ಗೆಳೆಯರೊಟ್ಟಿಗೆ ಮ್ಯಾಚ್ ವೀಕ್ಷಿಸಿದ ಕಿಚ್ಚ, ಪಂದ್ಯ ಗೆದ್ದ ಬಳಿಕ ಸಂಭ್ರಮಿಸಿದ್ದು ಹೀಗೆ
ಕಿಚ್ಚ ಸುದೀಪ್ ಒಳ್ಳೆಯ ನಟರಾಗಿರುವ ಜೊತೆಗೆ ಅಪ್ರತಿಮ ಕ್ರಿಕೆಟ್ ಪ್ರೇಮಿಯೂ ಹೌದು, ನಿನ್ನೆ ರಾತ್ರಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ಫೈನಲ್ ಅನ್ನು ಗೆಳೆಯರೊಟ್ಟಿಗೆ ಕೂತು ವೀಕ್ಷಿಸಿರುವ ಸುದೀಪ್, ಪಂದ್ಯ ಗೆದ್ದ ಬಳಿಕ ಗೆಳೆಯರೊಟ್ಟಿಗೆ ಸಂಭ್ರಮಿಸಿದ್ದು ಹೀಗೆ, ಇಲ್ಲಿದೆ ವಿಡಿಯೋ...
ನಟ ಕಿಚ್ಚ ಸುದೀಪ್ ಅತ್ಯುತ್ತಮ ನಟ, ನಿರ್ದೇಶಕ ಆಗಿರುವ ಜೊತೆಗೆ ಅತ್ಯುತ್ತಮ ಕ್ರಿಕೆಟ್ ಪ್ರೇಮಿ ಮತ್ತು ಕ್ರಿಕೆಟ್ ಆಟಗಾರ ಸಹ. ಐಪಿಎಲ್ ಹಾಗೂ ಭಾರತೀಯ ಕ್ರಿಕೆಟ್ ತಂಡ ಆಡುವ ಪಂದ್ಯಗಳನ್ನು ತಪ್ಪದೇ ವೀಕ್ಷಿಸುತ್ತಾರೆ. ನಿನ್ನೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನು ಸಹ ತಮ್ಮ ಗೆಳೆಯರೊಟ್ಟಿಗೆ ಕೂತು ಬಿಂದಾಸ್ ಆಗಿ ನೋಡಿದ್ದಾರೆ ಸುದೀಪ್. ಚಕ್ರವರ್ತಿ ಚಂದ್ರಚೂಡ್, ವಿನಯ್ ಗೌಡ ಇನ್ನೂ ಕೆಲವು ಆತ್ಮೀಯ ಗೆಳೆಯರ ಜೊತೆಗೆ ಸುದೀಪ್ ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯ ಗೆದ್ದ ಬಳಿಕ ಗೆಳೆಯರೊಟ್ಟಿಗೆ ಇಂಡಿಯಾ ಇಂಡಿಯಾ ಎಂದು ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ. ಸುದೀಪ್ ಹಾಗೂ ಗೆಳೆಯರ ಸಂಭ್ರಮಾಚರಣೆ ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos