Junior NTR: ಅಬ್ಬಾ, RRR​ ಚಿತ್ರದಲ್ಲಿ ಹೀರೋಗೂ ಇದೆ ಐಡಿ ಕಾರ್ಡ್; ಅದಕ್ಕೆ ರಾಜಮೌಳಿ ರಿಯಾಕ್ಷನ್ ಏನು?

| Updated By: shivaprasad.hs

Updated on: Aug 06, 2021 | 8:00 PM

SS Rajamouli: ತೆಲುಗಿನ ಜನಪ್ರಿಯ ನಟ, ಆರ್​ಆರ್​ಆರ್ ಚಿತ್ರದ ನಾಯಕರಲ್ಲೊಬ್ಬರಾದ ಜೂನಿಯರ್ ಎನ್​ಟಿಆರ್ ಅವರಿಗೆ ಶೂಟಿಂಗ್ ಸೆಟ್​ನಲ್ಲಿ ಮೊದಲ ಬಾರಿಗೆ ಐಡಿ ಕಾರ್ಡ್​ ಅನ್ನು ನೀಡಲಾಗಿದೆ. ನಿರ್ದೇಶಕ ರಾಜಮೌಳಿ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿರುವ ಜೂನಿಯರ್ ಎನ್​ಟಿಆರ್, ಅದಕ್ಕೆ ಅಚ್ಚರಿಯ ಅಡಿಬರಹವನ್ನೂ ನೀಡಿದ್ದಾರೆ.

Junior NTR: ಅಬ್ಬಾ, RRR​ ಚಿತ್ರದಲ್ಲಿ ಹೀರೋಗೂ ಇದೆ ಐಡಿ ಕಾರ್ಡ್; ಅದಕ್ಕೆ ರಾಜಮೌಳಿ ರಿಯಾಕ್ಷನ್ ಏನು?
ಜೂನಿಯರ್ ಎನ್​ಟಿಆರ್ ಮತ್ತು ರಾಜಮೌಳಿ ತಮ್ಮ ಐಡಿ ಕಾರ್ಡ್​ಗಳೊಂದಿಗೆ
Follow us on

ಆರ್​ಆರ್​ಆರ್ ಚಿತ್ರತಂಡ ಸದ್ಯ ಉಕ್ರೇನ್​ನಲ್ಲಿ ಬೀಡುಬಿಟ್ಟಿದೆ. ಚಿತ್ರದ ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಉಕ್ರೇನ್ ದೇಶಕ್ಕೆ ತೆರಳಿರುವ ಚಿತ್ರತಂಡ ಸದ್ಯ ಕೊರೊನಾ ಸಂದರ್ಭದ ನಡುವೆಯೂ ಚಿತ್ರೀಕರಣ ನಡೆಸುತ್ತಿದೆ. ಉಕ್ರೇನ್​ನಲ್ಲಿ ಚಿತ್ರತಂಡದ ಎಲ್ಲರಿಗೂ ಐಡಿ ಕಾರ್ಡ್ ಅನ್ನು ನೀಡಲಾಗಿದ್ದು, ಎಲ್ಲರಿಗೂ ಅದನ್ನು ಧರಿಸುವುದು ಕಡ್ಡಾಯವಾಗಿದೆ. ಇದಕ್ಕೆ ನಿರ್ದೇಶಕ ರಾಜಮೌಳಿ ಹಾಗೂ ಜೂನಿಯರ್ ಎನ್​ಟಿಆರ್ ಅವರೂ ಹೊರತಾಗಿಲ್ಲ. ಗುರುವಾರ(ಆಗಸ್ಟ್ 5) ಜೂ.ಎನ್​ಟಿಆರ್ ಇನ್ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಐಡಿ ಕಾರ್ಡ್ ಫೊಟೊವನ್ನು ಬಹಿರಂಗಪಡಿಸಿದ್ದಾರೆ.

