್ಲಿ ಅಭಿಮಾನಿಯೊಬ್ಬ ಎಸೆದ ಕನ್ನಡಕವನ್ನು ಸ್ಟೈಲಿಶ್ ಆಗಿ ಧರಿಸಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಸ್ಟೈಲ್ ಅಂದ್ರೆ ಇದು, ಚುನಾವಣೆ ಪ್ರಚಾರದಲ್ಲಿ ದಳಪತಿ ವಿಜಯ್ ಸ್ವ್ಯಾಗ್ ನೋಡಿ
ವಿಜಯ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Apr 06, 2026 | 8:54 AM

Share

ದಳಪತಿ ವಿಜಯ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಅವರು ಈಗ ರಾಜಕೀಯದಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಈ ಅದೃಷ್ಟ ಪರೀಕ್ಷೆಯಲ್ಲಿ ಅವರು ಗೆಲ್ಲುವರೇ? ಈ ಪ್ರಶ್ನೆಗೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಮೇ 4ರಂದು ಚುನಾವಣೆ ಫಲಿತಾಂಶ ಹೊರ ಬರಲಿದೆ. ಈಗ ವಿಜಯ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.

ದಳಪತಿ ವಿಜಯ್ ಅವರು ಚಿತ್ರರಂಗದ ಖ್ಯಾತ ಹೀರೋಗಳಲ್ಲಿ ಒಬ್ಬರು. ಅವರ ಪಕ್ಷ ತಮಿಳುನಾಡಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಅವರು ಈ ಬಾರಿ ಗೆದ್ದು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

ಈಗ ದಳಪತಿ ವಿಜಯ್ ಅವರು ಚುನಾವಣೆ ಪ್ರಚಾರ ಒಂದರಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಒಂದು ಫನ್ ಘಟನೆ ನಡೆದಿದೆ. ವಿಜಯ್ ಅವರು ಹೋದಲ್ಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಈಗಲೂ ಹಾಗೆಯೇ ಆಗಿದೆ. ಅವರು ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದರು ಮತ್ತು ಅಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು.

ಈ ರೀತಿ ಅಭಿಮಾನಿಗಳು ನೆರೆದಿರುವಾಗ ವಿಜಯ್ ಕಡೆಗೆ ಹೂವಿನ ಹಾರವನ್ನು ಎಸೆಯಲಾಯಿತು. ಅದನ್ನು ಭದ್ರತಾ ಸಿಬ್ಬಂದಿ ಹಿಡಿದುಕೊಂಡರು. ಆ ಬಳಿಕ ಅವರತ್ತ ಕನ್ನಡಕ ಎಸೆಲಾಯಿತು. ಇದನ್ನು ಅವರು ಚೆಂದ ಮಾಡಿ ಹಿಡಿದುಕೊಂಡರು, ಮತ್ತು ಸ್ಟೈಲಿಶ್ ಆಗಿ ಹಾಕಿಕೊಂಡರು. ಜೊತೆಗೆ ಕನ್ನಡಕವನ್ನು ಕೊಟ್ಟವನ ಕಡೆ ನೋಡಿದರು. ಈ ವಿಡಿಯೋ ಗಮನ ಸೆಳೆದಿದೆ.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾ ತಡ ಆಗಿದ್ದಕ್ಕೆ ನನಗೆ ನ್ಯಾಯ ಬೇಕು: ಗುಡುಗಿದ ವಿಜಯ್

ದಳಪತಿ ವಿಜಯ್ ಅವರ ಜನ ನಾಯಗನ್ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಇದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾಗೆ ಈವರೆಗೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಇದು ಚಿತ್ರತಂಡಕ್ಕೆ ತಲೆಬಿಸಿ ತಂದಿದೆ. ಮುಂದೇನು ಎನ್ನುವ ಪ್ರಶ್ನೆ ಕಾಡುವಂತೆ ಮಾಡಿದೆ. ಚುನಾವಣೆ ಮುಗಿದ ಬಳಿಕ ಈ ಸಿನಿಮಾ ರಿಲೀಸ್ ಆಗಬಹುದು ಎಂದು ಊಹಿಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:48 am, Mon, 6 April 26

Follow Us