AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳಿನ ಸ್ಟಾರ್ ನಿರ್ದೇಶಕನ ಜೊತೆಗೆ ಕೈಜೋಡಿಸಿದ ಜೂ ಎನ್​​ಟಿಆರ್

‘ಡ್ರ್ಯಾಗನ್’ ಸಿನಿಮಾದ ಬಗ್ಗೆ ಖುದ್ದು ಜೂ ಎನ್​​ಟಿಆರ್​​ ಗೆ ಹಾಗೂ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ‘ಡ್ರ್ಯಾಗನ್’ ಸಿನಿಮಾದ ಬಳಿಕವೂ ಸಹ ಜೂ ಎನ್​​ಟಿಆರ್ ಅವರಿಗೆ ಸಾಕಷ್ಟು ಒಳ್ಳೆಯ ಲೈನಪ್​​ಗಳು ಇವೆ. ವಿಶೇಷವಾಗಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಭರ್ಜರಿ ಆಕ್ಷನ್ ಸಿನಿಮಾನಲ್ಲಿ ಜೂ ಎನ್​​ಟಿಆರ್ ನಟನೆ ಮಾಡಲಿದ್ದಾರೆ. ಅದರ ಬಳಿಕ ಜೂ ಎನ್​ಟಿಆರ್ ನಟಿಸಲಿರುವ ಸಿನಿಮಾವನ್ನು ತಮಿಳಿನ ಸ್ಟಾರ್ ನಿರ್ದೇಶಕರೊಬ್ಬರು ನಿರ್ದೇಶನ ಮಾಡುತ್ತಿರುವುದು ಮತ್ತೊಂದು ವಿಶೇಷ.

ತಮಿಳಿನ ಸ್ಟಾರ್ ನಿರ್ದೇಶಕನ ಜೊತೆಗೆ ಕೈಜೋಡಿಸಿದ ಜೂ ಎನ್​​ಟಿಆರ್
Jr Ntr
ಮಂಜುನಾಥ ಸಿ.
|

Updated on: Oct 17, 2026 | 4:46 PM

Share

ಮುಖ್ಯಾಂಶಗಳು

  • ಜೂ ಎನ್​​ಟಿಆರ್ ಪ್ರಸ್ತುತ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
  • ಅದಾದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ
  • ಅದಾದ ಬಳಿಕ ಅವರು ತಮಿಳಿನ ನಿರ್ದೇಶಕನ ಸಿನಿಮಾನಲ್ಲಿ ನಟಿಸಲಿದ್ದಾರೆ.

ಜೂ ಎನ್​​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್​ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಖುದ್ದು ಜೂ ಎನ್​​ಟಿಆರ್​​ ಗೆ ಹಾಗೂ ಅವರ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ‘ಡ್ರ್ಯಾಗನ್’ ಸಿನಿಮಾದ ಬಳಿಕವೂ ಸಹ ಜೂ ಎನ್​​ಟಿಆರ್ ಅವರಿಗೆ ಸಾಕಷ್ಟು ಒಳ್ಳೆಯ ಲೈನಪ್​​ಗಳು ಇವೆ. ವಿಶೇಷವಾಗಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಭರ್ಜರಿ ಆಕ್ಷನ್ ಸಿನಿಮಾನಲ್ಲಿ ಜೂ ಎನ್​​ಟಿಆರ್ ನಟನೆ ಮಾಡಲಿದ್ದಾರೆ. ಅದರ ಬಳಿಕ ಜೂ ಎನ್​ಟಿಆರ್ ನಟಿಸಲಿರುವ ಸಿನಿಮಾವನ್ನು ತಮಿಳಿನ ಸ್ಟಾರ್ ನಿರ್ದೇಶಕರೊಬ್ಬರು ನಿರ್ದೇಶನ ಮಾಡುತ್ತಿರುವುದು ಮತ್ತೊಂದು ವಿಶೇಷ.