ಜೂನಿಯರ್ ಎನ್​ಟಿಆರ್ ಐಡಿ ಕಾರ್ಡ್ ಅನ್ನು ಧರಿಸಿ, ಫೊಟೊಗೆ ಪೋಸ್ ನೀಡಿದ್ದಾರೆ. ಎಲ್ಲರನ್ನೂ ಸೆಳೆದಿರುವುದು ಅವರ ಹಿಂದೆ ಕುಳಿತಿರುವ ರಾಜಮೌಳಿ ಅವರ ಭಂಗಿ. ನನಗೂ ಐಡಿ ಕಾರ್ಡ್ ಇದೆ ಎಂಬ ಭಾವದಲ್ಲಿ ತಮ್ಮ ಐಡಿ ಕಾರ್ಡ್​ಅನ್ನೂ ರಾಜಮೌಳಿ ಎತ್ತಿ ತೋರಿಸುತ್ತಿದ್ದಾರೆ. ಜೂ.ಎನ್​ಟಿಆರ್ ಹಂಚಿಕೊಂಡಿರುವ ಮತ್ತೊಂದು ಫೊಟೊದಲ್ಲಿ ತಮ್ಮ ಐಡಿ ಕಾರ್ಡ್​ನ ಕ್ಲೋಸ್ ಅಪ್ ಫೊಟೊವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ನಂದಮೂರಿ ತಾರಕ  ರಾಮ ರಾವ್ (ಎನ್​ಟಿಆರ್), ಹೀರೊ ಎಂದು ಬರೆಯಲಾಗಿದೆ.

ಜೂನಿಯರ್ ಎನ್​ಟಿಆರ್ ಹಂಚಿಕೊಂಡ ಚಿತ್ರ:

ಸದ್ಯದಲ್ಲಿ ಐಡಿ ಕಾರ್ಡ್  ಧರಿಸೇ ಇರಲಿಲ್ಲವಂತೆ ಜೂ.ಎನ್​ಟಿಆರ್!:
ತಾವು ಹಂಚಿಕೊಂಡ ಚಿತ್ರಕ್ಕೆ ಅಡಿಬರಹವನ್ನೂ ನೀಡಿರುವ ಜೂನಿಯರ್ ಎನ್​ಟಿಆರ್, ತಾವು ಇತ್ತೀಚೆಗೆ ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲ. ಇದೇ ಮೊದಲ ಬಾರಿ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಅದರಲ್ಲೂ ಚಿತ್ರೀಕರಣದ ಸೆಟ್​ಗಳಲ್ಲಿ ಅವರು ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲವಂತೆ. ಬಿಗ್​ ಬಜೆಟ್​ನಲ್ಲಿ ಆರ್​ಆರ್​ಆರ್ ತಯಾರಾಗುತ್ತಿದ್ದು, ಹಲವಾರು ಕ್ಷೇತ್ರಗಳಲ್ಲಿ ಹೊಸತನ್ನು ಪರಿಚಯಿಸುತ್ತಿದೆ. ಅದಕ್ಕೆ ಜೂನಿಯರ್ ಎನ್​ಟಿಆರ್ ಅವರಿಗೆ ಐಡಿ ಕಾರ್ಡ್ ಕೊಟ್ಟಿದ್ದನ್ನೂ ಸೇರಿಸಿಕೊಳ್ಳಬಹುದು ಬಿಡಿ ಎಂದು ಅಭಿಮಾನಿಗಳು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಉಕ್ರೇನ್​ನಲ್ಲಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಉಕ್ರೇನ್​ಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭವನ್ನೂ ಚಿತ್ರತಂಡ ಈ ಮೊದಲು ಹಂಚಿಕೊಂಡಿತ್ತು. ಸುಮಾರು 450ಕೋಟಿ ಬಜೆಟ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಇದನ್ನೂ ಓದಿ:

Hombale Films: ಹೊಂಬಾಳೆ ಫಿಲ್ಮ್ಸ್​ನ 11ನೇ ಚಿತ್ರ ಕಾಂತಾರ; ನಿರ್ದೇಶಕ ಮತ್ತು ನಾಯಕನಾಗಿ ರಿಷಬ್ ಶೆಟ್ಟಿ

ದಕ್ಷಿಣ ಭಾರತಕ್ಕೆ ವಲಸೆ ಹೊರಟ ಬಾಲಿವುಡ್​ನ ಖ್ಯಾತ ನಟಿಯರು; ಅದ್ದೂರಿ ಚಿತ್ರಗಳಲ್ಲಿ ಬಣ್ಣಹಚ್ಚಲು ತಯಾರು!

(Junior NTR shares pics of his ID card in RRR sets and see Rajamouli’s reaction)

Published On - 1:20 pm, Fri, 6 August 21