AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಯಂತ್ ವಿರುದ್ಧ ಸೇಡಿಗೆ ಇಳಿದ ಚಿನ್ನುಮರಿ; ಮುಂದಿದೆ ಮಾರಿಹಬ್ಬ

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಾಹ್ನವಿ ಜಯಂತ್ ವಿರುದ್ಧ ಸೇಡಿಗೆ ಇಳಿದಿದ್ದಾರೆ. ಪತಿಯಿಂದ ಹಿಂಸೆ ಅನುಭವಿಸಿ 'ಚಿನ್ನುಮರಿ' ಎಂದು ಕರೆಯಲ್ಪಡುತ್ತಿದ್ದ ಜಾಹ್ನವಿ, ಈಗ 'ಬೆಂಕಿಮರಿ'ಯಾಗಿ ತಿರುಗೇಟು ನೀಡಲು ಸಜ್ಜಾಗಿದ್ದಾಳೆ. ಜಯಂತ್‌ನ ತಂತ್ರಗಳನ್ನೇ ಬಳಸಿ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಜಾಹ್ನವಿಯ ಈ ಹೊಸ ಅವತಾರ ಧಾರಾವಾಹಿಯ ಕಥೆಯನ್ನು ರೋಚಕಗೊಳಿಸಿದೆ.

ಜಯಂತ್ ವಿರುದ್ಧ ಸೇಡಿಗೆ ಇಳಿದ ಚಿನ್ನುಮರಿ; ಮುಂದಿದೆ ಮಾರಿಹಬ್ಬ
ಲಕ್ಷ್ಮೀ ನಿವಾಸ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 06, 2026 | 11:24 AM

Share

‘ಲಕ್ಷ್ಮೀ ನಿವಾಸ’ ಧಾರಾವಾಹಿಯು ಅತ್ಯುತ್ತಮ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಧಾರಾವಾಹಿ ಒಂದು ಕುಟುಂಬದ ಕಥೆ ಹೇಳಲಾಗುತ್ತಾ ಇದೆ. ಅದರಲ್ಲಿ ಜಯಂತ್ ಹಾಗೂ ಜಾಹ್ನವಿ ಕಥೆ ಕೂಡ ಒಂದು. ದೂರ ಆಗಿದ್ದ ಇಬ್ಬರೂ ಪರಸ್ಪರ ಮತ್ತೆ ಒಂದಾಗಿದ್ದಾರೆ. ಇನ್ಮೇಲೆ ಜಯಂತ್​​ಗೆ ನರಕ ತೋರಿಸಲು ಜಾಹ್ನವಿ ರೆಡಿ ಆದಂತೆ ಇದೆ. ಈ ಸಂದರ್ಭದ ಪ್ರೋಮೋ ಜೀ ಕನ್ನಡ ಹಂಚಿಕೊಂಡಿದೆ.

ಜಾಹ್ನವಿಯನ್ನು ಪ್ರೀತಿಸಿ ಮದುವೆ ಆದನು ಜಯಂತ್. ಈ ಮದುವೆ ನಡೆಯುವುದಕ್ಕೂ ಮೊದಲು ಜಯಂತ್ ಒಳ್ಳೆಯವನು ಎಂದು ಜಾಹ್ನವಿ ಅಂದುಕೊಂಡಿದ್ದಳು ಎಂದೇ ಹೇಳಬಹುದು. ಆದರೆ, ಮದುವೆ ಆದ ಬಳಿಕ ಆತನ ನಿಜವಾದ ಬಣ್ಣ ಗೊತ್ತಾಯಿತು. ಸದಾ ಜಾಹ್ನವಿಯನ್ನು ಚಿನ್ನುಮರಿ ಎಂದೇ ಕರೆಯುತ್ತಿದ್ದ ಜಯಂತ್, ಆಕೆಗೆ ಪ್ರೀತಿ ಹೆಸರಲ್ಲಿ ಟಾರ್ಚರ್ ಕೊಡಲು ಆರಂಭಿಸಿದನು.

ಈ ಟಾರ್ಚರ್ ತಡೆಯಲು ಆಕಯಿಂದ ಸಾಧ್ಯವಾಗಲೇ ಇಲ್ಲ. ಒಂದು ದಿನ ಹೊರಗೆ ಹೋಗುವ ನೆಪದಲ್ಲಿ ನೀರಿಗೆ ಹಾರಿದಳು ಜಾಹ್ನವಿ. ಈ ಮೂಲಕ ಪತಿಯಿಂದ ತಪ್ಪಿಸಿಕೊಂಡಳು. ಇಷ್ಟು ದಿನಗಳ ಕಾಲ ಜಾಹ್ನವಿ ತಲೆಮರಿಸಿಕೊಂಡೇ ಓಡಾಡುತ್ತಿದ್ದಳು. ಆದರೆ, ಈಗ ಕೊನೆಗೂ ಆಕೆ ಸಿಕ್ಕಿದ್ದಾಳೆ.

View this post on Instagram

A post shared by Zee Kannada (@zeekannada)

ಇಷ್ಟು ದಿನ ಜಾಹ್ನವಿಗೆ ಜಯಂತ್ ಕಾಟ ಕೊಡುತ್ತಿದ್ದನು. ಈಗ ಜಾಹ್ನವಿಯೇ ಕಾಟ ಕೊಡಲು ನಿರ್ಧರಿಸಿದ್ದಾಳೆ. ಯಾವ ಟೆಕ್ನಿಕ್ ಉಪಯೋಗಿಸಿ ಪತಿ ಟಾರ್ಚರ್ ಕೊಡುತ್ತಿದ್ದನೋ ಅದೇ ಮಾರ್ಗದಲ್ಲಿ ಜಾಹ್ನವಿ ಟಾರ್ಚರ್ ನೀಡಲು ಆರಂಭಿಸಿದ್ದಾಳೆ. ಇದು ಧಾರಾವಾಹಿ ದಿಕ್ಕನ್ನೇ ಬದಲಿಸಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರ ಬಂದಿದ್ದೇಕೆ? ಕಾರಣ ಬಿಚ್ಚಿಟ್ಟ ಭವಿಷ್‌

‘ಲಕ್ಷ್ಮೀ ನಿವಾಸ’ ಧಾರಾವಾಹಿ ಒಳ್ಳೆಯ ಟಿಆರ್​​ಪಿ ಪಡೆದುಕೊಂಡು ಸಾಗಿದೆ. ಈಗ ಧಾರಾವಾಹಿ ಹೊಸ ರೀತಿಯಲ್ಲಿ ಸಾಗುತ್ತಿರುವುದರಿಂದ ಧಾರಾವಾಹಿ ಮತ್ತಷ್ಟು ಟಿಆರ್​​ಪಿ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಾ ಇದೆ. ಜಾಹ್ನವಿಯ ಹೊಸ ಅವತಾರವನ್ನು ಅನೇಕರು ಹೊಗಳಿದ್ದಾರೆ. ‘ಕೇವಲ ಚಿನ್ನು ಮರಿ ಅಲ್ಲ ಈಗ ಅವರು ಬೆಂಕಿಮರಿ’ ಎಂದೆಲ್ಲ ಹೊಗಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us