AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್‌ಟಿಆರ್‌ – ತ್ರಿವಿಕ್ರಮ್‌ ಕಾಂಬಿನೇಷನ್​ ಸಿನಿಮಾಗೆ ನೋಂದಣಿ ಆಯ್ತು ಎರಡು ಟೈಟಲ್

ಜೂನಿಯರ್ ಎನ್‌ಟಿಆರ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ಹೊಸ ಸಿನಿಮಾಗೆ 'ಗಾಡ್ ಆಫ್ ವಾರ್' ಮತ್ತು 'ದೇವಸೇನಾಪತಿ' ಎಂಬ ಎರಡು ಶೀರ್ಷಿಕೆಗಳು ನೋಂದಣಿಯಾಗಿವೆ. ಎನ್‌ಟಿಆರ್ ಆರ್ಟ್ಸ್ ಸಂಸ್ಥೆ ಈ ಹೆಸರುಗಳನ್ನು ಬುಕ್ ಮಾಡಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದೆ.

ಎನ್‌ಟಿಆರ್‌ - ತ್ರಿವಿಕ್ರಮ್‌ ಕಾಂಬಿನೇಷನ್​ ಸಿನಿಮಾಗೆ ನೋಂದಣಿ ಆಯ್ತು ಎರಡು ಟೈಟಲ್
ಎನ್​ಟಿಆರ್​-ತ್ರಿವಿಕ್ರಮ್ ಶ್ರೀನಿವಾಸ್
ರಾಜೇಶ್ ದುಗ್ಗುಮನೆ
|

Updated on: Aug 19, 2026 | 7:33 AM

Share

ಮುಖ್ಯಾಂಶಗಳು

  • ತ್ರಿವಿಕ್ರಮ್-ಎನ್‌ಟಿಆರ್ ಧಮಾಕಾ
  • ಎರಡು ಮಾಸ್ ಶೀರ್ಷಿಕೆಗಳು
  • ಸಿಂಗಲ್ ಕನ್ಫರ್ಮೇಷನ್ ಬಾಕಿ

ಜೂನಿಯರ್ ಎನ್‌ಟಿಆರ್ (JR NTR) ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ. ಈ ಜೋಡಿಯ ಹೊಸ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗ ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ. ಹಿಟ್ ಸಿನಿಮಾಗಳನ್ನು ನೀಡಿದ ಈ ಜೋಡಿಯ ಚಿತ್ರಕ್ಕೆ ಎರಡು ಟೈಟಲ್ ನೋಂದಣಿ ಆಗಿದೆ ಎಂದು ವರದಿ ಆಗಿದೆ.

ಎನ್‌ಟಿಆರ್‌ ಆರ್ಟ್ಸ್ ನಿರ್ಮಾಣ ಸಂಸ್ಥೆಯು ಎರಡು ಆಕರ್ಷಕ ಶೀರ್ಷಿಕೆಗಳನ್ನು ನೋಂದಾಯಿಸಿದೆ. ‘ಗಾಡ್ ಆಫ್ ವಾರ್’ ಮತ್ತು ‘ದೇವಸೇನಾಪತಿ’ ಎಂಬ ಹೆಸರುಗಳನ್ನು ಬುಕ್ ಮಾಡಲಾಗಿದೆ. ‘ಗಾಡ್ ಆಫ್ ವಾರ್’ ಶೀರ್ಷಿಕೆ ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿತ್ತು. ಈ ಹೆಸರು ಈಗಾಗಲೇ ಅಭಿಮಾನಿಗಳ ಮನ ಗೆದ್ದಿದೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರುವುದರಿಂದ ಟೈಟಲ್ ಹೆಚ್ಚು ಸೂಕ್ತ ಎಂಬ ಮಾತು ಕೇಳಿ ಬಂದಿದೆ.

ಇನ್ನು ‘ದೇವಸೇನಾಪತಿ’ ಎಂಬ ಹೊಸ ಶೀರ್ಷಿಕೆ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಈ ಹೆಸರು ಪೌರಾಣಿಕ ಹಾಗೂ ಮಾಸ್ ಸ್ಪರ್ಶವನ್ನು ಹೊಂದಿದೆ. ಇದು ಚಿತ್ರಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಜೂನಿಯರ್ ಎನ್‌ಟಿಆರ್ ಅವರ ಮಾಸ್ ಇಮೇಜ್‌ಗೆ ಈ ಶೀರ್ಷಿಕೆ ಕೂಡ ಸೂಕ್ತವಾಗಿದೆ.

ಅಂದಹಾಗೆ, ಈ ಹಿಂದೆ ಬಂದ ‘ಅರವಿಂದ ಸಮೇದ ವೀರ ರಾಘವ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಬಾಕ್ಸ್ ಆಫೀಸ್ ಗೆಲುವಿನ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ. ಹೀಗಾಗಿ ಈ ಹೊಸ ಚಿತ್ರದ ಮೇಲಿನ ನಿರೀಕ್ಷೆಗಳು ಮುಗಿಲ ಮುಟ್ಟಿವೆ. ಪ್ರಸ್ತುತ ಇಬ್ಬರೂ ತಮ್ಮ ಹಳೆಯ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಕಮಿಟ್‌ಮೆಂಟ್‌ಗಳು ಮುಗಿದ ತಕ್ಷಣ ಈ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ: ಜೂನಿಯರ್ ಎನ್‌ಟಿಆರ್ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ; ಸ್ವತಃ ಅಪ್‌ಡೇಟ್ ನೀಡಿದ ನಟ

ತಂಡವು ಯಾವ ಶೀರ್ಷಿಕೆಯನ್ನು ಅಂತಿಮಗೊಳಿಸಲಿದೆ ಎಂಬ ಅಧಿಕೃತ ಮಾಹಿತಿ ಇನ್ನು ಬರಬೇಕಿದೆ. ಆದರೆ ಎರಡರಲ್ಲಿ ಯಾವುದೇ ಶೀರ್ಷಿಕೆ ಆಯ್ಕೆಯಾದರೂ ಸಿನಿಮಾ ಅದ್ಧೂರಿಯಾಗಿರಲಿದೆ. ನಟ ಎನ್‌ಟಿಆರ್ ಅವರನ್ನು ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ತ್ರಿವಿಕ್ರಮ್ ತೋರಿಸಲಿದ್ದಾರೆ. ಈ ಮಾಸ್ ಕಾಂಬಿನೇಷನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವುದು ಖಚಿತ. ಹೆಚ್ಚಿನ ಅಧಿಕೃತ ಅಪ್‌ಡೇಟ್‌ಗಳಿಗಾಗಿ ಕಾಯಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us