ತಪ್ಪು ಮಾಡಿದ್ರೆ ಶಿಕ್ಷೆ ಖಚಿತ; ಲ್ಯಾಗ್​ ಮಂಜುಗೆ ಬಿಗ್​ ಬಾಸ್​ ಕೊಟ್ರು ಕಠಿಣ ಪನಿಶ್​ಮೆಂಟ್​, ಇನ್ಮುಂದೆ ಕಷ್ಟವಿದೆ!

|

Updated on: Mar 22, 2021 | 8:17 PM

ಕಳೆದ ವಾರ ದಿವ್ಯಾ ಸುರೇಶ್​ ಹಾಗೂ ಮಂಜು ಹರಟೆ ಹೊಡೆಯುತ್ತಿದ್ದರು. ಆಗ ಮಂಜು ಕಾಫಿ ಕಪ್​ ಇಡೋಕೆ ಹೋಗಿ ಕೆಳಕ್ಕೆ ಬೀಳಿಸಿದ್ದರು. ಆ ಕಪ್​ ಬಿದ್ದ ರಭಸಕ್ಕೆ ಒಡೆದೇ ಹೋಗಿತ್ತು. ಇದಕ್ಕೆ ಮಂಜುಗೆ ಶಿಕ್ಷೆ ಆಗಿದೆ.

ತಪ್ಪು ಮಾಡಿದ್ರೆ ಶಿಕ್ಷೆ ಖಚಿತ; ಲ್ಯಾಗ್​ ಮಂಜುಗೆ ಬಿಗ್​ ಬಾಸ್​ ಕೊಟ್ರು ಕಠಿಣ ಪನಿಶ್​ಮೆಂಟ್​, ಇನ್ಮುಂದೆ ಕಷ್ಟವಿದೆ!
ಮಂಜು ಪಾವಗಡ
Follow us on

ಬಿಗ್​ ಬಾಸ್​ ಮನೆಯಲ್ಲಿ ಯಾರೇ ತಪ್ಪು ಮಾಡಲಿ ಅವರಿಗೆ ಶಿಕ್ಷೆ ಕಟ್ಟಿಟ್ಟಬುತ್ತಿ. ತಪ್ಪು ಮಾಡಿದವರನ್ನು ಬಿಗ್​ ಬಾಸ್​ ಗಮನಿಸುತ್ತಿರುತ್ತಾರೆ. ಈ ಬಾರಿಯ ದೊಡ್ಡ ಮನೆಯಲ್ಲಿ ತಪ್ಪು ಮಾಡಿದ ಮಂಜುಗೆ ಬಿಗ್ ಬಾಸ್​ ಕಠಿಣ ಶಿಕ್ಷೆ ಒಂದನ್ನು ನೀಡಿದ್ದಾರೆ.

ಕಳೆದ ವಾರ ದಿವ್ಯಾ ಸುರೇಶ್​ ಹಾಗೂ ಮಂಜು ಹರಟೆ ಹೊಡೆಯುತ್ತಿದ್ದರು. ಆಗ ಮಂಜು ಕಾಫಿ ಕಪ್​ ಇಡೋಕೆ ಹೋಗಿ ಕೆಳಕ್ಕೆ ಬೀಳಿಸಿದ್ದರು. ಆ ಕಪ್​ ಬಿದ್ದ ರಭಸಕ್ಕೆ ಒಡೆದೇ ಹೋಗಿತ್ತು. ಬಿಗ್​ ಬಾಸ್​ ಕೊಟ್ಟ ಕಪ್​ಅನ್ನು ಒಡೆದ ನಂತರ ಮಂಜುಗೆ ಅತೀವವಾಗಿ ಅಪರಾಧ ಮನೋಭಾವನೆ ಕಾಡಿತ್ತು. ಕಪ್​ ಒಡೆದು ಹಾಕಿದ್ದಕ್ಕೆ ಸಾರಿ ಬಿಗ್​ ಬಾಸ್​. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಗ್​ ಬಾಸ್​ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದರು. ನಾನು ಬೇಕಂತಲೇ ಇದನ್ನು ಒಡೆದಿಲ್ಲ. ಮಿಸ್​ ಆಗಿ ಬಿದ್ದು ಹೋಗಿದೆ. ಯಾರಿಗೂ ಗೊತ್ತಾಗದಂತೆ ಇದನ್ನು ಬಚ್ಚಿಡುತ್ತೇನೆ. ಆಮೇಲೆ ಸ್ಪರ್ಧಿಗಳ ಬಳಿ ನನ್ನ ಕಪ್​ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದರು ಮಂಜು.

ಈ ತಪ್ಪಿಗೆ ಮಂಜುಗೆ ಬಿಗ್​ ಬಾಸ್​ ಶಿಕ್ಷೆ ನೀಡಿದ್ದಾರೆ. ಮಂಜುಗೆ ಪುಟಾಣಿ ಕಪ್​ ಒಂದನ್ನು ನೀಡಲಾಗಿದೆ. ಬಿಗ್​ ಬಾಸ್ ಮುಂದಿನ ಆದೇಶದವರೆಗೂ ನೀರು, ಟೀ-ಕಾಫಿ ಕುಡಿಯೋಕೆ ಇದೇ ಕಪ್ ಬಳಕೆ ಮಾಡಬೇಕು ಎಂದು ಬಿಗ್​ ಬಾಸ್​ ಆದೇಶಿಸಿದೆ. ಬಿಗ್​ ಬಾಸ್​ ನೀಡಿರೋ ಹೊಸಾ ಕಪ್​ ತುಂಬಾನೇ ಸಣ್ಣದಾಗಿದೆ. ಅದರಲ್ಲಿ ಬರೋದು ಒಂದು ಸಿಪ್​ ಮಾತ್ರ. ಇದನ್ನು ನೋಡಿ ಮಂಜು ಕಂಗಾಲಾಗಿದ್ದಾರೆ. ಮನೆ ಮಂದಿ ಮಂಜುಗೆ ಇನ್ಮುಂದೆ ಕಷ್ಟವಿದೆ ಎಂದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಕೂದಲಿಗೆ ಕತ್ತರಿ! ಇದು ಹೊಸಾ ಪನಿಶ್​ಮೆಂಟ್​?