ರಿಷಿಕೇಷದ ಗಂಗಾ ತಟದಲ್ಲಿ ವಿವಾಹ ಆದ ‘ಮನದ ಕಡಲು’ ಹೀರೋ; ಇಲ್ಲಿವೆ ಸುಂದರ ಫೋಟೋಗಳು
ಕಳೆದ ವರ್ಷ ಮಾರ್ಚ್ 28ರಂದು ರಿಲೀಸ್ ಆದ ‘ಮನದ ಕಡಲು’ ಸಿನಿಮಾ ಕೊಂಚ ಸದ್ದು ಮಾಡಿತ್ತು. ಇದಕ್ಕೆ ಕಾರಣ ಯಶ್. ಈ ಚಿತ್ರಕ್ಕೆ ಯಶ್ ಅವರು ಬೆಂಬಲ ನೀಡಿದ್ದರು. ಈಗ ಚಿತ್ರದ ಹೀರೋ ಸುಮುಖ್ ಅವರು ವಿವಾಹ ಆಗಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಅವರು ಡೆಸ್ಟಿನೇಷನ್ ವಿವಾಹ ಆಗಿದ್ದಾರೆ.
Updated on: Apr 06, 2026 | 7:04 AM

ಕನ್ನಡದ ಯುವ ನಟ ಸುಮುಖ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆರ್ಕಿಟೆಕ್ಟ್ ಮೈತ್ರಿ ಉಕಾ ಎಂಬುವವರ ಜೊತೆ ಸುಮುಖ್ ವಿವಾಹ ನಡೆದಿದೆ ಎಂಬುದು ವಿಶೇಷ.

ಸೆಲೆಬ್ರಿಟಿಗಳು, ಉದ್ಯಮಿಗಳು ಸಾಮಾನ್ಯವಾಗಿ ಡೆಸ್ಟಿನೇಷನ್ ವಿವಾಹ ಆಗೋಕೆ ಇಷ್ಟಪಡುತ್ತಾರೆ. ಇದಕ್ಕೆ ಸುಮುಖ್ ಕೂಡ ಹೊರತಾಗಿಲ್ಲ. ಅವರು ತಮ್ಮ ಕನಸಿನಂತೆ ಮದುವೆ ಆಗಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿ ವಿವಾಹ ಎಂದಾಗ ನೆನಪಾಗೋದು ರಾಜಸ್ಥಾನ. ಉದಯಪುರದಲ್ಲಿ ಸೆಲೆಬ್ರಿಟಿಗಳು ಮದುವೆ ಆಗುತ್ತಾರೆ. ಆದರೆ, ಇವರು ಮದುವೆ ಆಗಿದ್ದು ರಿಷಿಕೇಷದಲ್ಲಿ ಎಂಬುದು ವಿಶೇಷ.

ರಿಷಿಕೇಷದಲ್ಲಿ ಗಂಗಾ ನದಿ ಹರಿದು ಹೋಗಿದೆ. ಈ ನದಿಯ ತಟದಲ್ಲಿ ಅದ್ದೂರಿ ಮಂಟಪ ಹಾಕಲಾಗಿದೆ. ಅಲ್ಲಿ ಸುಮುಖ್ ಹಾಗೂಮೈತ್ರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸುಮುಖ್ ಅವರ ವಿವಾಹದಲ್ಲಿ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಇದೊಂದು ಅಪರೂಪದ ಮದುವೆ ಎಂದು ಅನಿಸಿಕೊಂಡಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಸುಮುಖ್ ಅವರು ‘ಮನದ ಕಡಲು’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಕಳೆದ ವರ್ಷ ಮಾರ್ಚ್ 28ರಂದು ರಿಲೀಸ್ ಆಯಿತು. ಯೋಗರಾಜ್ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು.

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



