AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

52 ಲಕ್ಷಕ್ಕೆ ಆಫೀಸ್​ ಖರೀದಿಸಿ 5 ಕೋಟಿ ರೂಪಾಯಿಗೆ ಮಾರಿದ ಮಾಧುರಿ ದೀಕ್ಷಿತ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮುಂಬೈನ ಅಂಧೇರಿಯಲ್ಲಿರುವ ತಮ್ಮ ಕಮರ್ಷಿಯಲ್ ಆಫೀಸ್ ಅನ್ನು 4.85 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. 2008 ರಲ್ಲಿ ಕೇವಲ 52.5 ಲಕ್ಷಕ್ಕೆ ಖರೀದಿಸಿದ್ದ ಈ ಆಸ್ತಿಯಿಂದ ಅವರಿಗೆ ಶೇಕಡಾ 824 ರಷ್ಟು ಭಾರಿ ಲಾಭ ಸಿಕ್ಕಿದ್ದು, ರಿಯಲ್ ಎಸ್ಟೇಟ್ ವಲಯದಲ್ಲಿ ಸುದ್ದಿ ಮಾಡಿದೆ.

52 ಲಕ್ಷಕ್ಕೆ ಆಫೀಸ್​ ಖರೀದಿಸಿ 5 ಕೋಟಿ ರೂಪಾಯಿಗೆ ಮಾರಿದ ಮಾಧುರಿ ದೀಕ್ಷಿತ್
ಮಾಧುರಿ ದೀಕ್ಷಿತ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 05, 2026 | 8:15 AM

Share

ಮುಖ್ಯಾಂಶಗಳು

  • ಮುಂಬೈ ಆಫೀಸ್ ಮಾರಿ ಕೋಟಿ ಕೋಟಿ ಗಳಿಸಿದ ಮಾಧುರಿ
  • ರಿಯಲ್ ಎಸ್ಟೇಟ್‌ನಲ್ಲಿ ಭಾರಿ ಲಾಭ
  • 2008ರಲ್ಲಿ ಹೂಡಿದ್ದ ಹಣಕ್ಕೆ ಶೇಕಡಾ 824 ಲಾಭ

ಬಾಲಿವುಡ್‌ನ ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾರಿ ಲಾಭ ಗಳಿಸಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ತಮ್ಮ ಕಮರ್ಷಿಯಲ್ ಆಫೀಸ್ ಒಂದನ್ನು ಅವರು ಬರೋಬ್ಬರಿ 4.85 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸುಮಾರು 18 ವರ್ಷಗಳ ಹಿಂದೆ ಕಡಿಮೆ ಬೆಲೆಗೆ ಖರೀದಿಸಿದ್ದ ಆಸ್ತಿ ಇದೀಗ ಶೇಕಡಾ 824 ರಷ್ಟು ಭಾರಿ ಪ್ರಮಾಣದ ರಿಟರ್ನ್ಸ್ ತಂದುಕೊಟ್ಟಿದೆ.

18 ವರ್ಷಗಳ ಹಿಂದೆ ಮಾಡಿದ್ದ ಹೂಡಿಕೆ

ಮಾಧುರಿ ದೀಕ್ಷಿತ್ ಅವರು ಈ ಆಫೀಸ್ ಅನ್ನು ಮೇ 2008 ರಲ್ಲಿ ಖರೀದಿಸಿದ್ದರು. ಆಗ ಇದರ ಬೆಲೆ ಕೇವಲ 52.5 ಲಕ್ಷ ರೂಪಾಯಿ ಆಗಿತ್ತು. ಓಶಿವಾರಾದ ಮೊರ್ಯಾ ಲ್ಯಾಂಡ್‌ಮಾರ್ಕ್-II ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಈ ಆಫೀಸ್ ಇದೆ. ಇದು 1,594 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಮೂರು ಕಾರ್ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

ಆಫೀಸ್ ಖರೀದಿಸಿದ ಫ್ರೇಮ್ಸ್ ಪ್ರೊಡಕ್ಷನ್

ಈ ಪ್ರಾಪರ್ಟಿಯನ್ನು ‘ಫ್ರೇಮ್ಸ್ ಪ್ರೊಡಕ್ಷನ್ ಕಂಪನಿ ಪ್ರೈವೇಟ್ ಲಿಮಿಟೆಡ್’ ಖರೀದಿಸಿದೆ. ಈ ವ್ಯವಹಾರಕ್ಕಾಗಿ 29.10 ಲಕ್ಷ ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ. ಮುಂಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವಾಣಿಜ್ಯ ಆಸ್ತಿಗಳ ಮೌಲ್ಯ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಈ ವ್ಯವಹಾರ ಸಾಕ್ಷಿಯಾಗಿದೆ.

ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಆದ ಮಾಧುರಿ ದೀಕ್ಷಿತ್; ಹೊಸ ಅವತಾರದಲ್ಲಿ ಧಕ್ ಧಕ್ ಗರ್ಲ್ 

ಮಾಸಿಕ ಲಕ್ಷ ಲಕ್ಷ ಬಾಡಿಗೆ ಗಳಿಕೆ

ಕೆಲವು ತಿಂಗಳುಗಳ ಹಿಂದಷ್ಟೇ ಮಾಧುರಿ ಮತ್ತೊಂದು ಆಸ್ತಿಯನ್ನು ಬಾಡಿಗೆಗೆ ನೀಡಿದ್ದರು. ಮಾರ್ಚ್ 2026 ರಲ್ಲಿ ಮುಂಬೈನ ಲೋವರ್ ಪರೇಲ್‌ನಲ್ಲಿರುವ ಆಫೀಸ್ ಅನ್ನು ಐದು ವರ್ಷಗಳ ಅವಧಿಗೆ ಲೀಸ್‌ಗೆ ಕೊಟ್ಟಿದ್ದಾರೆ. ಇದರಿಂದ ಅವರಿಗೆ ಪ್ರತಿ ತಿಂಗಳು 4.25 ಲಕ್ಷ ರೂಪಾಯಿ ಬಾಡಿಗೆ ಸಿಗಲಿದ್ದು, ಐದು ವರ್ಷಗಳಲ್ಲಿ ಒಟ್ಟು 2.81 ಕೋಟಿ ರೂಪಾಯಿ ಆದಾಯ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