ನಟ ಜೂನಿಯರ್ ಎನ್‌ಟಿಆರ್ ಮುದ್ದಿನ ನಾಯಿ ‘ಬಘೀರಾ’ ನಿಧನ; ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್

ಆರ್ಆರ್ಆರ್ ನಟ ಜೂನಿಯರ್ ಎನ್‌ಟಿಆರ್ ಅವರ ಪ್ರೀತಿಯ ಸಾಕುನಾಯಿ ‘ಬಘೀರಾ’ ನಿಧನವಾಗಿದೆ. ನಾಲ್ಕು ವರ್ಷ ತಮಗೆ ಸಾಥ್ ನೀಡಿದ್ದ ಬಘೀರಾನ ಅಗಲಿಕೆಯಿಂದ ತೀವ್ರ ಭಾವುಕರಾಗಿರುವ ಎನ್‌ಟಿಆರ್, ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಹೆಗಲ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಎನ್‌ಟಿಆರ್ ಅವರಿಗೆ ಈಗ ನಾಯಿಯ ಅಗಲಿಕೆ ತೀವ್ರ ಬೇಸರ ತಂದಿದೆ.

ನಟ ಜೂನಿಯರ್ ಎನ್‌ಟಿಆರ್ ಮುದ್ದಿನ ನಾಯಿ ‘ಬಘೀರಾ’ ನಿಧನ; ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್
ಜೂನಿಯರ್ ಎನ್​ಟಿಆರ್​
Edited By:

Updated on: Aug 20, 2026 | 8:09 AM

ಮುಖ್ಯಾಂಶಗಳು

  • ಕುಟುಂಬದ ಸದಸ್ಯನಂತಿದ್ದ ಬಘೀರಾ ಅಗಲಿಕೆ
  • ಜೂನಿಯರ್ ಎನ್‌ಟಿಆರ್ ಭಾವುಕ ಕಣ್ಣೀರು
  • ಮುದ್ದಿನ ನಾಯಿಯ ನೆನಪಿನಲ್ಲಿ ಗಿಡ ನೆಟ್ಟ ಎನ್‌ಟಿಆರ್

ತೆಲುಗಿನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅವರ (JR NTR) ಮುದ್ದಿನ ಸಾಕುನಾಯಿ ‘ಬಘೀರಾ’ ಇನ್ನಿಲ್ಲ. ನಾಲ್ಕು ವರ್ಷಗಳ ಕಾಲ ತಮ್ಮೊಂದಿಗಿದ್ದ ಬಘೀರಾನ ಅಗಲಿಕೆಯಿಂದ ಎನ್‌ಟಿಆರ್ ತೀವ್ರ ದುಃಖಿತರಾಗಿದ್ದಾರೆ. ಬಘೀರಾನ ಜೊತೆಗಿನ ಅಪರೂಪದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಎನ್‌ಟಿಆರ್ ಬರೆದಿರುವ ಭಾವನಾತ್ಮಕ ಸಾಲುಗಳು ಈಗ ಅಭಿಮಾನಿಗಳ ಕಣ್ಣಂಚಿನಲ್ಲಿ ನೀರು ತರಿಸುತ್ತಿವೆ.

ಬಘೀರಾ ಬರ್ನೀಸ್ ಮೌಂಟೇನ್ ತಳಿಯ ನಾಯಿಯಾಗಿತ್ತು. ಅದರೊಂದಿಗಿನ ಸುಂದರ ನೆನಪುಗಳನ್ನು ಎನ್‌ಟಿಆರ್ ಇನ್‌ಸ್ಟಾಗ್ರಾಮ್‌ನಲ್ಲಿ ನೆನಪಿಸಿಕೊಂಡಿದ್ದಾರೆ. ಬಘೀರಾನ ಸವಿನೆನಪಿನಲ್ಲಿ ಗಿಡವೊಂದನ್ನು ಸಹ ನೆಡಲಾಗಿದೆ. ಈ ಫೋಟೋವನ್ನು ಅವರು ಪೋಸ್ಟ್ ಜೊತೆ ಹಂಚಿಕೊಂಡಿದ್ದಾರೆ.

ನನ್ನ ಜೀವನಕ್ಕೆ ನೀನು ಸಾಕುಪ್ರಾಣಿಯಾಗಿ ಬರಲಿಲ್ಲ. ಕುಟುಂಬದ ಸದಸ್ಯನಾಗಿ ಪ್ರೀತಿ ನೀಡಿದೆ. ನಿನ್ನ ಅಗಲಿಕೆ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ನೀನು ನೀಡಿದ ಪ್ರೀತಿ ಎಂದಿಗೂ ಶಾಶ್ವತ. ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನಾಲ್ಕು ವರ್ಷ ನನ್ನ ಜೊತೆಗಿದ್ದು ಸಂತೋಷ ತಂದಿದೆ. ಮುಕ್ತವಾಗಿ ಓಡಾಡು ನನ್ನ ಪುಟ್ಟ ಮಗುವೇ. ನಿನ್ನನ್ನು ಸದಾ ಪ್ರೀತಿಸುತ್ತೇನೆ ಎಂದು ಎನ್‌ಟಿಆರ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಎನ್‌ಟಿಆರ್‌ – ತ್ರಿವಿಕ್ರಮ್‌ ಕಾಂಬಿನೇಷನ್​ ಸಿನಿಮಾಗೆ ನೋಂದಣಿ ಆಯ್ತು ಎರಡು ಟೈಟಲ್

ಮತ್ತೊಂದೆಡೆ ಎನ್‌ಟಿಆರ್ ಇತ್ತೀಚೆಗೆ ಹೆಗಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ‘ಡ್ರಾಗನ್’ ಸಿನಿಮಾದ ಚಿತ್ರೀಕರಣದ ವೇಳೆ ಅವರಿಗೆ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಗಸ್ಟ್ 13 ರಂದು ಅವರು ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯರು ಅವರಿಗೆ ಸಂಪೂರ್ಣ ವಿಶ್ರಾಂತಿ ಸೂಚಿಸಿದ್ದಾರೆ. ಪ್ರಸ್ತುತ ಅವರು ಪುನಶ್ಚೇತನ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎರಡು ಮೂರು ತಿಂಗಳು ಬೇಕಾಗಬಹುದು. ಎನ್‌ಟಿಆರ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us