ಜೂ ಎನ್​ಟಿಆರ್ ಅವರು ತ್ರಿವಿಕ್ರಮ್ ಶ್ರೀನಿವಾಸ್ ಬಳಿಕ ನಟಿಸಲಿರುವ ಹೊಸ ಸಿನಿಮಾ ಅನ್ನು ತಮಿಳಿನ ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿದ್ದಾರೆ. ರಜನೀಕಾಂತ್ ನಿರ್ದೇಶನದ ‘ಜೈಲರ್’ ಮತ್ತು ‘ಜೈಲರ್ 2’ ಸಿನಿಮಾಗಳನ್ನು ನಿರ್ದೇಶಿಸಿರುವ ನೆಲ್ಸನ್ ಪಕ್ಕಾ ಆಕ್ಷನ್, ಮಾಸ್ ಎಂಟರ್ಟೈನರ್​​ಗಳನ್ನು ನೀಡುವುದರಲ್ಲಿ ನಿಸ್ಸೀಮರು. ಈಗ ಅವರು ಜೂ ಎನ್​ಟಿಆರ್ ಜೊತೆಗೆ ಕೈ ಜೋಡಿಸಿದ್ದು, ಸಿನಿಮಾದ ಯೋಜನೆ ಬಹುತೇಕ ಅಂತಿಮಗೊಂಡಿದೆ.

ಅಸಲಿಗೆ 2025ರಲ್ಲೇ ನೆಲ್ಸನ್ ಅವರು ಜೂ ಎನ್​​ಟಿಆರ್​​ಗಾಗಿ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಆದರೆ ಜೂ ಎನ್​​ಟಿಆರ್ ಅವರು ‘ಡ್ರ್ಯಾಗನ್’ ಸಿನಿಮಾನಲ್ಲಿ ಬ್ಯುಸಿಯಾಗಿದ್ದ ಕಾರಣದಿಂದಾಗಿ ಆ ಸಿನಿಮಾ ಯೋಜನೆ ಮುಂದೂಡಲ್ಪಟ್ಟಿತ್ತು. ಆ ಬಳಿಕ ಹರಿದಾಡಿದ್ದ ಕೆಲ ಸುದ್ದಿಗಳ ಪ್ರಕಾರ, ನೆಲ್ಸನ್ ಹಾಗೂ ಜೂ ಎನ್​​ಟಿಆರ್ ಸಿನಿಮಾ ಚರ್ಚೆಯ ಹಂತದಲ್ಲಿಯೇ ನಿಂತು ಹೋಗಿದೆ ಎಂದೆಲ್ಲ ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಜೂ ಎನ್​​ಟಿಆರ್ ಅವರು ನೆಲ್ಸನ್ ಜೊತೆಗೆ ಕೆಲಸ ಮಾಡುವ ವಿಷಯವನ್ನು ಖುದ್ದು ನಿರ್ಮಾಪಕ ನಾಗವಂಶಿ ಅವರೇ ಖಚಿತಪಡಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳವನ್ನು ಅವರೇ ಹೂಡಲಿದ್ದಾರೆ.

