ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ ಚಿರಂಜೀವಿ, ಹೊಸ ರೀತಿಯ ಸಿನಿಮಾಕ್ಕೆ ಸಹಿ

|

Updated on: Dec 04, 2024 | 2:42 PM

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಸತತ ಸೋಲು ಕಾಣುತ್ತಿದ್ದಾರೆ. ಅವರ ಕತೆಯ ಆಯ್ಕೆಯಲ್ಲಿ ಸಮಸ್ಯೆ ಇದೆ ಎಂದು ಅಭಿಮಾನಿಗಳು ದೂರುತ್ತಲೇ ಇದ್ದಾರೆ. ಇದೀಗ ಹೊಸ ರೀತಿಯ ಕತೆ ಹೆಣೆಯುವ ನಿರ್ದೇಶಕನ ಕೈ ಹಿಡಿದಿದ್ದಾರೆ ಮೆಗಾಸ್ಟಾರ್ ಚಿರಂಜೀವಿ.

ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ ಚಿರಂಜೀವಿ, ಹೊಸ ರೀತಿಯ ಸಿನಿಮಾಕ್ಕೆ ಸಹಿ
Megastar Chiranjeevi
Follow us on

ಮೆಗಾಸ್ಟಾರ್ ಚಿರಂಜೀವಿ ಸತತ ಸೋಲುಗಳನ್ನು ಕಾಣುತ್ತಿದ್ದಾರೆ. ಅವರ 50 ವರ್ಷದ ವೃತ್ತಿ ಜೀವನದಲ್ಲಿ ಇಷ್ಟು ಸರಣಿ ಫ್ಲಾಪ್ ಸಿನಿಮಾಗಳನ್ನು ನೀಡಿಲ್ಲವೇನೋ. 2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಫ್ಲಾಪ್ ಆಯ್ತು. ಅದಾದ ಬಳಿಕ ಬಿಡುಗಡೆ ಆದ ಎರಡು ಸಿನಿಮಾಗಳು ಸಹ ಫ್ಲಾಪ್ ಆದವು. ಚಿರಂಜೀವಿ ಇನ್ನೂ ಹಳೆಯ ಕಾಲದ ಮಾದರಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಹೊಸ ಮಾದರಿಯ ಸಿನಿಮಾಗಳತ್ತ ಗಮನ ಹರಿಸಬೇಕು ಎಂದು ಅವರ ಅಭಿಮಾನಿಗಳು, ವಿಮರ್ಶಕರು ಒತ್ತಾಯಿಸಿದ್ದರು. ಇದೀಗ ಕೊನೆಗೂ ಚಿರಂಜೀವಿ ಭಿನ್ನ ಸಿನಿಮಾ ಒಂದಕ್ಕೆ ಕೈ ಹಾಕಿದ್ದಾರೆ.

ನಾನಿ ನಟನೆಯ ‘ದಸರಾ’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿರುವ ನಿರ್ದೆಶಕ ಶ್ರೀಕಾಂತ್ ಒಡೆಲ ನಿರ್ದೇಶನದ ಹೊಸ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾಕ್ಕೆ ನಟ ನಾನಿ ಬಂಡವಾಳ ಹೂಡುತ್ತಿದ್ದಾರೆ. ಜೊತೆಗೆ ಪುಟ್ಟ ಪಾತ್ರದಲ್ಲಿ ನಟನೆ ಸಹ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು, ಪೋಸ್ಟರ್ ಗಮನ ಸೆಳೆಯುತ್ತಿದೆ. ಪಕ್ಕಾ ವಯಲೆನ್ಸ್ ಇರುವ ಕತೆಯನ್ನು ಸಿನಿಮಾ ಒಳಗೊಂಡಿರುವುದು ಪೋಸ್ಟರ್​ನಿಂದ ತಿಳಿದು ಬರುತ್ತಿದೆ.

ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಶ್ರೀಕಾಂತ್ ಒಡೆಲ ಇಬ್ಬರೂ ಕೈಯನ್ನು ರಕ್ತದಲ್ಲಿ ಅದ್ದಿ ಪರಸ್ಪರ ಕೈ ಹಿಡಿದುಕೊಂಡು ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಇದು ರಕ್ತದಲ್ಲಿ ಮಾಡಿದ ಪ್ರತಿಜ್ಞೆ’ ಎಂಬ ಅಡಿಬರಹ ಕೊಟ್ಟಿದ್ದಾರೆ. ಸಿನಿಮಾದ ಪೋಸ್ಟರ್​ನಲ್ಲಿ ಸಹ ‘ಇವನಿಗೆ ಶಾಂತಿ ಸಿಗುವುದು ಹಿಂಸೆಯಲ್ಲೇ’ ಎಂಬ ಸಾಲು ಬರೆಯಲಾಗಿದೆ. ರಕ್ತದ ಮೆತ್ತಿದ ಕೈನ ಚಿತ್ರ ಪೋಸ್ಟರ್​ನಲ್ಲಿದೆ. ನಟ ನಾನಿ, ಶ್ರೀಕಾಂತ್ ಒಡೆಲ ಹಾಗೂ ಮೆಗಾಸ್ಟಾರ್ ಚಿರಂಜೀವಿ ಒಟ್ಟಿಗಿರುವ ಚಿತ್ರವೊಂದನ್ನು ಸಹ ಚಿರಂಜೀವಿ ಹಂಚಿಕೊಂಡಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ನನ್ನ ವಿದೇಶಕ್ಕೆ ಕರೆದುಕೊಂಡು ಹೋದ ಮೊದಲ ವ್ಯಕ್ತಿ ಚಿರಂಜೀವಿ’: ಹಳೆ ನೆನಪು ತೆರೆದಿಟ್ಟ ಅಲ್ಲು ಅರ್ಜುನ್

ಮೆಗಾಸ್ಟಾರ್ ಚಿರಂಜೀವಿ ಪ್ರಸ್ತುತ ‘ವಿಶ್ವಂಭರಮ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಲ್ಲಿಡಿ ವಸಿಷ್ಠ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಅತೀಂದ್ರಿಯ ಶಕ್ತಿಯ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ತ್ರಿಷಾ ನಾಯಕಿ. ಪ್ರಭಾಸ್ ಮಾಲೀಕತ್ವದ ಯುವಿ ಕ್ರಿಯೇಶನ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ. ಸಿನಿಮಾದ ಚಿತ್ರೀಕರಣ ಇನ್ನೇನು ಮುಗಿದಿದ್ದು, ಇದಾದ ಬಳಿಕ ಮಾಸ್ ನಿರ್ದೇಶಕ ಬೊಯಪಾಟಿ ಶ್ರೀನು ನಿರ್ದೇಶನದ ಸಿನಿಮಾ ಒಂದರಲ್ಲಿ ಚಿರಂಜೀವಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕವಷ್ಟೆ ಶ್ರೀಕಾಂತ್ ಒಡೆಲ ನಿರ್ದೇಶನದ ಸಿನಿಮಾ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