ಇದನ್ನೂ ಓದಿ:ಜೂ ಎನ್​​ಟಿಆರ್ ಹೊಸ ಸಿನಿಮಾದ ಬಗ್ಗೆ ಹೊರಬಿತ್ತು ಪ್ರಮುಖ ಅಪ್​​ಡೇಟ್

ಜೂ ಎನ್​​ಟಿಆರ್ ಅವರು ಮುಂದಿನ ಎರಡು ಮೂರು ವರ್ಷಗಳಿಗೆ ಬ್ಯುಸಿ ಆಗಿಬಿಟ್ಟಿದ್ದಾರೆ. ‘ಡ್ರ್ಯಾಗನ್’ ಬಳಿಕ ತ್ರಿವಿಕ್ರಮ್ ಜೊತೆಗೆ ‘ಗಾಡ್ ಆಫ್ ವಾರ್’ ಆ ಬಳಿಕ ನೆಲ್ಸನ್ ಜೊತೆಗೆ ಸಿನಿಮಾ. ಈ ಸಿನಿಮಾಗಳ ಬಳಿಕ ಬಹುಷಃ ‘ದೇವರ 2’ ಸಿನಿಮಾ ಮಾಡಬಹುದು ಎನ್ನಲಾಗುತ್ತಿದೆ. ಇನ್ನುಳಿದಂತೆ ಜೂ ಎನ್​​ಟಿಆರ್ ಅವರು ತಮಿಳಿನ ವೆಟ್ರಿಮಾರನ್ ನಿರ್ದೇಶನದ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ಅದು ಇನ್ನೂ ಖಾತ್ರಿ ಆಗಿಲ್ಲ. ಜೊತೆಗೆ ಹಿಂದಿಯ ಯಶ್ ರಾಜ್ ಫಿಲಮ್ಸ್, ಜೂ ಎನ್​​ಟಿಆರ್ ಅವರಿಗಾಗಿ ಪ್ರತ್ಯೇಕ ಸೋಲೊ ಆಕ್ಷನ್ ಸಿನಿಮಾ ಸಹ ನಿರ್ಮಾಣ ಮಾಡಲಿದೆ ಎಂಬ ಮಾತುಗಳು ಸಹ ಹರಿದಾಡಿದ್ದವು. ಅದೂ ಸಹ ಇನ್ನಷ್ಟೆ ಖಾತ್ರಿ ಆಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
2 ನಿಮಿಷದಲ್ಲಿ 12 ಇಡ್ಲಿ ತಿಂದು ಕಮಾಲ್ ಮಾಡಿದ ಸಂಚಾರಿ ಪೊಲೀಸ್ ಪ್ರವೀಣ್
2 ನಿಮಿಷದಲ್ಲಿ 12 ಇಡ್ಲಿ ತಿಂದು ಕಮಾಲ್ ಮಾಡಿದ ಸಂಚಾರಿ ಪೊಲೀಸ್ ಪ್ರವೀಣ್
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತರಕಾರಿ ಮೂಟೆಗಳ ಕಾರಬಾರು
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತರಕಾರಿ ಮೂಟೆಗಳ ಕಾರಬಾರು
ಬೆಂಗಳೂರಿನಲ್ಲಿ ಎಐ ಕ್ಯಾಮರಾಗಳ ಸರಣಿ ಎಡವಟ್ಟು
ಬೆಂಗಳೂರಿನಲ್ಲಿ ಎಐ ಕ್ಯಾಮರಾಗಳ ಸರಣಿ ಎಡವಟ್ಟು
ಮೂರು ಆಯಾಮಗಳಲ್ಲಿ ಸಿದ್ದರಾಮಯ್ಯ ದೂರಿನ ತನಿಖೆ ಶುರು
ಮೂರು ಆಯಾಮಗಳಲ್ಲಿ ಸಿದ್ದರಾಮಯ್ಯ ದೂರಿನ ತನಿಖೆ ಶುರು
ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: ಈರುಳ್ಳಿ ಹೊತ್ತೊಯ್ದ ಜನರು
ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: ಈರುಳ್ಳಿ ಹೊತ್ತೊಯ್ದ ಜನರು
ಕೊಡಗಿನಲ್ಲಿ ತೀರ್ಥೋದ್ಭವ ಸಂಭ್ರಮ: ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ
ಕೊಡಗಿನಲ್ಲಿ ತೀರ್ಥೋದ್ಭವ ಸಂಭ್ರಮ: ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್‌ಗಳ ಮೇಲೆ ದಾಳಿ ಮುಂದುವರಿಕೆ
ದಸರಾ, ದೀಪಾವಳಿ ಹಿನ್ನೆಲೆ: ಸ್ವೀಟ್ ಶಾಪ್‌ಗಳ ಮೇಲೆ ದಾಳಿ ಮುಂದುವರಿಕೆ